ಜೈಪುರ: ಎಡಗೈ ಸ್ಪಿನ್ನರ್ ಹರಪ್ರೀತ್ ಬ್ರಾರ್ ಅವರ ಕೈಚಳಕದಿಂದ ಪಂಜಾಬ್ ಕಿಂಗ್ಸ್ ತಂಡವು ಐಪಿಎಲ್ ಟೂರ್ನಿಯ ಪ್ಲೇ ಆಫ್ ಹಂತದ ಸನಿಹಕ್ಕೆ ಬಂದು ನಿಂತಿತು.

ಭಾನುವಾರ ಇಲ್ಲಿ ನಡೆದ ಪಂದ್ಯದಲ್ಲಿ ಬ್ರಾರ್ (22ಕ್ಕೆ3) ಅವರ ಪರಿಣಾಮಕಾರಿ ದಾಳಿಯಿಂದ ಪಂಜಾಬ್ ತಂಡವು 10 ರನ್ ಅಂತರದಿಂದ ರಾಜಸ್ಥಾನ ರಾಯಲ್ಸ್ ವಿರುದ್ಧ ಜಯಿಸಿತು. ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು.

ಸವಾಯಿ ಮಾನಸಿಂಗ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕಿಂಗ್ಸ್ ತಂಡವು 20 ಓವರ್ಗಳಲ್ಲಿ 7ಕ್ಕೆ 219 ರನ್ ಗಳಿಸಿತು. ನೇಹಲ್ ವಧೇರಾ (70; 37ಎ, 4X5, 6X5) ಮತ್ತು ಶಶಾಂಕ್ ಸಿಂಗ್ (ಅಜೇಯ 59; 30ಎ, 4X5, 6X3) ಅವರ ಅರ್ಧಶತಕಗಳ ಬಲದಿಂದ ತಂಡವು ದೊಡ್ಡ ಮೊತ್ತ ಪೇರಿಸಿತು.

ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡವು 20 ಓವರ್ಗಳಲ್ಲಿ 7 ವಿಕೆಟ್ಗಳಿಗೆ 209 ರನ್ ಗಳಿಸಿತು. ತಂಡದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ (50; 25ಎ, 4X9, 6X1) ಮತ್ತು ಧ್ರುವ ಜುರೇಲ್ (53; 31ಎ, 4X3, 6X4) ಅವರಿಬ್ಬರ ಪ್ರಯತ್ನಕ್ಕೆ ಗೆಲುವಿನ ಫಲ ಸಿಗಲಿಲ್ಲ.

ಬ್ರಾರ್ ಕೈಚಳಕ: ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರಿಗೆ ಸಬ್ಸ್ಟಿಟ್ಯೂಟ್ ಆಗಿ ಕಣಕ್ಕಿಳಿದ ಬ್ರಾರ್ ಪಂದ್ಯಶ್ರೇಷ್ಠ ಗೌರವದೊಂದಿಗೆ ಮರಳಿದರು. ತಮ್ಮ ಕೈಬೆರಳಿಗೆ ಗಾಯವಾಗಿದ್ದರಿಂದ ಶ್ರೇಯಸ್ ವಿಶ್ರಾಂತಿ ಪಡೆದರು.

ರಾಜಸ್ಥಾನ ತಂಡದ ಆರಂಭಿಕ ಬ್ಯಾಟರ್, 14 ವರ್ಷದ ವೈಭವ್ ಸೂರ್ಯವಂಶಿ (40; 15ಎಸೆತ, 4X4, 6X4), ಯಶಸ್ವಿ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್ ರಿಯಾನ್ ಪರಾಗ್ ಅವರ ವಿಕೆಟ್ಗಳನ್ನು ಬ್ರಾರ್ ಗಳಿಸಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ ಯಶಸ್ವಿ ಮತ್ತು ವೈಭವ್ ಕೇವಲ 29 ಎಸೆತಗಳಲ್ಲಿ 76 ರನ್ ಸೇರಿಸಿದರು. ಐದನೇ ಓವರ್ ಬೌಲಿಂಗ್ ಮಾಡಿದ ಬ್ರಾರ್ ಎಸೆತದ ತಿರುವು ಅಂದಾಜಿಸುವಲ್ಲಿ ಎಡವಿದ ವೈಭವ್ ಅವರು ಝೇವಿಯರ್ ಬಾರ್ಟಲೆಟ್ ಅವರಿಗೆ ಕ್ಯಾಚಿತ್ತರು.

ತಮ್ಮ ಎರಡನೇ ಸ್ಪೆಲ್ನಲ್ಲಿ ಬ್ರಾರ್ ಪಂದ್ಯಕ್ಕೆ ತಿರುವು ನೀಡುವಲ್ಲಿ ಯಶಸ್ವಿಯಾದರು. ಅಮೋಘವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಯಶಸ್ವಿ ಆಟಕ್ಕೆ ಕಡಿವಾಣ ಹಾಕಿದರು. ಅರ್ಧಶತಕ ಗಳಿಸಿದ ಯಶಸ್ವಿ ವಿಕೆಟ್ ಪಡೆದ ಅವರು, ಇನ್ನೊಂದು ಓವರ್ನಲ್ಲಿ ಪರಾಗ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು.

ಈ ನಡುವೆಯೂ ಬೀಸಾಟವಾಡುತ್ತಿದ್ದ ಧ್ರುವ ಜುರೇಲ್ ಜಯದ ಭರವಸೆಯನ್ನು ಜೀವಂತವಾಗಿಟ್ಟಿದ್ದರು. ಆದರೆ ಕೊನೆಯ ಓವರ್ನಲ್ಲಿ ಎಡಗೈ ವೇಗಿ ಮಾರ್ಕೊ ಯಾನ್ಸೆನ್ ಎಸೆತದಲ್ಲಿ ಮಿಚೆಲ್ ಓವನ್ಗೆ ಕ್ಯಾಚಿತ್ತ ಧ್ರುವ ನಿರ್ಗಮಿಸಿದರು.

ನೇಹಲ್, ಶಶಾಂಕ್ ಆಟ

ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಂಜಾಬ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ತುಷಾರ್ ದೇಶಪಾಂಡೆ (37ಕ್ಕೆ2) ಅವರ ನಿಖರ ದಾಳಿಯಿಂದಾಗಿ ಅಗ್ರಕ್ರಮಾಂಕದ ಬ್ಯಾಟರ್ಗಳು ಬೇಗನೆ ನಿರ್ಗಮಿಸಿದರು. ಇದರಿಂದಾಗಿ ತಂಡದ ಮೊತ್ತವು 34 ರನ್ಗಳಾಗುವಷ್ಟರಲ್ಲಿ 3 ವಿಕೆಟ್ಗಳು ಪತನವಾದವು. ಇದರಿಂದಾಗಿ ತಂಡವು ಅಲ್ಪಮೊತ್ತಕ್ಕೆ ಕುಸಿಯುವ ಆಂತಕ ಮೂಡಿತ್ತು. ಈ ಸಂದರ್ಭದಲ್ಲಿ ನೇಹಲ್ ಮತ್ತು ನಾಯಕ ಶ್ರೇಯಸ್ (30; 25ಎ, 4X5) ಇನಿಂಗ್ಸ್ಗೆ ಮರುಜೀವ ತುಂಬಿದರು. 4ನೇ ವಿಕೆಟ್ ಜೊತೆಯಾಟದಲ್ಲಿ 67 (44ಎ) ರನ್ ಸೇರಿಸಿದರು. ಶ್ರೇಯಸ್ ವಿಕೆಟ್ ಗಳಿಸಿದ ರಿಯಾನ್ ಪರಾಗ್ ಅವರು ಜೊತೆಯಾಟವನ್ನು ಮುರಿದರು.

ನೇಹಲ್ ಜೊತೆಗೂಡಿದ ಶಶಾಂಕ್ ಅವರ ವೇಗದ ಆಟಕ್ಕೆ ಬೌಲರ್ಗಳು ಬಸವಳಿದರು. ಇಬ್ಬರೂ ಸೇರಿ 33 ಎಸೆತಗಳಲ್ಲಿ 58 ರನ್ ಗಳಿಸಿದರು. ಆಕಾಶ್ ಮಧ್ವಾಲ್ ಅವರ ಎಸೆತದಲ್ಲಿ ನೇಹಲ್ ಔಟಾದಾಗ ಇನಿಂಗ್ಸ್ನಲ್ಲಿ ನಾಲ್ಕು ಓವರ್ಗಳು ಬಾಕಿಯಿದ್ದವು. ಶಶಾಂಕ್ ಅವರೊಂದಿಗೆ ಸೇರಿಕೊಂಡ ಅಫ್ಗನ್ ಆಟಗಾರ ಅಜ್ಮತ್ವುಲ್ಲಾ ಒಮರ್ಝೈ (ಔಟಾಗದೇ 21, 9ಎ) ಅವರಿಬ್ಬರ ಆಟ ರಂಗೇರಿತು. ಇಬ್ಬರೂ 60 ರನ್ಗಳನ್ನು ಸೂರೆ ಮಾಡಿದರು.
.IPL 2025 | RR vs PBKS: ಜೈಪುರದಲ್ಲಿ ‘ಕಿಂಗ್’ ಆಗುವುದೇ ಪಂಜಾಬ್?.IPL 2025: ಮಳೆಯದ್ದೇ ಆಟ, ಪ್ಲೇ-ಆಫ್ ಸನಿಹ ಆರ್ಸಿಬಿ, ಕೋಲ್ಕತ್ತ ಹೊರಕ್ಕೆ.IPL 2025 | RCB Fans Tribute to Virat Kohli: ನಿಲ್ಲದ ಮಳೆ, ತಣಿಯದ ಉತ್ಸಾಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.