ನವದೆಹಲಿ: ಐಪಿಎಲ್ನ ಲಖನೌ ಸೂಪರ್ ಜೈಂಟ್ಸ್ನ(ಎಲ್ಎಸ್ಜಿ) ಎಡಗೈ ವೇಗದ ಬೌಲರ್ ಮೊಹ್ಸಿನ್ ಖಾನ್ ಗಾಯಗೊಂಡಿದ್ದು, ಅವರ ಸ್ಥಾನಕ್ಕೆ ಭಾರತದ ಅನುಭವಿ ವೇಗದ ಬೌಲಿಂಗ್ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಸೇರ್ಪಡೆಯಾಗಲಿದ್ದಾರೆ ಎಂದು ಇಎಸ್ಪಿಎನ್ ಕ್ರಿಕ್ಇನ್ಫೊ ವರದಿ ಮಾಡಿದೆ.

ಕ್ರಿಕ್ಇನ್ಫೊ ಪ್ರಕಾರ, ವಿಜಯ್ ಹಜಾರೆ ಟ್ರೋಫಿಯ ಸಮಯದಲ್ಲಿ ಮೊಹ್ಸಿನ್ ಅವರ ಬಲ ಮೊಣಕಾಲಿನ ಮುಂಭಾಗದ ಕ್ರೂಸಿಯೇಟ್ ಲಿಗಮೆಂಟ್ ಹರಿದಿದೆ.

ಲಖನೌದಲ್ಲಿ ಎಲ್ಎಸ್ಜಿ ತನ್ನ ಪೂರ್ವಸಿದ್ಧತಾ ಶಿಬಿರವನ್ನು ಆರಂಭಿಸಿದಾಗಿನಿಂದ ಶಾರ್ದೂಲ್ ಮತ್ತು ಉತ್ತರ ಪ್ರದೇಶದ ವೇಗದ ಬೌಲರ್ ಶಿವಂ ಮಾವಿ ಎಲ್ಎಸ್ಜಿಯೊಂದಿಗೆ ತರಬೇತಿಯಲ್ಲಿ ಭಾಗವಹಿಸಿದ್ದಾರೆ ಎಂದು ವರದಿ ತಿಳಿದಿದೆ.

ಶಾರ್ದೂಲ್ ಭಾರತದ ದೇಶೀಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. 400ಕ್ಕೂ ಹೆಚ್ಚು ರನ್ ಗಳಿಸಿದ್ದ ಅವರು, 34 ವಿಕೆಟ್ಗಳನ್ನು ಪಡೆದು ಮುಂಬೈ ತಂಡವು ರಣಜಿ ಟ್ರೋಫಿ ಋತುವಿನ ಸೆಮಿಫೈನಲ್ಗೆ ಪ್ರವೇಶಿಸಲು ನೆರವಾಗಿದ್ದರು.

ವೇಗದ ಬೌಲರ್ಗಳು ಗಾಯಾಳುಗಳಾಗುತ್ತಿರುವುದು ಎಲ್ಎಸ್ಜಿಗೆ ತಲೆನೋವಾಗಿ ಪರಿಣಮಿಸಿದೆ. ಶಾರ್ದೂಲ್ ಸೇರ್ಪಡೆಯು ನಿಟ್ಟಿಸಿರುಬಿಡುವಂತೆ ಮಾಡಿದೆ. ಮೊಹ್ಸಿನ್ ಹೊರತುಪಡಿಸಿ, ಮಯಾಂಕ್ ಯಾದವ್, ಆವೇಶ್ ಖಾನ್ ಮತ್ತು ಆಕಾಶ್ ದೀಪ್ ಅವರಂತಹ ವೇಗದ ಬೌಲರ್ಗಳು ಗಾಯದ ಕಾರಣದಿಂದಾಗಿ ಲಭ್ಯವಿಲ್ಲ. ಪ್ರಸ್ತುತ ಬೆಂಗಳೂರಿನಲ್ಲಿರುವ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ಈ ಮೂವರೂ ಚೇತರಿಸಿಕೊಳ್ಳುತ್ತಿದ್ದಾರೆ.
.IPL 2025 | ಕೋಲ್ಕತ್ತ ‘ಚಾಲೆಂಜ್’ ಗೆದ್ದ ಬೆಂಗಳೂರು.
ದೆಹಲಿ ಆಟಗಾರ ಮಯಾಂಕ್ ಯಾದವ್ ಬೆನ್ನಿನ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಇಎಸ್ಪಿಎನ್ಕ್ರಿಕ್ಇನ್ಫೊ ಪ್ರಕಾರ, ಅವೇಶ್ ತನ್ನ ಬಲ ಮೊಣಕಾಲಿನ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾನೆ. ಆಕಾಶ್ ಸಹ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ.

LSG ತಂಡ: ರಿಷಬ್ ಪಂತ್ (ನಾಯಕ), ಡೇವಿಡ್ ಮಿಲ್ಲರ್, ಐಡೆನ್ ಮರ್ಕ್ರಮ್, ನಿಕೋಲಸ್ ಪೂರನ್, ಮಿಚೆಲ್ ಮಾರ್ಷ್, ಅವೇಶ್ ಖಾನ್, ಮಯಾಂಕ್ ಯಾದವ್, ಮೊಹ್ಸಿನ್ ಖಾನ್, ರವಿ ಬಿಷ್ಣೋಯಿ, ಅಬ್ದುಲ್ ಸಮದ್, ಆರ್ಯನ್ ಜುಯಲ್, ಆಕಾಶ್ ದೀಪ್, ಷಾಜ್ ಎಮ್ ಸಿದ್ದಾರ್ಥ್, ಹಿಮ್ಮತ್ ಸಿಂಗ್, ದಿಗ್ ಎ ಸಿದ್ದಾರ್ಥ್ ಜೋಸೆಫ್, ಪ್ರಿನ್ಸ್ ಯಾದವ್, ಯುವರಾಜ್ ಚೌಧರಿ, ರಾಜವರ್ಧನ್ ಹಂಗರ್ಗೇಕರ್, ಅರ್ಶಿನ್ ಕುಲಕರ್ಣಿ, ಮ್ಯಾಥ್ಯೂ ಬ್ರೀಟ್ಜ್ಕೆ.
.ಆರ್ಸಿಬಿ ಟ್ರೋಫಿ ಗೆಲುವಿಗಾಗಿ ಪ್ರಾರ್ಥನೆ: ತಿಮ್ಮಪ್ಪನಿಗೆ ಹರಕೆ ಹೊತ್ತ ಭಕ್ತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.