ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL–2023 | ಟಾಸ್ ವೇಳೆ ಸಹ ಆಟಗಾರನ ಹೆಸರನ್ನೇ ಮರೆತ ಪಂಜಾಬ್ ನಾಯಕ ಶಿಖರ್ ಧವನ್

Last Updated 1 ಏಪ್ರಿಲ್ 2023, 13:21 IST
ಅಕ್ಷರ ಗಾತ್ರ

ಮೊಹಾಲಿ: ಶಿಖರ್‌ ಧವನ್‌ ನಾಯಕತ್ವದ ಪಂಜಾಬ್‌ ಕಿಂಗ್ಸ್‌ ಹಾಗೂ ನಿತೀಶ್ ರಾಣಾ ನೇತೃತ್ವದ ಕೋಲ್ಕತ್ತ ನೈಟ್‌ ರೈಡರ್ಸ್‌, ಇಂದು ಮೊಹಾಲಿಯಲ್ಲಿ ನಡೆಯುತ್ತಿರುವ ಐಪಿಎಲ್‌ ಪಂದ್ಯದಲ್ಲಿ ಮುಖಾಮುಖಿಯಾಗಿವೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದಿರುವ ಪಂಜಾಬ್‌, ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 191 ರನ್‌ ಕಲೆಹಾಕಿದೆ.

ಧವನ್‌ ಅವರು ಇಂದಿನ ಪಂದ್ಯದಲ್ಲಿ ಆಡುವ ಆಟಗಾರನ ಹೆಸರನ್ನೇ ಮರೆತ ಪ್ರಸಂಗ ಟಾಸ್‌ ವೇಳೆ ನಡೆಯಿತು. ಕೋಲ್ಕತ್ತ ವಿರುದ್ಧ ಕಣಕ್ಕಿಳಿಯಲಿರುವ ವಿದೇಶಿ ಆಟಗಾರರ ಹೆಸರುಗಳನ್ನು ಹೇಳುವಾಗ ಅವರು, ಜಿಂಬಾಬ್ವೆಯ ಸಿಕಂದರ್‌ ರಾಜಾ ಅವರ ಹೆಸರನ್ನು ಮರೆತು ತಡವರಿಸಿದರು. ನೆನಪಿಸಿಕೊಳ್ಳಲು ಪ್ರಯತ್ನಿಸಿದರೂ, ಸಾಧ್ಯವಾಗಲಿಲ್ಲ.

ಸ್ಯಾಮ್‌ ಕರನ್, ಭಾನುಕ ರಾಜಪಕ್ಸ, ನಾಥನ್‌ ಎಲ್ಲಿಸ್‌ ಹಾಗೂ ಸಿಕಂದರ್‌ ರಾಜಾ ಅವರು ಕಿಂಗ್ಸ್ ಪರ ಕಣಕ್ಕಿಳಿದಿದ್ದಾರೆ.

ಟಾಸ್‌ ಗೆದ್ದ ಕೋಲ್ಕತ್ತ ನಾಯಕ ರಾಣಾ ಬೌಲಿಂಗ್‌ ಆಯ್ಕೆ ಮಾಡಿಕೊಂಡರು.‌

ಬಳಿಕ ಮಾತನಾಡಿದ ಧವನ್‌, 'ಟಾಸ್‌ ಗೆದ್ದಿದ್ದರೆ, ನಾವು ಫೀಲ್ಡಿಂಗ್‌ ಮಾಡುತ್ತಿದ್ದೆವು. ನಮ್ಮ ತಂಡ ಸಮತೋಲನದಿಂದ ಕೂಡಿದ್ದು, ಉತ್ತಮ ಆಟವಾಡುವ ವಿಶ್ವಾಸದಲ್ಲಿದ್ದೇವೆ. ಚೆನ್ನಾಗಿ ಸಿದ್ಧತೆ ನಡೆಸಿದ್ದೇವೆ. ನಮಗಿದು ಉತ್ತಮ ಟೂರ್ನಿಯಾಗಲಿದೆ. ಟ್ರೋಫಿ ಗೆಲ್ಲುವ ಉತ್ಸಾಹದಲ್ಲಿದ್ದೇವೆ. ಮುಂಚೂಣಿಯಲ್ಲಿ ನಿಂತು ತಂಡ ಮುನ್ನಡೆಸಲು ಎದುರು ನೋಡುತ್ತಿದ್ದೇನೆ. ಈ ಪಂದ್ಯದಲ್ಲಿ ವಿದೇಶಿ ಆಟಗಾರರಾಗಿ ಭಾನುಕ, ನಾಥನ್‌ ಎಲ್ಲಿಸ್‌ ಮತ್ತು ಸ್ಯಾಮ್‌ ಕರನ್, ನಾಲ್ಕನೇ ಆಟಗಾರ ಹೆಸರು ನೆನಪಿಲ್ಲ' ಎಂದು ಹೇಳಿದ್ದಾರೆ.

ಆಡುವ ಹನ್ನೊಂದರ ಬಳಗ ಪ್ರಕಟಗೊಂಡ ನಂತರವೇ, ಧವನ್‌ ಮರೆತದ್ದು ಆಲ್ರೌಂಡರ್‌ ಸಿಕಂದರ್‌ ಹೆಸರು ಎಂಬುದು ಸ್ಪಷ್ಟವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT