ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022: 'ಅವರು ಅಸೂಯೆಪಡುತ್ತಾರೆ' - ಫಫ್ ಡುಪ್ಲೆಸಿ ಕಾಲೆಳೆದ ಗಾಯಕವಾಡ್

ಅಕ್ಷರ ಗಾತ್ರ

ಪುಣೆ: ಐಪಿಎಲ್ 2022 ಟೂರ್ನಿಯಲ್ಲಿ ಭಾನುವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಆರಂಭಿಕರಾದ ಋತುರಾಜ್ ಗಾಯಕವಾಡ್ ಹಾಗೂ ಡೆವೊನ್ ಕಾನ್ವೆ ಮೊದಲ ವಿಕೆಟ್‌ಗೆ 182 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು.

ಇದು ಐಪಿಎಲ್‌ನಲ್ಲಿ ಚೆನ್ನೈ ಪರ ಮೊದಲ ವಿಕೆಟ್‌ಗೆ ದಾಖಲಾದ ಗರಿಷ್ಠ ಜೊತೆಯಾಟವಾಗಿದೆ. ಈ ಮೂಲಕ ಚೆನ್ನೈನ ಮಾಜಿ ಆಟಗಾರರಾದ ಫಫ್ ಡುಪ್ಲೆಸಿ ಹಾಗೂ ಶೇನ್ ವ್ಯಾಟ್ಸನ್ ಹೆಸರಲ್ಲಿದ್ದ ಅಜೇಯ 181 ರನ್ ಜೊತೆಯಾಟದ ದಾಖಲೆಯನ್ನು ಗಾಯಕವಾಡ್-ಕಾನ್ವೆ ಜೋಡಿ ಮುರಿದಿದೆ.

ಈ ಕುರಿತು ಕೇಳಿದಾಗ ಗಾಯಕವಾಡ್ ತನ್ನ ಮಾಜಿ ಜೊತೆಗಾರನ ಕಾಲೆಳೆದಿದ್ದಾರೆ. 'ಫಫ್ ಡುಪ್ಲೆಸಿ ಸ್ವಲ್ಪಮಟ್ಟಿಗೆ ಅಸೂಯೆಪಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಆದರೆ ಪರವಾಗಿಲ್ಲ. ಈ ದಾಖಲೆಯನ್ನು ಸಾಧಿಸಿರುವುದು ನಿಜಕ್ಕೂ ಸಂತಸ ತಂದಿದೆ' ಎಂದು ಪ್ರತಿಕ್ರಿಯಿಸಿದ್ದಾರೆ.

ಗಾಯಕವಾಡ್ ಕೇವಲ ಒಂದು ರನ್ ಅಂತರದಿಂದ ಐಪಿಎಲ್‌ನಲ್ಲಿ ಎರಡನೇ ಶತಕ ಗಳಿಸುವ ಅವಕಾಶದಿಂದ ವಂಚಿತರಾದರು. 57 ಎಸೆತ ಎದುರಿಸಿದ್ದ ಅವರು, ತಲಾ ಆರು ಬೌಂಡರಿ ಹಾಗೂ ಸಿಕ್ಸರ್‌ಗಳಿಂದ 99 ರನ್ ಗಳಿಸಿ ಔಟಾಗಿದ್ದರು.

ಅತ್ತ ಐಪಿಎಲ್‌ನಲ್ಲಿ ಚೊಚ್ಚಲ ಅರ್ಧಶತಕ ಗಳಿಸಿದ್ದ ಕಾನ್ವೆ 55 ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ನೆರವಿನಿಂದ 85 ರನ್ ಗಳಿಸಿ ಔಟಾಗದೆ ಉಳಿದರು.

'ವೈಯಕ್ತಿಕವಾಗಿ ನಾನು ಬ್ಯಾಟಿಂಗ್ ಫಾರ್ಮ್‌ನಲ್ಲಿ ನಂಬಿಕೆಯನ್ನಿಡಲು ಇಷ್ಟಪಡುವುದಿಲ್ಲ. ಹಿಂದಿನ ಪಂದ್ಯದಲ್ಲಿ ನೀವು ಎಷ್ಟೇ ರನ್ ಗಳಿಸಿದರೂ ಹೊಸ ಪಂದ್ಯದಲ್ಲಿ ಶೂನ್ಯದಿಂದಲೇ ಪ್ರಾರಂಭಿಸಬೇಕು. ಹಾಗಾಗಿ ಪ್ರತಿ ಪಂದ್ಯವು ಶೂನ್ಯದಿಂದ ಪ್ರಾರಂಭವಾಗುತ್ತದೆ. ಅದರಲ್ಲಿಯೇ ನಾನು ನಂಬಿಕೆಯನ್ನಿಟ್ಟಿದ್ದು, ಉತ್ತಮ ಆಟವಾಡಲು ನೆರವಾಗಿದೆ' ಎಂದು ಗಾಯಕವಾಡ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT