'ನಾಯಕ' ಧೋನಿ-ಕ್ಯಾಚ್ ಕೈಚೆಲ್ಲಿದ ಯುವ ಆಟಗಾರನ ಬೆನ್ನಿಗೆ ನಿಂತ ಮಹಿ

ಮುಂಬೈ: ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಸ್ಥಾನವನ್ನು ಮಹೇಂದ್ರ ಸಿಂಗ್ ಧೋನಿ ತೊರೆದಿರಬಹುದು. ಆದರೆ ನಾಯಕತ್ವದ ಸಹಜ ಗುಣ ಈಗಲೂ ಅಚ್ಚಳಿಯದೇ ಉಳಿದಿದೆ.
ಅದರಲ್ಲೂ ಯುವ ಆಟಗಾರರನ್ನು ಹುರಿದುಂಬಿಸುವಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾರೆ.
ಇದನ್ನೂ ಓದಿ: ನಮಗಿನ್ನೂ ವಯಸ್ಸಾಗಿಲ್ಲ; ಸಿಎಸ್ಕೆ ಆಟಗಾರರ ಮಿಂಚಿನ ಆಟ, ಒಂದು ಕೈಯಲ್ಲಿ ಕ್ಯಾಚ್!
ಮಂಗಳವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿ ಎರಡು ಕ್ಯಾಚ್ ಕೈಚೆಲ್ಲಿದ ಯುವ ಆಟಗಾರನ ಬೆನ್ನಿಗೆ ನಿಲ್ಲುವ ಮೂಲಕ ಮಹಿ ಮಗದೊಮ್ಮೆ ಅಭಿಮಾನಿಗಳ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
Dhoni straight went to Mukesh Choudhary who dropped catch after wicket #CSKvsRCB #IPL2022 pic.twitter.com/08DKl2U7zJ
— Gauπav (@virtual_gaurav) April 12, 2022
ಸಿಎಸ್ಕೆಯ ಮುಕೇಶ್ ಚೌಧರಿ, ಆರ್ಸಿಬಿ ಬ್ಯಾಟರ್ಗಳಾದ ಸುಯಶ್ ಪ್ರಭುದೇವ ಹಾಗೂ ದಿನೇಶ್ ಕಾರ್ತಿಕ್ ಕ್ಯಾಚ್ಗಳನ್ನು ಕೈಚೆಲ್ಲಿದ್ದರು. ಆದರೆ ಪಂದ್ಯದ 15ನೇ ಓವರ್ನಲ್ಲಿ ಮಹೀಶ್ ತೀಕ್ಷಣ ದಾಳಿಯಲ್ಲಿ ಶಹಬಾಜ್ ಅಹ್ಮದ್ ವಿಕೆಟ್ ಪಡೆದ ತಕ್ಷಣ ಚೌಧರಿ ಬಳಿ ತೆರಳಿದ ಧೋನಿ ಧೈರ್ಯ ತುಂಬಿದರು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಏತನ್ಮಧ್ಯೆ ಆರ್ಸಿಬಿ ವಿರುದ್ಧ 23 ರನ್ ಅಂತರದ ಗೆಲುವು ದಾಖಲಿಸಿರುವ ಸಿಎಸ್ಕೆ, ಅಂಕಪಟ್ಟಿಯಲ್ಲಿ ಖಾತೆ ತೆರೆದುಕೊಂಡಿದೆ.
Oh Captian!💛 My Captain!💛@MSDhoni | #MSDhoni pic.twitter.com/BIMzSDDOBg
— Nivetha💛🦁 (@Nivi_Dhoni7) April 12, 2022
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.