ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

IPL 2025 | ಕೋಲ್ಕತ್ತ ‘ಚಾಲೆಂಜ್’ ಗೆದ್ದ ಬೆಂಗಳೂರು

ಕೃಣಾಲ್ ಕೈಚಳಕ; ಸಾಲ್ಟ್, ಕೊಹ್ಲಿ ಅಜೇಯ ಅರ್ಧಶತಕ; ರಜತ್ ಮಿಂಚು
Published : 22 ಮಾರ್ಚ್ 2025, 18:00 IST
Last Updated : 22 ಮಾರ್ಚ್ 2025, 18:00 IST
ಫಾಲೋ ಮಾಡಿ
Comments
ವಿರಾಟ್‌ ಕಾಲಿಗೆ ಬಿದ್ದ ಅಭಿಯಾನಿ:
ಪಂದ್ಯದ ವೇಳೆ ಅಭಿಯಾನಿಯೊಬ್ಬ ರಕ್ಷಣಾ ಬೇಲಿಯನ್ನು ದಾಟಿ ಬ್ಯಾಟಿಂಗ್‌ ಮಾಡುತ್ತಿದ್ದ ವಿರಾಟ್‌ ಕೊಹ್ಲಿ ಅವರ ಕಾಲಿಗೆ ಎರಗಿದ. ನಂತರ ಆತನನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದರು.
ಶಾರೂಕ್ ಜೊತೆ ಹೆಜ್ಜೆ ಹಾಕಿದ ಕೊಹ್ಲಿ
ಈಡನ್‌ ಗಾರ್ಡನ್‌ನಲ್ಲಿ ಕಿಕ್ಕಿರಿದು ಸೇರಿದ್ದ ಕ್ರಿಕೆಟ್ ಅಭಿಮಾನಿಗಳ ಸಮ್ಮುಖದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಗೆ ಅದ್ದೂರಿ ಚಾಲನೆ ದೊರೆಯಿತು. ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್, ಕರಣ್ ಔಜ್ಲಾ ಅವರು ಗಾಯನದ ಮೂಲಕ ರಂಜಿಸಿದರು. ನಟಿ ದಿಶಾ ಪಾಟನಿ ಮತ್ತು ಸಹ ಕಲಾವಿದರ ತಂಡದ ನೃತ್ಯ ಗಮನ ಸೆಳೆಯಿತು. ಕೆಕೆಆರ್ ಸಹಮಾಲೀಕರೂ ಆಗಿರುವ ಬಾಲಿವುಡ್ ನಟ ಶಾರೂಕ್ ಖಾನ್ ಅವರೊಂದಿಗೆ ರಿಂಕು ಸಿಂಗ್ ಮತ್ತು ವಿರಾಟ್ ಕೊಹ್ಲಿ ಕೂಡ ಹೆಜ್ಜೆ ಹಾಕಿದರು. ಸತತ 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಆಡುತ್ತಿರುವ ವಿರಾಟ್ ಅವರಿಗೆ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಅವರು ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಬಿನ್ನಿ ಮತ್ತು ಪದಾಧಿಕಾರಿಗಳು ಕೇಕ್ ಕತ್ತರಿಸಿ ಐಪಿಎಲ್ ಉದ್ಘಾಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT