ಬುಧವಾರ, ಮೇ 18, 2022
23 °C

ಸದ್ಯದಲ್ಲೇ ತಿಲಕ್ ವರ್ಮಾ ಭಾರತದ ಪರ ಆಡಲಿದ್ದಾರೆ: ರೋಹಿತ್ ಶ್ಲಾಘನೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಅತಿ ಹೆಚ್ಚು ಪ್ರಭಾವಿ ಎನಿಸಿರುವ ಯುವ ಬ್ಯಾಟರ್ ತಿಲಕ್ ವರ್ಮಾ ಅವರನ್ನು ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಶ್ಲಾಘಿಸಿದ್ದಾರೆ.

ಈ ಉದಯೋನ್ಮುಖ ಪ್ರತಿಭೆ ಸದ್ಯದಲ್ಲೇ ಎಲ್ಲ ಮಾದರಿಯಲ್ಲೂ ಭಾರತಕ್ಕಾಗಿ ಆಡಲಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: 

ಟೀಮ್ ಇಂಡಿಯಾದ ಕಪ್ತಾನ ಕೂಡ ಆಗಿರುವ ರೋಹಿತ್, ಯುವ ಆಟಗಾರನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

'ತಿಲಕ್ ವರ್ಮಾ ಅತ್ಯುತ್ತಮವಾಗಿ ಆಡಿದ್ದಾರೆ. ಐಪಿಎಲ್‌ನಲ್ಲಿ ಮೊದಲ ವರ್ಷವೇ ತಾಳ್ಮೆಯಿಂದ ಆಡುವುದು ಅಷ್ಟು ಸುಲಭವಲ್ಲ. ನನ್ನ ಪ್ರಕಾರ, ಅವರು ಶೀಘ್ರದಲ್ಲೇ ಎಲ್ಲ ಪ್ರಕಾರದಲ್ಲೂ ಟೀಮ್ ಇಂಡಿಯಾ ಪರ ಆಡಲಿದ್ದಾರೆ ಎಂದು ಭಾವಿಸುತ್ತೇನೆ' ಎಂದು ಹೇಳಿದ್ದಾರೆ.

'ಅವರಿಗೆ (ತಿಲಕ್) ತಂತ್ರಗಾರಿಕೆಯಿದೆ. ಸಂಯಮವಿದೆ. ಅತ್ಯುನ್ನತ ಮಟ್ಟದಲ್ಲಿ ಅದುವೇ ಮುಖ್ಯ. ಅಲ್ಲದೆ ಹಲವಾರು ವಿಚಾರಗಳು ಧನಾತ್ಮಕವಾಗಿ ಕಾಣಿಸುತ್ತಿವೆ. ಅವರೊಂದಿಗೆ ಮಾತನಾಡುವಾಗ ಉತ್ತಮವಾಗಿ ಆಡಬೇಕು, ಪಂದ್ಯವನ್ನು ಗೆಲ್ಲಿಸಬೇಕೆಂಬ ಹಂಬಲ ಕಾಣಿಸುತ್ತದೆ. ಅವರು ಸರಿಯಾದ ದಿಶೆಯತ್ತ ಸಾಗುತ್ತಿದ್ದಾರೆ. ಇದೇ ರೀತಿ ಸುಧಾರಣೆ ಮಾಡಿಕೊಂಡು ಮತ್ತಷ್ಟು ಉತ್ತಮ ಆಟಗಾರನಾಗಿ ಬೆಳೆಯಲು ಪ್ರಯತ್ನಿಸಬೇಕು' ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು