ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 | ರಿಷಭ್ ಪಂತ್‌ಗೆ ಮರಳಿ ಅರಳುವ ವಿಶ್ವಾಸ

ಡೆಲ್ಲಿ ಕ್ಯಾಪಿಟಲ್ಸ್‌–ಪಂಜಾಬ್‌ ಕಿಂಗ್ಸ್ ಹಣಾಹಣಿ ಇಂದು
Published 23 ಮಾರ್ಚ್ 2024, 0:05 IST
Last Updated 23 ಮಾರ್ಚ್ 2024, 0:05 IST
ಅಕ್ಷರ ಗಾತ್ರ

ಚಂಡೀಗಡ: ರಸ್ತೆ ಅಪಘಾತದಲ್ಲಿ ಗಾಯಗೊಂಡು ಹದಿನಾಲ್ಕು ತಿಂಗಳುಗಳ ಕಾಲ ಕ್ರಿಕೆಟ್‌ನಿಂದ ದೂರವಿದ್ದ ರಿಷಭ್ ಪಂತ್ ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ಧಾರೆ.

ಶನಿವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ರಿಷಭ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಶಿಖರ್ ಧವನ್ ಮುನ್ನಡೆಸಲಿರುವ ಪಂಜಾಬ್ ಕಿಂಗ್ಸ್ ಎದುರು ಸೆಣಸಲಿದೆ. 

2022ರ ಡಿಸೆಂಬರ್‌ನಲ್ಲಿ ಸಂಭವಿಸಿದ್ದ ಭೀಕರ ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ  ರಿಷಭ್ ಚಿಕಿತ್ಸೆ, ಪುನಶ್ಚೇತನ ಮತ್ತು ತರಬೇತಿಯ ನಂತರ ಈಗ ಆಟಕ್ಕೆ ಸಿದ್ಧರಾಗಿದ್ದಾರೆ.   ಹೋದ ವರ್ಷ ಅವರ ಅನುಪಸ್ಥಿತಿಯಲ್ಲಿ ಡೇವಿಡ್ ವಾರ್ನರ್ ತಂಡವನ್ನು ಮುನ್ನಡೆಸಿದ್ದರು. 

‘ಕಳೆದ ವಾರದಲ್ಲಿ ಪಂತ್ ಬಹಳಷ್ಟು ಅವಧಿ ಬ್ಯಾಟಿಂಗ್ ಅಭ್ಯಾಸ ಮಾಡಿದ್ದಾರೆ. ಅವರು ತಮ್ಮ ದೇಹದ ಸಾಮರ್ಥ್ಯದ ಕುರಿತು ವಿಶ್ವಾಸವನ್ನು ಪಂದ್ಯಗಳಲ್ಲಿ ಆಡುವ ಮೂಲಕ ಮರಳಿ ಪಡೆಯಬಹುದು’ ಎಂದು ಡೆಲ್ಲಿ ತಂಡದ ಕೋಚ್ ರಿಕಿ ಪಾಂಟಿಂಗ್ ಹೇಳಿದ್ದಾರೆ. 

ಆದರೆ ಅವರು ವಿಕೆಟ್‌ಕೀಪಿಂಗ್ ಹೊಣೆ ನಿಭಾಯಿಸುವ ಕುರಿತು ಇನ್ನೂ ಖಚಿತ ಮಾಹಿತಿ ಇಲ್ಲ.  ಡೆಲ್ಲಿ ತಂಡದಲ್ಲಿ ವಾರ್ನರ್, ಪೃಥ್ವಿ ಶಾ, ಯಶ್ ಧುಳ್ ಅವರು ಬ್ಯಾಟಿಂಗ್‌ ವಿಭಾಗದ ಪ್ರಮುಖರಾಗಿದ್ದಾರೆ. ಬೌಲಿಂಗ್ ವಿಭಾಗವು ಬಲಿಷ್ಠವಾಗಿದೆ. ಅನುಭವಿ  ಎನ್ರಿಚ್ ನಾಕಿಯಾ, ಇಶಾಂತ್ ಶರ್ಮಾ, ಜೇ ರಿಚರ್ಡ್ಸನ್, ಸ್ಪಿನ್ನರ್ ಕುಲದೀಪ್ ಯಾದವ್, ಮುಕೇಶ್ ಯಾದವ್ ಹಾಗೂ ಅಕ್ಷರ್ ಪಟೇಲ್ ಅವರು ಪಂದ್ಯ ಗೆಲ್ಲಿಸಿಕೊಡಬಲ್ಲ ಸಮರ್ಥರು. 

ಪಂಜಾಬ್ ತಂಡದಲ್ಲಿ ನಾಯಕ ಶಿಖರ್ ಕೂಡ ದೀರ್ಘ ಅವಧಿಯ ನಂತರ ಕಣಕ್ಕೆ ಮರಳುತ್ತಿದ್ದಾರೆ. ಬೌಲಿಂಗ್‌ ವಿಭಾಗದಲ್ಲಿ ಕಗಿಸೊ ರಬಾಡ, ಸ್ಯಾಮ್ ಕರನ್, ಹರ್ಷಲ್ ಪಟೇಲ್ ಮೇಲೆ ಹೆಚ್ಚು ಭರವಸೆ ಇದೆ. ಕನ್ನಡಿಗ ವಿದ್ವತ್ ಕಾವೇರಪ್ಪ ಅವರಿಗೆ ಅವಕಾಶ ಕುರಿತು ಇನ್ನೂ ಖಚಿತವಾಗಿಲ್ಲ. ಬ್ಯಾಟಿಂಗ್‌ನಲ್ಲಿ ಸಿಕಂದರ್ ರಝಾ,  ಆಲ್‌ರೌಂಡರ್‌ಗಳಾದ ಲಿಯಾಮ್ ಲಿವಿಂಗ್‌ಸ್ಟೋನ್, ರಿಷಿ ಧವನ್ ಮೇಲೆ ಹೆಚ್ಚು ಹೊಣೆ ಇದೆ. 

ಪಂದ್ಯ ಆರಂಭ: ಮಧ್ಯಾಹ್ನ 3.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT