ಮುಂಬೈ: ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಟ್ವೆಂಟಿ-20 ಕ್ರಿಕೆಟ್ ಮಾದರಿಯಲ್ಲಿ 7,000 ರನ್‌ಗಳ ಮೈಲಿಗಲ್ಲು ಕ್ರಮಿಸಿದ್ದಾರೆ.

ಇದರೊಂದಿಗೆ ಈ ದಾಖಲೆ ಬರೆದ ಭಾರತದ ಮೊದಲ ವಿಕೆಟ್ ಕೀಪರ್ ಬ್ಯಾಟರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಗುರುವಾರ ಮುಂಬೈನ ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಧೋನಿ ಸ್ಮರಣೀಯ ದಾಖಲೆ ಬರೆದರು.

ಇದನ್ನೂ ಓದಿ:IPL 2022 LSG vs CSK: ವಿಂಟೇಜ್ ಉತ್ತಪ್ಪ; 25 ಎಸೆತಗಳಲ್ಲಿ ಫಿಫ್ಟಿ ಸಾಧನೆ

ಈ ಪಂದ್ಯಕ್ಕೂ ಮುನ್ನ ಟಿ20 ಕ್ರಿಕೆಟ್‌ನಲ್ಲಿ 7,000 ರನ್ ತಲುಪಲು ಧೋನಿಗೆ 15 ರನ್‌ಗಳ ಅವಶ್ಯಕತೆಯಿತ್ತು. ಆರು ಎಸೆತಗಳನ್ನು ಎದುರಿಸಿದ ಧೋನಿ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 16 ರನ್ ಗಳಿಸಿ ಔಟಾಗದೆ ಉಳಿದರು.

ಒಟ್ಟಾರೆಯಾಗಿ ಈ ಸಾಧನೆ ಮಾಡಿದ ಭಾರತದ ಆರನೇ ಬ್ಯಾಟರ್ ಎನಿಸಿದರು. ಈ ಮೂಲಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸಾಲಿಗೆ ಸೇರ್ಪಡೆಗೊಂಡರು.

ವಿರಾಟ್ ಕೊಹ್ಲಿ ಭಾರತದ ಪರ 10 ಸಾವಿರಕ್ಕೂ ಹೆಚ್ಚು ಟಿ20 ರನ್ ಗಳಿಸಿದ ಏಕೈಕ ಬ್ಯಾಟರ್ ಆಗಿದ್ದಾರೆ. ಜಾಗತಿಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದು, ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ (14,562) ಮುಂಚೂಣಿಯಲ್ಲಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಭಾರತದ ಗರಿಷ್ಠ ರನ್ ಸರದಾರರು:
ವಿರಾಟ್ ಕೊಹ್ಲಿ: 10,326
ರೋಹಿತ್ ಶರ್ಮಾ: 9,936
ಸುರೇಶ್ ರೈನಾ: 8654
ಶಿಖರ್ ಧವನ್: 8,818
ರಾಬಿನ್ ಉತ್ತಪ್ಪ: 7,120
ಮಹೇಂದ್ರ ಸಿಂಗ್ ಧೋನಿ: 7001

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.