ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 RCB vs KKR | ಹೆಚ್ಚು ಸಿಕ್ಸರ್‌: ಗೇಲ್ ದಾಖಲೆ ಮುರಿದ ಕೊಹ್ಲಿ

Published 30 ಮಾರ್ಚ್ 2024, 4:42 IST
Last Updated 30 ಮಾರ್ಚ್ 2024, 4:42 IST
ಅಕ್ಷರ ಗಾತ್ರ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧದ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡ 7 ವಿಕೆಟ್‌ಗಳ ಜಯ ದಾಖಲಿಸಿತು.

ಪಂದ್ಯದ ವಿಶೇಷತೆಗಳು :

ಗೇಲ್ ದಾಖಲೆ ಮುರಿದ ಕೊಹ್ಲಿ:
ಆರ್‌ಸಿಬಿ ತಂಡದ ಪರವಾಗಿ ಅತಿ ಹೆಚ್ಚು ಸಿಕ್ಸರ್‌ ಗಳಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ವಿರಾಟ್ ತಮ್ಮದಾಗಿಸಿಕೊಂಡರು. ಅವರು ಒಟ್ಟು 241 ಸಿಕ್ಸರ್ ದಾಖಲಿಸಿದರು. ಇದರೊಂದಿಗೆ ಅವರು ಕ್ರಿಸ್ ಗೇಲ್ (239) ಹಾಗೂ ಎಬಿ ಡಿವಿಲಿಯರ್ಸ್ (238) ಅವರನ್ನು ಹಿಂದಿಕ್ಕಿದರು.

ಸುನಿಲ್‌ 500ನೇ ಪಂದ್ಯ: ಟಿ20 ಕ್ರಿಕೆಟ್‌ನಲ್ಲಿ ವೆಸ್ಟ್ ಇಂಡೀಸ್ ಆಲ್‌ರೌಂಡರ್ ಸುನಿಲ್ ನಾರಾಯಣ್ ಅವರು 500 ಪಂದ್ಯಗಳನ್ನಾಡಿದ ಸಾಧನೆ ಮಾಡಿದರು. ಅಂತರರಾಷ್ಟ್ರೀಯ, ದೇಶಿ ಮತ್ತು ಫ್ರ್ಯಾಂಚೈಸಿ ಲೀಗ್‌ಗಳಲ್ಲಿ ಅವರು ಆಡಿದ್ದಾರೆ. ಅವರದ್ದೇ ದೇಶದ ಕೀರನ್ ಪೊಲಾರ್ಡ್ (660) ಮೊದಲ ಸ್ಥಾನದಲ್ಲಿದ್ಧಾರೆ.

ಗೌತಿ–ವಿರಾಟ್ ಭೇಟಿ: ಇನಿಂಗ್ಸ್‌ನ ಎರಡನೇ ಸ್ಟ್ರ್ಯಾಜಿಕ್ ಟೈಮ್‌ಔಟ್‌ ಸಂದರ್ಭ ದಲ್ಲಿ ಮೈದಾನದೊಳಕ್ಕೆ ಬಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ ಅವರೊಂದಿಗೆ ವಿರಾಟ್ ಕೊಹ್ಲಿ ಮಾತನಾಡಿದರು. ಇಬ್ಬರು ಪರಸ್ಪರ ಆಲಂಗಿಸಿಕೊಂಡು ನಗುನಗುತ್ತ ಮಾತುಕತೆ ನಡೆಸಿದರು.

ಹೋದ ಬಾರಿಯ ಐಪಿಎಲ್‌ನಲ್ಲಿ ಅವರಿಬ್ಬರ ನಡುವೆ ಪಂದ್ಯವೊಂದರಲ್ಲಿ ಮಾತಿನ ಚಕಮಕಿಯಾಗಿದ್ದು ಸುದ್ದಿಯಾಗಿತ್ತು.

ಮಿಚೆಲ್ ಸ್ಟಾರ್ಕ್‌ ದುಬಾರಿ: ಕೆಕೆಆರ್‌ ತಂಡದ ಮಿಚೆಲ್ ಸ್ಟಾರ್ಕ್ ಮತ್ತೊಮ್ಮೆ ದುಬಾರಿಯಾದರು. ಈ ಬಾರಿಯ ಬಿಡ್‌ನಲ್ಲಿ ₹24.75 ಕೋಟಿ ಮೌಲ್ಯ ಪಡೆದಿದ್ದರು. ಆದರೆ, ಆಡಿದ ಎರಡೂ ಪಂದ್ಯಗಳಲ್ಲಿ 8 ಓವರ್‌ ಹಾಕಿ 100 ರನ್‌ ಬಿಟ್ಟುಕೊಟ್ಟಿದ್ದಾರೆ.

ಈ ಪಂದ್ಯದಲ್ಲಿ ತಮ್ಮ ಎರಡನೇ ಓವರ್‌ನಲ್ಲಿ 17 ರನ್‌ ಕೊಟ್ಟರು. ಒಟ್ಟು 4 ಓವರ್‌ಗಳಲ್ಲಿ 47 ರನ್‌ ಬಿಟ್ಟುಕೊಟ್ಟರು. ವಿಕೆಟ್ ಗಳಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT