ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022: ಮೂರನೇ ಸಲ ವಿರಾಟ್ ಕೊಹ್ಲಿ 'ಗೋಲ್ಡನ್ ಡಕ್'

ಅಕ್ಷರ ಗಾತ್ರ

ಮುಂಬೈ: ಐಪಿಎಲ್ 2022 ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟರ್ ವಿರಾಟ್ ಕೊಹ್ಲಿ ಮೂರನೇ ಸಲ ಮೊದಲ ಎಸೆತದಲ್ಲೇ ಶೂನ್ಯಕ್ಕೆ ಔಟ್ (ಗೋಲ್ಡನ್ ಡಕ್) ಆಗಿದ್ದಾರೆ.

ಭಾನುವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಇನ್ನಿಂಗ್ಸ್ ಆರಂಭಿಸಿದ್ದ ಕೊಹ್ಲಿ, ಜಗದೀಶ ಸುಚಿತ್ ಅವರ ಮೊದಲ ಎಸೆತದಲ್ಲೇ ಕೇನ್ ವಿಲಿಯಮ್ಸನ್‌ಗೆ ಕ್ಯಾಚ್ ನೀಡಿ ಪೆವಿಲಿಯನ್‌ಗೆ ಮರಳಿದರು.

ಈ ಮೂಲಕ ಮಗದೊಮ್ಮೆ ವೈಫಲ್ಯ ಅನುಭವಿಸಿದರು. ಏಪ್ರಿಲ್ 23ರಂದು ಹೈದರಾಬಾದ್ ವಿರುದ್ಧವೇ ನಡೆದ ಪಂದ್ಯದಲ್ಲಿ ಕೊಹ್ಲಿ ಗೋಲ್ಡನ್ ಡಕ್‌ ಔಟ್ ಆಗಿದ್ದರು. ಹಾಗೆಯೇ ಲಖನೌ ಸೂಪರ್ ಜೈಂಟ್ಸ್ ವಿರುದ್ಧವೂ ಖಾತೆ ತೆರೆಯುವಲ್ಲಿ ವಿಫಲರಾಗಿದ್ದರು.

ಒಟ್ಟಾರೆಯಾಗಿ ಐಪಿಎಲ್‌ನಲ್ಲಿ ಒಟ್ಟುಆರನೇ ಬಾರಿಗೆ ಗೋಲ್ಡನ್ ಡಕ್‌ ಔಟ್ ಆಗಿದ್ದಾರೆ.

ವಿರಾಟ್ ಕೊಹ್ಲಿ 'ಗೋಲ್ಡನ್ ಡಕ್':
2008: ಮುಂಬೈ ವಿರುದ್ಧ
2014: ಪಂಜಾಬ್ ವಿರುದ್ಧ
2017: ಕೋಲ್ಕತ್ತ ವಿರುದ್ಧ
2022: ಲಖನೌ ವಿರುದ್ಧ
2022: ಹೈದರಾಬಾದ್ ವಿರುದ್ಧ
2022: ಹೈದರಾಬಾದ್ ವಿರುದ್ಧ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT