ದುಬೈ: ಗಾಯದಿಂದ ಚೇತರಿಸಿ ಕೊಂಡಿರುವ ಅಂಬಟಿ ರಾಯುಡು ಶುಕ್ರವಾರದ ಪಂದ್ಯದಲ್ಲಿ ಕಣಕ್ಕಿ ಳಿಯುವ ಸಾಧ್ಯತೆಯಿದೆ. ಇದ ರಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬಲ ಹೆಚ್ಚಲಿದೆ.

ಎರಡು ದಿನಗಳ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಜಯಿಸಿದ್ದ ಡೇವಿಡ್ ವಾರ್ನರ್ ನಾಯಕತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಚೆನ್ನೈಗೆ ಸವಾಲೊಡ್ಡಲಿದೆ. ಇದೇ ಹೊತ್ತಿಗೆ ಚೆನ್ನೈ ತಂಡಕ್ಕೆ ಅಂಬಟಿ ಮರಳಿರುವುದು ತುರುಸಿನ ಸ್ಪರ್ಧೆ ಏರ್ಪಡುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ಟೂರ್ನಿಯ ಉದ್ಘಾಟನೆ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಜಯ ಗಳಿಸಲು ಅಂಬಟಿಯ ಅರ್ಧಶತಕದ ಆಟ ನೆರವಾಗಿತ್ತು. ಗಾಯದಿಂದಾಗಿ ನಂತರದ ಎರಡು ಪಂದ್ಯಗಳಲ್ಲಿ ಅವರು ವಿಶ್ರಾಂತಿ ಪಡೆದಿದ್ದರು.

ಈ ಸಂದರ್ಭದಲ್ಲಿ ಸುರೇಶ್ ರೈನಾ ಅನುಪಸ್ಥಿತಿಯೂ ಕಾಡಿತ್ತು. ಆದ್ದರಿಂದ ಡೆಲ್ಲಿ ಮತ್ತು ರಾಜಸ್ಥಾನ ತಂಡಗಳ ವಿರುದ್ಧ ಧೋನಿ ಬಳಗ ಸೋತಿತ್ತು. ಸ್ನಾಯುಸೆಳೆತ ಇದ್ದ ಕಾರಣ ಡ್ವೇನ್ ಬ್ರಾವೊ ಎರಡೂ ಪಂದ್ಯಗಳಲ್ಲಿ ಬೌಲಿಂಗ್ ಮಾಡಿರಲಿಲ್ಲ. ಇದೀಗ ಬ್ರಾವೊ ಕೂಡ ಫಿಟ್ ಆಗಿದ್ದಾರೆ.

‘ರಾಯುಡು ಮತ್ತು ಬ್ರಾವೊ ಆಯ್ಕೆಗೆ ಲಭ್ಯರಿದ್ದಾರೆ’ ಎಂದು ಸಿಎಸ್‌ಕೆ ಸಿಇಒ ಕೆ.ಎಸ್. ವಿಶ್ವನಾಥನ್ ಗುರುವಾರ ತಿಳಿಸಿದ್ದಾರೆ.

ಐಪಿಎಲ್‌ನಲ್ಲಿ ಅತ್ಯಂತ ಸಮತೋಲನವಾದ ತಂಡಗಳೆಂಬ ಹೆಗ್ಗಳಿಕೆ ದಕ್ಷಿಣ ಭಾರತದ ಈ ಎರಡೂ ಬಳಗಗಳಿಗೆ ಇದೆ. ಈ ಟೂರ್ನಿಯ ಅಂಕಿ ಸಂಖ್ಯೆಗಳನ್ನು ನೋಡಿದರೆ ಇಬ್ಬರದ್ದೂ ಸಮಬಲದ ಸಾಧನೆ. ಎರಡೂ ತಂಡಗಳು ಮೂರು ಪಂದ್ಯಗಳಲ್ಲಿ ಆಡಿ ಎರಡರಲ್ಲಿ ಸೋತು, ಒಂದರಲ್ಲಿ ಗೆದ್ದಿವೆ.

ಸನ್‌ರೈಸರ್ಸ್ ತಂಡದಲ್ಲಿ ಕಳೆದ ಪಂದ್ಯದಲ್ಲಿ ಅವಕಾಶ ಗಳಿಸಿದ ಕೇನ್ ವಿಲಿಯಮ್ಸನ್ ಉತ್ತಮವಾಗಿ ಆಡಿದ್ದರು. ತಂಡದ ಗೆಲುವಿಗೆ ಕಾಣಿಕೆ ನೀಡಿದ್ದರು.

ಡೇವಿಡ್ ವಾರ್ನರ್, ಜಾನಿ ಬೆಸ್ಟೊ, ಕರ್ನಾ ಟಕದ ಮನೀಷ್ ಪಾಂಡೆ, ವೃದ್ಧಿಮಾನ್ ಸಹಾ ಬ್ಯಾಟಿಂಗ್ ಬಲ ಹೆಚ್ಚಿಸುವ ಸಮರ್ಥರು. ಭುವನೇಶ್ವರ್ ಕುಮಾರ್, ಖಲೀಲ್ ಅಹಮದ್ ಮತ್ತು ಸ್ಪಿನ್ನರ್ ರಶೀದ್ ಖಾನ್ ಪಂದ್ಯ ಗೆಲ್ಲಿಸಿ ಕೊಡುವ ಸಮರ್ಥರು. ಆದ್ದರಿಂದ ಇವರನ್ನು ಎದುರಿಸಲು ಚೆನ್ನೈ ಬ್ಯಾಟ್ಸ್‌ಮನ್‌ಗಳು ವಿಶೇಷ ತಯಾರಿ ನಡೆಸಿ ಬರುವುದು ಅನಿವಾರ್ಯ.

ಉತ್ತಮ ಫಾರ್ಮ್‌ನಲ್ಲಿರುವ ಫಾಫ್ ಡುಪ್ಲೆಸಿ, ಶೇನ್ ವಾಟ್ಸನ್, ರವೀಂದ್ರ ಜಡೇಜಾ ಇಲ್ಲಿಯೂ ತಮ್ಮ ಆಟ ಮುಂದುವರಿಸುವ ನಿರೀಕ್ಷೆ ಇದೆ. ಆದರೆ, ಮುರಳಿ ವಿಜಯ್, ಕೇದಾರ್ ಜಾಧವ್ ಅವರು ಲಯಕ್ಕೆ ಮರಳದಿರುವುದು ತಂಡಕ್ಕೆ ಚಿಂತೆಯ ವಿಷಯವಾಗಿದೆ. ಅಂಬಟಿ ಮರಳುವು ದರಿಂದ ಕೇದಾರ್ ಬೆಂಚ್ ಕಾಯಿಸಬೇಕಾ ಗಬಹುದು. ಅಲ್ಲದೇ ಧೋನಿ ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬರಲಿ ದ್ದಾರೆಂದು ಕೂಡ ಈಗ ಕುತೂಹಲದ ವಿಷಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.