ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2022ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಅದ್ಭುತ ಕ್ಯಾಚ್ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.

ಈ ಕ್ಯಾಚ್ ಅನ್ನು ನೆಟ್ಟಿಗರು ಪಾಪ್ ಮ್ಯೂಸಿಕ್ ದಂತಕಥೆ ಮೈಕಲ್ ಜಾಕ್ಸನ್ ಅವರ ಡ್ಯಾನ್ಸ್ ಶೈಲಿಗೆ ಹೋಲಿಸಿದ್ದಾರೆ.

ಐಪಿಎಲ್ 2022 ಟೂರ್ನಿಯಲ್ಲಿ ಗುರುವಾರ ಮುಂಬೈನ ವಾಂಖೆಡೆ ಮೈದಾನದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಮ್ಯಾಕ್ಸ್‌ವೆಲ್, ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.

ಗುಜರಾತ್ ಇನ್ನಿಂಗ್ಸ್‌ನ 3ನೇ ಓವರ್‌ನಲ್ಲಿ ಜೋಶ್ ಹ್ಯಾಜಲ್‌ವುಡ್ ಅವರ ಔಟ್‌ಸ್ವಿಂಗರ್ ಎಸೆತವು ಶುಭಮನ್ ಗಿಲ್ ಅವರ ಬ್ಯಾಟ್‌ಗೆ ಸವರಿ ಥರ್ಡ್ ಮ್ಯಾನ್‌ನತ್ತ ಚಲಿಸಿತ್ತು. ಈ ವೇಳೆ ಅಲ್ಲೇ ಸ್ಲಿಪ್‌ನಲ್ಲಿ ಕ್ಷೇತ್ರರಕ್ಷಣೆ ಮಾಡುತ್ತಿದ್ದ ಮ್ಯಾಕ್ಸ್‌ವೆಲ್ ತನ್ನ ಬಲಭಾಗದತ್ತ ಡೈವ್ ಹೊಡೆದು ಒಂದೇ ಕೈಯಲ್ಲಿ ಕ್ಯಾಚ್ ಪಡೆದು ಮೋಡಿ ಮಾಡಿದರು.

ಪರಿಣಾಮ 1 ರನ್ ಗಳಿಸಿ ಔಟ್ ಆದ ಗಿಲ್, ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು.

ಈ ವೇಳೆ ಮ್ಯಾಕ್ಸ್‌ವೆಲ್ ಅವರನ್ನು ತಬ್ಬಿಕೊಂಡ ವಿರಾಟ್ ಕೊಹ್ಲಿ ಸಂಭ್ರಮವನ್ನು ಆಚರಿಸಿದರು. ವಿರಾಟ್ ರಿಯಾಕ್ಷನ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.