ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2023: ಆರ್‌ಸಿಬಿ ತಂಡದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

Last Updated 17 ಫೆಬ್ರವರಿ 2023, 14:33 IST
ಅಕ್ಷರ ಗಾತ್ರ

ಬೆಂಗಳೂರು: ಬಹುನಿರೀಕ್ಷಿತ, 2023ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆಗೊಳಿಸಿದೆ.

ಮಾರ್ಚ್ 31ರಂದು ಆರಂಭವಾಗಲಿರುವ ಟೂರ್ನಿಯು ಮೇ 28ರವರೆಗೆ ನಡೆಯಲಿದೆ. ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಅಹಮದಾಬಾದ್‌ನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ಸವಾಲನ್ನು ಎದುರಿಸಲಿದೆ.

ಹಿಂದಿನಂತೆ ಹೋಮ್ ಹಾಗೂ ಎವೇ ಮಾದರಿಯಲ್ಲಿ ಟೂರ್ನಿ ನಡೆಯಲಿದ್ದು, ಪ್ರತಿ ತಂಡಗಳು ತಲಾ ಏಳು ಹೋಮ್ ಹಾಗೂ ಎವೇ ಪಂದ್ಯಗಳನ್ನು ಆಡಲಿವೆ.

ಆರ್‌ಸಿಬಿಗೆ ಮೊದಲ ಪಂದ್ಯದಲ್ಲೇ ಬಲಿಷ್ಠ ಮುಂಬೈ ಸವಾಲು...
ಎಪ್ರಿಲ್ 2ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ತನ್ನ ಮೊದಲ ಹಣಾಹಣಿಯಲ್ಲಿ ರಾಯಲ್ ಚಾಲೆಂಜಲ್ಸ್ ಬೆಂಗಳೂರು ತಂಡವು ಮುಂಬೈ ಇಂಡಿಯನ್ಸ್ ಸವಾಲನ್ನು ಎದುರಿಸಲಿದೆ.

ಭಾರತೀಯ ಕಾಲಮಾನ ಸಂಜೆಯ ಪಂದ್ಯಗಳು 3.30 ಮತ್ತು ರಾತ್ರಿಯ ಪಂದ್ಯಗಳು 7.30ಕ್ಕೆ ಸರಿಯಾಗಿ ಆರಂಭವಾಗಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಪೂರ್ಣ ವೇಳಾಪಟ್ಟಿ ಇಂತಿದೆ:

ದಿನಾಂಕ ಆರ್‌ಸಿಬಿ ತಂಡದ ಎದುರಾಳಿ ತಾಣ ಸಮಯ
ಭಾನುವಾರ, 02 ಎಪ್ರಿಲ್ 2023 ಮುಂಬೈ ಇಂಡಿಯನ್ಸ್ ಬೆಂಗಳೂರು ರಾತ್ರಿ 7.30
ಗುರುವಾರ, 06 ಎಪ್ರಿಲ್ 2023 ಕೋಲ್ಕತ್ತ ನೈಟ್ ರೈಡರ್ಸ್ ಕೋಲ್ಕತ್ತ ರಾತ್ರಿ 7.30
ಸೋಮವಾರ, 10 ಎಪ್ರಿಲ್ 2023 ಲಖನೌ ಸೂಪರ್ ಜೈಂಟ್ಸ್ ಬೆಂಗಳೂರು ರಾತ್ರಿ 7.30
ಶನಿವಾರ, 15 ಎಪ್ರಿಲ್ 2023 ಡೆಲ್ಲಿ ಕಾಪಿಟಲ್ಸ್ ಬೆಂಗಳೂರು ಸಂಜೆ 3.30
ಸೋಮವಾರ, 17 ಎಪ್ರಿಲ್ 2023 ಚೆನ್ನೈ ಸೂಪರ್ ಕಿಂಗ್ಸ್ ಬೆಂಗಳೂರು ರಾತ್ರಿ 7.30
ಗುರುವಾರ, 20 ಎಪ್ರಿಲ್ 2023 ಪಂಜಾಬ್ ಕಿಂಗ್ಸ್ ಮೊಹಾಲಿ ಸಂಜೆ 3.30
ಭಾನುವಾರ, 23 ಎಪ್ರಿಲ್ 2023 ರಾಜಸ್ಥಾನ್ ರಾಯಲ್ಸ್ ಬೆಂಗಳೂರು ಸಂಜೆ 3.30
ಬುಧವಾರ , 26 ಎಪ್ರಿಲ್ 2023 ಕೋಲ್ಕತ್ತ ನೈಟ್ ರೈಡರ್ಸ್ ಬೆಂಗಳೂರು ರಾತ್ರಿ 7.30
ಸೋಮವಾರ, 01 ಮೇ 2023 ಲಖನೌ ಸೂಪರ್ ಜೈಂಟ್ಸ್ ಲಖನೌ ರಾತ್ರಿ 7.30
ಶನಿವಾರ, 06 ಮೇ 2023 ಡೆಲ್ಲಿ ಕಾಪಿಟಲ್ಸ್ ಡೆಲ್ಲಿ ರಾತ್ರಿ 7.30
ಮಂಗಳವಾರ, 09 ಮೇ 2023 ಮುಂಬೈ ಇಂಡಿಯನ್ಸ್ ಮುಂಬೈ ರಾತ್ರಿ 7.30
ಭಾನುವಾರ, 14 ಮೇ 2023 ರಾಜಸ್ಥಾನ್ ರಾಯಲ್ಸ್ ಜೈಪುರ ಸಂಜೆ 3.30
ಗುರುವಾರ, 18 ಮೇ 2023 ಸನ್‌ರೈಸರ್ಸ್ ಹೈದರಾಬಾದ್ ಹೈದರಾಬಾದ್ ರಾತ್ರಿ 7.30
ಭಾನುವಾರ, 21 ಮೇ 2023 ಗುಜರಾತ್ ಟೈಟನ್ಸ್ ಬೆಂಗಳೂರು ರಾತ್ರಿ 7.30

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT