ಕ್ಯಾನ್ಸರ್ ಜಾಗೃತಿ: ತಿಳಿನೇರಳೆ ಪೋಷಾಕು
ಕ್ಯಾನ್ಸರ್ ಜಾಗೃತಿಗಾಗಿ ಗುಜರಾತ್ ಟೈಟನ್ಸ್ ತಂಡದ ಆಟಗಾರರು ಲಖನೌ ಎದುರಿನ ಪಂದ್ಯದಲ್ಲಿ ತಿಳಿನೇರಳೆ ಬಣ್ಣದ ಪೋಷಾಕು ಧರಿಸಿ ಆಡಿದರು. ಕಳೆದ ಮೂರು ವರ್ಷಗಳಿಂದ ತಂಡವು ಈ ಜಾಗೃತಿ ಅಭಿಯಾನವನ್ನು ಮಾಡುತ್ತಿದೆ. ಪಂದ್ಯದ ಸಂದರ್ಭದಲ್ಲಿ ಅಭಿಮಾನಿಗಳಿಗೆ 30 ಸಾವಿರ ತಿಳಿನೇರಳೆ ಬಣ್ಣದ ಬಾವುಟಗಳು ಮತ್ತು 10 ಸಾವಿರ ಜೆರ್ಸಿಗಳನ್ನು ವಿತರಿಸಲಾಯಿತು ಎಂದು ತಂಡದ ಮೂಲಗಳು ತಿಳಿಸಿವೆ.