ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022: ಹಸರಂಗ ವಿಶಿಷ್ಟ ಶೈಲಿಯ ಸಂಭ್ರಮದ ಹಿಂದಿನ ಗುಟ್ಟೇನು?

Last Updated 31 ಮಾರ್ಚ್ 2022, 10:22 IST
ಅಕ್ಷರ ಗಾತ್ರ

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಅಂಕಪಟ್ಟಿಯಲ್ಲಿ ಖಾತೆ ತೆರೆದುಕೂಂಡಿದೆ.

ಬುಧವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆರ್‌ಸಿಬಿ ಮೂರು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿತ್ತು.

ಕೇವಲ 20 ರನ್ ತೆತ್ತು ನಾಲ್ಕು ವಿಕೆಟ್ ಕಬಳಿಸಿದ ಸ್ಪಿನ್ನರ್ ವನಿಂದು ಹಸರಂಗ, ಕೆಕೆಆರ್ ಓಟಕ್ಕೆ ಕಡಿವಾಣ ಹಾಕಿದ್ದರು. ಅಲ್ಲದೆ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್, ಸುನಿಲ್ ನಾರಾಯಣ್, ವಿಕೆಟ್ ಕೀಪರ್ ಶೆಲ್ಡರ್ ಜ್ಯಾಕ್ಸನ್ ಹಾಗೂ ಟಿಮ್ ಸೌಥಿ ವಿಕೆಟ್ ಪಡೆಯುವಲ್ಲಿ ಹಸರಂಗ ಯಶಸ್ವಿಯಾದರು.

ವಿಕೆಟ್ ಪಡೆದಾಗ ಹಸರಂಗ ವಿಶಿಷ್ಟ ಶೈಲಿಯಲ್ಲಿ ಸಂಭ್ರಮಿಸುವುದು ಕಂಡುಬಂದಿತ್ತು. ಈ ಕುರಿತು ಬಳಿಕ ವಿವರಿಸಿರುವ ಹಸರಂಗ, 'ನೇಮರ್ ನನ್ನ ನೆಚ್ಚಿನ ಫುಟ್ಬಾಲ್ ತಾರೆ. ಹಾಗಾಗಿ ಅವರ ಸಂಭ್ರಮದ ಶೈಲಿಯನ್ನು ಅನುಕರಿಸಿದ್ದೇನೆ' ಎಂದು ಹೇಳಿದ್ದಾರೆ.

'ನಾನು ಮೈದಾನಕ್ಕೆ ಇಳಿದಾಗ ಒತ್ತಡ ರಹಿತವಾಗಿ ಆಡಲು ಇಷ್ಟಪಡುತ್ತೇನೆ. ಹಾಗಾಗಿ ಯಶಸ್ಸು ದೊರಕಿದೆ' ಎಂದು ಹೇಳಿದ್ದಾರೆ.

ಚಾಹಲ್ ಗುಣಗಾನ...
ಆರ್‌ಸಿಬಿ ಮಾಜಿ ಆಟಗಾರ ಯಜುವೇಂದ್ರ ಚಾಹಲ್ ಕೂಡ ಹಸರಂಗ ಅವರನ್ನು 'ಚಾಂಪಿಯನ್' ಎಂದು ಕರೆಯುವ ಮೂಲಕ ಪ್ರಸಂಶಿಸಿದ್ದಾರೆ.

ಐಪಿಎಲ್ ಮೆಗಾ ಹರಾಜಿನಲ್ಲಿ ₹10.75 ಕೋಟಿಗೆ ಹಸರಂಗ ಅವರನ್ನು ಆರ್‌ಸಿಬಿ ಖರೀದಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT