ಶಾರೂಕ್ ಜೊತೆ ಹೆಜ್ಜೆ ಹಾಕಿದ ಕೊಹ್ಲಿ
ಈಡನ್ ಗಾರ್ಡನ್‌ನಲ್ಲಿ ಕಿಕ್ಕಿರಿದು ಸೇರಿದ್ದ ಕ್ರಿಕೆಟ್ ಅಭಿಮಾನಿಗಳ ಸಮ್ಮುಖದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಗೆ ಅದ್ದೂರಿ ಚಾಲನೆ ದೊರೆಯಿತು. ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್, ಕರಣ್ ಔಜ್ಲಾ ಅವರು ಗಾಯನದ ಮೂಲಕ ರಂಜಿಸಿದರು. ನಟಿ ದಿಶಾ ಪಾಟನಿ ಮತ್ತು ಸಹ ಕಲಾವಿದರ ತಂಡದ ನೃತ್ಯ ಗಮನ ಸೆಳೆಯಿತು.
ಕೆಕೆಆರ್ ಸಹಮಾಲೀಕರೂ ಆಗಿರುವ ಬಾಲಿವುಡ್ ನಟ ಶಾರೂಕ್ ಖಾನ್ ಅವರೊಂದಿಗೆ ರಿಂಕು ಸಿಂಗ್ ಮತ್ತು ವಿರಾಟ್ ಕೊಹ್ಲಿ ಕೂಡ ಹೆಜ್ಜೆ ಹಾಕಿದರು.
ಸತತ 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಆಡುತ್ತಿರುವ ವಿರಾಟ್ ಅವರಿಗೆ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಅವರು ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಬಿನ್ನಿ ಮತ್ತು ಪದಾಧಿಕಾರಿಗಳು ಕೇಕ್ ಕತ್ತರಿಸಿ ಐಪಿಎಲ್ ಉದ್ಘಾಟಿಸಿದರು.