ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL-2020 | KXIP vs CSK: ಧೋನಿ ಪಡೆಗೆ 10 ವಿಕೆಟ್‌ ಜಯ

Last Updated 4 ಅಕ್ಟೋಬರ್ 2020, 18:01 IST
ಅಕ್ಷರ ಗಾತ್ರ

ದುಬೈ: ಕಿಂಗ್ಸ್‌ ಇಲವೆನ್‌ ಪಂಜಾಬ್ ನೀಡಿದ 179 ರನ್‌ ಗುರಿ ಎದುರು ನಿರಾಯಾಸವಾಗಿ ಬ್ಯಾಟ್‌ ಬೀಸಿದ ಶೇನ್‌ ವಾಟ್ಸನ್‌ ಹಾಗೂ ಫಾಫ್‌ ಡು ಪ್ಲೆಸಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ 10 ವಿಕೆಟ್‌ಗಳ ಗೆಲುವು ತಂದುಕೊಟ್ಟರು.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ್ದ ಪಂಜಾಬ್‌ ತಂಡ ನಾಯಕ ಕೆಎಲ್‌ ರಾಹುಲ್ ಗಳಿಸಿದ ಅರ್ಧಶತಕದ ನೆರವಿನಿಂದ ಸವಾಲಿನ ಮೊತ್ತ ಕಲೆಹಾಕಿತ್ತು. ರಾಹುಲ್‌ 52 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 63 ರನ್ ಗಳಿಸಿದ್ದರು.

ತಿರುವು ನೀಡಿದ ಶಾರ್ದೂಲ್‌
ಒಂದು ಹಂತದಲ್ಲಿ ಪಂಜಾಬ್‌17 ಓವರ್‌ ಮುಕ್ತಾಯಕ್ಕೆ ಕೇವಲ 2 ವಿಕೆಟ್‌ ಕಳೆದುಕೊಂಡು 152 ರನ್‌ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಹೀಗಾಗಿ ಈ ತಂಡದ ಮೊತ್ತ 200ರ ಸನಿಹಕ್ಕೆ ತಲುಪುವ ಸಾಧ್ಯತೆ ಇತ್ತು. ಆದರೆ, ಶಾರ್ದೂಲ್‌ ಠಾಕೂರ್ ಅದಕ್ಕೆ ಅವಕಾಶ ನೀಡಲಿಲ್ಲ.

ಬಿರುಸಾಗಿ ಬ್ಯಾಟ್‌ ಬೀಸುತ್ತಿದ್ದನಿಕೋಲಸ್‌ ಪೂರನ್‌ (33) ಮತ್ತು ರಾಹುಲ್ ಅವರಿ‌ಗೆ 18ನೇ ಓವರ್‌ನ ಮೊದಲೆರಡು ಎಸೆತಗಳಲ್ಲಿ ಪೆವಿಲಿಯನ್‌ ದಾರಿ ತೋರಿದರು. ಇದರಿಂದಾಗಿ ರಾಹುಲ್‌ ಪಡೆಯರನ್‌ ಗಳಿಕೆ ವೇಗಕ್ಕೆ ಕಡಿವಾಣ ಬಿದ್ದಿತು. ಕೊನೆಯಲ್ಲಿ ಸರ್ಫರಾಜ್ ಖಾನ್‌ (14) ಮತ್ತು ಗ್ಲೇನ್‌ ಮ್ಯಾಕ್ಸ್‌ವೆಲ್‌ (11) ತಂಡದ ಮೊತ್ತವನ್ನು 175ರ ಗಡಿ ದಾಟಿಸಿದರು.

ಈ ಗುರಿ ಲೀಲಾಜಾಲವಾಗಿ ಬ್ಯಾಟ್‌ ಬೀಸಿದ ವಾಟ್ಸನ್‌ ಮತ್ತು ಪ್ಲೆಸಿಗೆ ಪಂಜಾಬ್‌ ನೀಡಿದ ಗುರಿ ಸವಾಲೇ ಎನಿಸಲಿಲ್ಲ.

53 ಎಸೆತಗಳನ್ನು ಎದುರಿಸಿದ ವಾಟ್ಸನ್‌ 3 ಸಿಕ್ಸರ್ ಮತ್ತು 11 ಬೌಂಡರಿ ಸಹಿತ 83 ರನ್ ಗಳಿಸಿದರೆ, ಇನ್ನೊಂದು ತುದಿಯಲ್ಲಿ ಪ್ಲೆಸಿ ಇಷ್ಟೇ ಎಸೆತಗಳಲ್ಲಿ 11 ಬೌಂಡರಿ ಮತ್ತು 1 ಸಿಕ್ಸರ್‌ಸಹಿತ 87 ರನ್‌ ಚಚ್ಚಿದರು. ಹೀಗಾಗಿ ಚೆನ್ನೈ ಇನ್ನೂ 14 ಎಸೆತಗಳುಬಾಕಿ ಇರುವಂತೆಯೇ 181 ರನ್‌ ಗಳಿಸಿಗೆಲುವಿನ ನಗೆ ಬೀರಿತು.

ಈ ಜಯದೊಂದಿಗೆ ಚೆನ್ನೈ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದೆ. ಪಂದ್ಯಕ್ಕೂ ಮೊದಲು ಧೋನಿ ಪಡೆ ಕೊನೆಯ ಸ್ಥಾನದಲ್ಲಿತ್ತು. ಪಂಜಾಬ್‌ 7ನೇ ಸ್ಥಾನದಿಂದ 8ಕ್ಕೆ ಕುಸಿದಿದೆ.

ಧೋನಿಗೆ ನೂರನೇ ಕ್ಯಾಚ್
ಚೆನ್ನೈ ತಂಡದ ನಾಯಕ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಎಂಎಸ್ ಧೋನಿ ಐಪಿಎಲ್‌ನಲ್ಲಿ ವಿಕೆಟ್‌ಕೀಪರ್‌ ಆಗಿ 100ನೇ ಕ್ಯಾಚ್‌ ಪಡೆದುಕೊಂಡರು.

ಪಂಜಾಬ್‌ ಇನಿಂಗ್ಸ್‌ನ 18ನೇ ಓವರ್‌ನಲ್ಲಿ ಕೆಎಲ್‌ ರಾಹುಲ್‌ ಅವರನ್ನು ಔಟ್‌ ಮಾಡುವ ಮೂಲಕ ಅವರು ಈ ಸಾಧನೆ ಮಾಡಿದರು.

ಕಿಂಗ್ಸ್‌ ಪರ ರಾಹುಲ್‌ 1,500 ರನ್
ಇಂದಿನ ಪಂದ್ಯದಲ್ಲಿ ಅರ್ಧಶತಕ ಗಳಿಸಿದಕಿಂಗ್ಸ್‌ ಇಲವೆನ್‌ ಪಂಜಾಬ್‌ ತಂಡದ ನಾಯಕ ಕೆಎಲ್‌ ರಾಹುಲ್‌, ಈ ಮೂಲಕ ಕಿಂಗ್ಸ್ ತಂಡದ ಪರ 1,500 ರನ್‌ ಕಲೆಹಾಕಿದ ಸಾಧನೆಯನ್ನೂ ಮಾಡಿದರು.

ರಾಹುಲ್‌ ಇದುವರೆಗೆ ಒಟ್ಟು 71 ಪಂದ್ಯಗಳ 62 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿದ್ದು 2216 ರನ್‌ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT