ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 | ವಾರ್ನರ್–ಪಂತ್ ಅರ್ಧಶತಕ; ಚೆನ್ನೈಗೆ 192 ಗುರಿ ನೀಡಿದ ಡೆಲ್ಲಿ

Published 31 ಮಾರ್ಚ್ 2024, 16:03 IST
Last Updated 31 ಮಾರ್ಚ್ 2024, 16:03 IST
ಅಕ್ಷರ ಗಾತ್ರ

ವಿಶಾಖಪಟ್ಟಣ: ಆರಂಭಿಕ ಬ್ಯಾಟರ್ ಡೇವಿಡ್‌ ವಾರ್ನರ್‌ ಹಾಗೂ ನಾಯಕ ರಿಷಭ್‌ ಪಂತ್‌ ಗಳಿಸಿದ ಆಕರ್ಷಕ ಅರ್ಧಶತಕಗಳ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ, ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಸವಾಲಿನ ಗುರಿ ನೀಡಿದೆ.

ಇಲ್ಲಿನ ವಿಸಿಎ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ, ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 191 ರನ್‌ ಗಳಿಸಿದೆ.

ಪಂತ್‌ ಪಡೆಗೆ ವಾರ್ನರ್‌ ಹಾಗೂ ಪೃಥ್ವಿ ಶಾ, ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್‌ ಪಾಲುದಾರಿಕೆಯಲ್ಲಿ 9.3 ಓವರ್‌ಗಳಲ್ಲಿ 93 ರನ್ ಗಳಿಸಿದ ಇವರಿಬ್ಬರು, ಕೇವಲ 10 ರನ್ ಅಂತರದಲ್ಲಿ ಪೆವಿಲಿಯನ್‌ ಸೇರಿಕೊಂಡರು. ಶಾ, 27 ಎಸೆತಗಳಲ್ಲಿ 43 ರನ್ ಗಳಿಸಿದರೆ, ವಾರ್ನರ್‌ 35 ಎಸೆತಗಳಲ್ಲಿ 52 ರನ್ ಬಾರಿಸಿದರು.

ನಂತರ ಬಂದ ಪಂತ್‌, ಆರಂಭದಲ್ಲಿ ರಕ್ಷಣಾತ್ಮಕ ಆಟದ ಮೊರೆಹೋದರು. ಆದರೆ, ಕೊನೇ ಹಂತದಲ್ಲಿ ಏಕಾಏಕಿ ರನ್‌ ಗತಿ ಹೆಚ್ಚಿಸಿದರು. 17 ಓವರ್‌ಗಳ ಅಂತ್ಯಕ್ಕೆ 23 ಎಸೆತಗಳಲ್ಲಿ 23 ರನ್‌ ಗಳಿಸಿ ಆಡುತ್ತಿದ್ದ ಅವರು, ನಂತರ ಎದುರಿಸಿದ 9 ಎಸೆತಗಳಲ್ಲಿ 28 ರನ್ ಗಳಿಸಿ ಔಟಾದರು. ಅವರ ಇನಿಂಗ್ಸ್‌ನಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್‌ ಇದ್ದವು.

ಪಂತ್ ಆಟದ ಬಲದಿಂದ ಡೆಲ್ಲಿ ಪಡೆ ಕೊನೆಯ ಮೂರು ಓವರ್‌ಗಳಲ್ಲಿ 43 ರನ್ ಗಳಿಸಿಕೊಂಡಿತು.

ಚೆನ್ನೈ ಪರ ಮಥೀಶ ಪಥಿರಾಣ ಮೂರು ವಿಕೆಟ್‌ ಉರುಳಿಸಿದರೆ, ಮುಸ್ತಫಿಜುರ್ ರಹಮಾನ್‌ ಹಾಗೂ ರವೀಂದ್ರ ಜಡೇಜ ಒಂದೊಂದು ವಿಕೆಟ್‌ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT