ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಮೂಲದ ಸ್ಫೋಟಕ ಬ್ಯಾಟರ್ ಮಿಚೆಲ್ ಮಾರ್ಷ್ ಚೊಚ್ಚಲ ಶತಕದ ಸಾಧನೆ ಮಾಡಿದ್ದಾರೆ.

ಈ ಬಾರಿಯ ಐಪಿಎಲ್ನಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಮಾರ್ಷ್, ಅಹಮದಾಬಾದ್ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಶತಕ ಗಳಿಸಿದ್ದಾರೆ.

ಗುಜರಾತ್ ಬೌಲರ್ಗಳನ್ನು ನಿರ್ಭೀತಿಯಿಂದ ಎದುರಿಸಿದ ಆರಂಭಿಕ ಬ್ಯಾಟರ್ ಮಾರ್ಷ್, ಕೇವಲ 56 ಎಸೆತಗಳಲ್ಲಿ ಶತಕ ಗಳಿಸಿದ್ದಾರೆ.

ಈ ಪೈಕಿ ರಶೀದ್ ಖಾನ್ ಅವರ ಇನ್ನಿಂಗ್ಸ್ನ 12ನೇ ಓವರ್ನಲ್ಲಿ ಎರಡು ಸಿಕ್ಸರ್, ಮೂರು ಬೌಂಡರಿ ಸೇರಿದಂತೆ 25 ರನ್ ಸಿಡಿಸಿ ಅಬ್ಬರಿಸಿದ್ದಾರೆ.

ಈ ಮೂಲಕ ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ಶತಕ ಗಳಿಸಿದ ವಿದೇಶದ ಮೊದಲ ಬ್ಯಾಟರ್ ಎನಿಸಿದ್ದಾರೆ.

64 ಎಸೆತಗಳನ್ನು ಎದುರಿಸಿದ ಮಾರ್ಷ್, 10 ಬೌಂಡರಿ ಹಾಗೂ ಎಂಟು ಸಿಕ್ಸರ್ಗಳ ನೆರವಿನಿಂದ 117 ರನ್ ಗಳಿಸಿದರು.

ಐಪಿಎಲ್ 2025ರ ಶತಕ ವೀರರು:

ವೈಭವ್ ಸೂರ್ಯವಂಶಿ (101)

ಅಭಿಷೇಕ್ ಶರ್ಮಾ (141)

ಇಶಾನ್ ಕಿಶನ್ (106*)

ಸಾಯಿ ಸುದರ್ಶನ್ (108*)

ಕೆ.ಎಲ್. ರಾಹುಲ್ (112*)

ಪ್ರಿಯಾಂಶ್ ಆರ್ಯ (103)

ಮಿಚೆಲ್ ಮಾರ್ಷ್ (117)

.IPL 2025 | GT vs LSG: ಬಲಿಷ್ಠ ಗುಜರಾತ್ ಎದುರು ಲಖನೌಗೆ 33 ರನ್ ಜಯ.IPL 2025 | MI vs DC: 4ನೇ ತಂಡವಾಗಿ ಪ್ಲೇ ಆಫ್ ತಲುಪಿದ ಮುಂಬೈ; ಡೆಲ್ಲಿ ಔಟ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.