ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ಮುಂಬೈನ ಡಾ. ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ಸವಾಲನ್ನು ಎದುರಿಸಲಿದೆ.

ಈ ನಡುವೆ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿರುವ ಆರ್‌ಸಿಬಿ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ಮೊಹಮ್ಮದ್ ಸಿರಾಜ್ ನೇರವಾಗಿ ಮೈದಾನಕ್ಕೆ ತೆರಳಿ ಅಭ್ಯಾಸ ನಡೆಸಿದ್ದಾರೆ.

ಈ ಸಂಬಂಧ ಆರ್‌ಸಿಬಿ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿಡಿಯೊ ಹಂಚಿದೆ.

ಇದನ್ನೂ ಓದಿ:IPL Records: ಐಪಿಎಲ್ ಸಾರ್ವಕಾಲಿಕ ದಾಖಲೆಗಳ ಪಟ್ಟಿ

ಬಳಿಕ ಪ್ರತಿಕ್ರಿಯಿಸಿದ ಸಿರಾಜ್, ಆರ್‌ಸಿಬಿ ಕುಟುಂಬವನ್ನು ಸೇರಲು ತುಂಬಾನೇ ಉತ್ಸಾಹಿತನಾಗಿದ್ದೇನೆ. ರಾತ್ರಿಯಿಡಿ ನಿದ್ದೆಯೂ ಬಂದಿಲ್ಲ. ಏಕೆಂದರೆ ತುಂಬಾ ದಿನಗಳ ಬಳಿಕ ಆರ್‌ಸಿಬಿ ಕುಟುಂಬದೊಂದಿಗೆ ಸೇರಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ನಾನು ಮೊದಲು ನನ್ನ ಬೌಲಿಂಗ್ ಲಯ ಕಂಡುಕೊಳ್ಳಲು ಬಯಸುತ್ತೇನೆ. ಏಕೆಂದರೆ ಕ್ವಾರಂಟೈನ್‌ಮುಗಿಸಿ ಬಂದ ತಕ್ಷಣಹೆಚ್ಚು ಶ್ರಮ ವಹಿಸಿ ಬೌಲಿಂಗ್ ಮಾಡುವುದು ಕಷ್ಟಕರ. ಹಾಗಾಗಿ ಲಯ ಕಂಡಕೊಳ್ಳುವತ್ತ ಗಮನ ಹರಿಸಿದ್ದೇನೆ ಎಂದು ಹೇಳಿದ್ದಾರೆ.

ವಿರಾಟ್ ಕೊಹ್ಲಿ ಅವರಿಂದ ತೆರವಾಗಿರುವ ನಾಯಕ ಸ್ಥಾನಕ್ಕೆ ಫಫ್ ಡು ಪ್ಲೆಸಿ ಅವರನ್ನು ಆರ್‌ಸಿಬಿ ನೇಮಕಗೊಳಿಸಿತ್ತು. ಅಲ್ಲದೆ ಚೊಚ್ಚಲ ಟ್ರೋಫಿ ಗೆಲ್ಲುವ ಇರಾದೆಯನ್ನು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.