ನವದೆಹಲಿ: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಸತತ ನಾಲ್ಕು ಪಂದ್ಯಗಳನ್ನು ಗೆದ್ದು ಅಜೇಯ ಓಟ ಮುಂದುವರಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಮುಂಬೈ ಇಂಡಿಯನ್ಸ್ ವಿರುದ್ಧ ಭಾನುವಾರ ಮುಗ್ಗರಿಸಿತು.

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ, ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ಗೆ 205 ರನ್ ಕಲೆಹಾಕಿತ್ತು. ಗುರಿ ಬೆನ್ನತ್ತಿದ ಡೆಲ್ಲಿ, 19 ಓವರ್ಗಳಲ್ಲಿ 193 ರನ್ ಗಳಿಸಿ ಸರ್ವಪತನ ಕಂಡಿತು. ಹೀಗಾಗಿ, 12 ರನ್ ಅಂತರದ ಸೋಲು ಅನುಭವಿಸಬೇಕಾಯಿತು.

ಇದು ಡೆಲ್ಲಿ ತಂಡಕ್ಕೆ ತವರಿನ ಮೈದಾನದಲ್ಲಿ ಎದುರಾದ 45ನೇ ಸೋಲು.

ಇದರೊಂದಿಗೆ, ತವರು ಮೈದಾನದಲ್ಲಿ ಅತಿಹೆಚ್ಚು ಪಂದ್ಯಗಳನ್ನು ಸೋತ ತಂಡ ಎಂಬ ಅಪಖ್ಯಾತಿ ಹೊಂದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ದಾಖಲೆಯನ್ನು ಸರಿಗಟ್ಟಿತು.

ಆರ್ಸಿಬಿ ಸಹ ತನ್ನ ತವರು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಷ್ಟೇ ಪಂದ್ಯಗಳನ್ನು ಸೋತಿದೆ.

ಕೋಲ್ಕತ್ತ ನೈಟ್ರೈಡರ್ಸ್ (ಕೆಕೆಆರ್) ತಂಡ ಈಡನ್ ಗಾರ್ಡನ್ಸ್ನಲ್ಲಿ 38 ಹಾಗೂ ಮುಂಬೈ ಇಂಡಿಯನ್ಸ್ ಪಡೆ ವಾಂಖೆಡೆಯಲ್ಲಿ 34 ಪಂದ್ಯಗಳನ್ನು ಸೋತಿದ್ದು, ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನಗಳಲ್ಲಿವೆ.
.ಮುಂಬೈಗೆ ಮಣಿದ ಕ್ಯಾಪಿಟಲ್ಸ್: ಕನ್ನಡಿಗ ಕರುಣ್ ನಾಯರ್ ಆಟಕ್ಕೆ ದಕ್ಕದ ಗೆಲುವು.IPL 2025 | DC vs MI: ಡೆಲ್ಲಿ ನಾಯಕ ಅಕ್ಷರ್ಗೆ ಸೋಲಿನ ಗಾಯದ ಮೇಲೆ ದಂಡದ ಬರೆ.IPL 2025: ಓಡಿ ಆಯಾಸಗೊಂಡ ಕೊಹ್ಲಿಯ ಎದೆಬಡಿತ ಪರಿಶೀಲಿಸಿದ ಸಂಜು ಸ್ಯಾಮ್ಸನ್.IPL 2025 | ನೂರನೇ ಅರ್ಧಶತಕ ಬಾರಿಸಿದ ಕೊಹ್ಲಿ; ಟಿ20 ಕ್ರಿಕೆಟ್ನಲ್ಲಿ ದಾಖಲೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.