ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಪಿನ್ನರ್ ವನಿಂದು ಹಸರಂಗ ಚೊಚ್ಚಲ ಐದು ವಿಕೆಟ್ ಸಾಧನೆ ಮಾಡಿದ್ದಾರೆ.

ಐಪಿಎಲ್ 2022 ಟೂರ್ನಿಯಲ್ಲಿ ಆರ್‌ಸಿಬಿ ಪಾಲಿಗೆ 'ಟ್ರಂಪ್ ಕಾರ್ಡ್' ಎನಿಸಿರುವ ಶ್ರೀಲಂಕಾ ಮೂಲದ ಹಸರಂಗ, ಐದು ವಿಕೆಟ್ ಪಡೆಯುವ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

ಇದನ್ನೂ ಓದಿ:IPL 2022: ಆಗ 68ಕ್ಕೆ ಆಲೌಟ್, ಈಗ 67 ರನ್ ಜಯ; ಸೇಡು ತೀರಿಸಿಕೊಂಡ ಆರ್‌ಸಿಬಿ

ಮೊದಲು ನಾಯಕ ಫಫ್ ಡುಪ್ಲೆಸಿ ಬಿರುಸಿನ ಅರ್ಧಶತಕ (73*) ಮತ್ತು ರಜತ್ ಪಾಟಿದಾರ್ (48), ಗ್ಲೆನ್ ಮ್ಯಾಕ್ಸ್‌ವೆಲ್ (33) ಹಾಗೂ ದಿನೇಶ್ ಕಾರ್ತಿಕ್ (30*) ಉಪಯುಕ್ತ ಬ್ಯಾಟಿಂಗ್ ನರೆವಿನಿಂದ ಆರ್‌ಸಿಬಿ ಮೂರು ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತ್ತು.

ಬಳಿಕ ಹಸರಂಗ ಜಾದೂ ಮಾಡಿದರು. ಪರಿಣಾಮ ಹೈದರಾಬಾದ್ 19.2 ಓವರ್‌ಗಳಲ್ಲಿ 125 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಏಡನ್ ಮಾರ್ಕರಮ್, ನಿಕೋಲಸ್ ಪೂರನ್, ಜಗದೀಶ ಸುಚಿತ್, ಶಶಾಂಕ್ ಸಿಂಗ್ ಹಾಗೂ ಉಮ್ರಾನ್ ಮಲಿಕ್ ವಿಕೆಟ್‌ಗಳನ್ನು ಪಡೆದು ಹಸರಂಗ ಮೋಡಿ ಮಾಡಿದರು.

ನಾಲ್ಕು ಓವರ್‌ಗಳಲ್ಲಿ ಒಂದು ಮೇಡನ್ ಸೇರಿದಂತೆ 18 ರನ್ ಮಾತ್ರ ಬಿಟ್ಟುಕೊಟ್ಟ ಹಸರಂಗ ಐದು ವಿಕೆಟ್ ಕಿತ್ತು ಮಿಂಚಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.