ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024: DC vs KKR; ಡೆಲ್ಲಿಗೆ 273 ರನ್‌ಗಳ ಬೃಹತ್ ಗುರಿ ನೀಡಿದ ಕೆಕೆಆರ್

Published 3 ಏಪ್ರಿಲ್ 2024, 13:36 IST
Last Updated 3 ಏಪ್ರಿಲ್ 2024, 13:36 IST
ಅಕ್ಷರ ಗಾತ್ರ

ವಿಶಾಖಪಟ್ಟಣ: ಇಲ್ಲಿ ನಡೆಯುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡ 7 ವಿಕೆಟ್ ಕಳೆದುಕೊಂಡು 272 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿದೆ. ಇದು ಐಪಿಎಲ್ ಇತಿಹಾಸದಲ್ಲೇ 2ನೇ ಅತ್ಯಧಿಕ ಮೊತ್ತವಾಗಿದೆ.

ಇತ್ತೀಚೆಗೆ, ಮುಂಬೈ ಇಂಡಿಯನ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ತಂಡ ಸಿಡಿಸಿದ 277 ರನ್ ಈವರೆಗೆ ಒಂದು ತಂಡ ಗಳಿಸಿದ ಅತ್ಯಧಿಕ ಮೊತ್ತವಾಗಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಕೋಲ್ಕತ್ತ ಬ್ಯಾಟರ್‌ಗಳು, ಡೆಲ್ಲಿ ಬೌಲಿಂಗ್ ಪಡೆಯನ್ನು ಧೂಳಿಪಟ ಮಾಡಿದರು.

39 ಎಸೆತಗಳಲ್ಲಿ 85 ರನ್ ಸಿಡಿಸಿದ ಆರಂಭಿಕ ಬ್ಯಾಟರ್ ಸುನಿಲ್ ನಾರಾಯಣ್ ಭದ್ರ ಬುನಾದಿ ಹಾಕಿಕೊಟ್ಟರು. ಇವರ ಈ ಅಬ್ಬರದ ಆಟದಲ್ಲಿ 7 ಬೌಂಡರಿ ಮತ್ತು 7 ಅಮೋಘ ಸಿಕ್ಸರ್‌ಗಳಿದ್ದವು.

ಬಳಿಕ, ಆಂಗ್‌ಕ್ರಿಶ್ ರಘುವಂಶಿ 27 ಎಸೆತಗಳಲ್ಲಿ 54 ರನ್ ಸಿಡಿಸಿದರು. ಇದರಲ್ಲಿ 5 ಬೌಂಡರಿ, 3 ಸಿಕ್ಸರ್‌ಗಳಿದ್ದವು. ನಂತರ ವೆಸ್ಟ್ ಇಂಡೀಸ್ ದೈತ್ಯ ಬ್ಯಾಟರ್ ಆ್ಯಂಡ್ರೆ ರಸೆಲ್ 19 ಎಸೆತಗಳಲ್ಲಿ 41 ರನ್ ಸಿಡಿಸುವ ಮೂಲಕ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ದರು.

ಉಳಿದಂತೆ ಫಿಲ್ ಸಾಲ್ಟ್ 18, ರಿಂಕು ಸಿಂಗ್ 26 ಮತ್ತು ನಾಯಕ ಶ್ರೇಯಸ್ ಅಯ್ಯರ್ 18 ರನ್ ಸಿಡಿಸಿದರು. ಅಂತಿಮವಾಗಿ 20 ಓವರ್ ಅಂತ್ಯಕ್ಕೆ ಕೋಲ್ಕತ್ತ 7 ವಿಕೆಟ್ ಕಳೆದುಕೊಂಡು 272 ರನ್ ಕಲೆ ಹಾಕಿತು.

ಡೆಲ್ಲಿ ಪರ ಇಶಾಂತ್ ಶರ್ಮಾ 2 ಮತ್ತು ಎನ್‌ರಿಚ್ ನಾಕಿಯಾ 3 ವಿಕೆಟ್ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT