ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL-2020 | ‘ಸೂಪರ್’ ಜಯದೊಂದಿಗೆ ಪಾಯಿಂಟ್ಸ್‌ ಪಟ್ಟಿಯಲ್ಲಿ ಮೇಲೇರಿದ ಕಿಂಗ್ಸ್

Last Updated 18 ಅಕ್ಟೋಬರ್ 2020, 19:47 IST
ಅಕ್ಷರ ಗಾತ್ರ

ದುಬೈ: ಎರಡು ಸೂಪರ್‌ ಓವರ್‌ಗಳನ್ನು ಕಂಡ ಪಂದ್ಯದಲ್ಲಿ ಕಿಂಗ್ಸ್ ಇಲವೆನ್‌ ಪಂಜಾಬ್‌ ತಂಡ ಮುಂಬೈ ಇಂಡಿಯನ್ಸ್‌ ವಿರುದ್ಧ ಗೆದ್ದು ಬೀಗಿತು.

ಪಂದ್ಯದಲ್ಲಿ ಟಾಸ್‌ ಗೆದ್ದ ಮುಂಬೈ ಇಂಡಿಯನ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಕ್ವಿಂಟನ್ ಡಿ ಕಾಕ್‌ (53) ಗಳಿಸಿದ ಅರ್ಧಶತಕ ಮತ್ತು ಬಿರುಸಿನ ಬ್ಯಾಟಿಂಗ್ ನಡೆಸಿದ ಕೀರನ್‌ ಪೊಲಾರ್ಡ್‌ (34*) ಆಟದ ನೆರವಿನಿಂದ ರೋಹಿತ್‌ ಶರ್ಮಾ ಪಡೆ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 176 ರನ್‌ ಗಳಿಸಿತು.

ಈ ಗುರಿ ಬೆನ್ನತ್ತಿದ ಕಿಂಗ್ಸ್‌ ನಾಯಕಕೆಎಲ್‌ ರಾಹುಲ್ (77)‌ ಅವರ ಅಮೋಘ ಆಟದ ಹೊರತಾಗಿಯೂ ಇಷ್ಟೇ ರನ್‌ ಗಳಿಸಿತು. ಹೀಗಾಗಿ ಪಂದ್ಯವು ಸೂಪರ್ ಓವರ್‌ಗೆ ಸಾಗಿತು.

ಮೊದಲ ಸೂಪರ್‌ ಓವರ್‌
ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕಿಂಗ್ಸ್‌ ಕೇವಲ 5 ರನ್‌ ಗಳಿಸಿ ಆಲೌಟ್‌ ಆಯಿತು. ಈ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್‌ ಕೂಡ 5 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಪಂಜಾಬ್‌:1 w 1 1 2 w
ಕಿಂಗ್ಸ್ಪರ ಕೆಎಲ್‌ ರಾಹುಲ್‌ ಮತ್ತು ನಿಕೋಲಸ್‌ ಪೂರನ್‌ ಬ್ಯಾಟಿಂಗ್‌ ಮಾಡಿದರು.

ಜಸ್‌ಪ್ರೀತ್‌ ಬೂಮ್ರಾ ಹಾಕಿದ ಮೊದಲ ಎಸೆತದಲ್ಲಿ ರಾಹುಲ್‌ ಒಂದು ರನ್‌ ಗಳಿಸಿದರು. ಎರಡನೇ ಎಸೆತದಲ್ಲಿ ನಿಕೋಲಸ್‌ ವಿಕೆಟ್‌ ಒಪ್ಪಿಸಿದರು.

ಮೂರನೇ ಎಸೆತದಲ್ಲಿ ರಾಹುಲ್‌ 1 ರನ್‌ ಗಳಿಸಿದರೆ. ನಾಲ್ಕನೇ ಎಸೆತದಲ್ಲಿ ದೀಪಕ್ 1 ರನ್‌ ಗಳಿಸಿಕೊಂಡರು. 5ನೇ ಎಸೆತದಲ್ಲಿ ಎರಡು ಓಡಿದ ರಾಹುಲ್‌ ಕೊನೆ ಎಸೆತದಲ್ಲಿ ಎಲ್‌ಬಿ ಬಲೆಗೆ ಬಿದ್ದರು.

ಮುಂಬೈ: 1 1 1 0 1 w1
ಇಂಡಿಯನ್ಸ್‌ ಪರ ನಾಯಕ ರೋಹಿತ್‌ ಶರ್ಮಾ ಮತ್ತು ಕ್ವಿಂಟನ್‌ ಡಿ ಕಾಕ್‌ ಬ್ಯಾಟಿಂಗ್‌ ಮಾಡಿದರು.

ಮೊಹಮ್ಮದ್ ಶಮಿ ಹಾಕಿದ ಮೊದಲ ಎಸೆತದಲ್ಲಿ ಕ್ವಿಂಟನ್‌ ಒಂದು ರನ್‌ ಗಳಿಸಿದರು. ಎರಡನೇ ಎಸೆತದಲ್ಲಿ ರೋಹಿತ್‌ 1 ರನ್‌ ಗಳಿಸಿದರು.

ಮೂರನೇ ಎಸೆತದಲ್ಲಿ ಕ್ವಿಂಟನ್‌ 1 ರನ್‌ ಗಳಿಸಿದರೆ. ನಾಲ್ಕನೇ ಎಸೆತದಲ್ಲಿ ರೋಹಿತ್‌ ರನ್‌ ಕದಿಯಲು ವಿಫಲರಾದರು. 5ನೇ ಎಸೆತದಲ್ಲಿ ರೋಹಿತ್‌ 1 ರನ್‌ ಗಳಿಸಿದರು. ಆರನೇ ಎಸೆತದಲ್ಲಿ ಕ್ವಿಂಟನ್‌ 2ನೇ ರನ್‌ ಗಳಿಸುವ ವೇಳೆ ರನೌಟ್‌ ಆದರು.

ಹೀಗಾಗಿ ಮತ್ತೊಮ್ಮೆ ಸೂಪರ್ ಓವರ್‌ನಡೆಯಿತು.

ಎರಡನೇ ಸೂಪರ್‌ ಓವರ್‌
ಈ ಬಾರಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ, ಕ್ರಿಸ್‌ ಜೋರ್ಡನ್‌ ಎಸೆದ ಈ ಓವರ್‌ನಲ್ಲಿ 11 ರನ್‌ ಗಳಿಸಿತು. 12 ರನ್ ಗುರಿ ಎದುರು ಬ್ಯಾಟಿಂಗ್ ಮಾಡಿದ ಕಿಂಗ್ಸ್‌ ಕೇವಲ 4 ಎಸೆತಗಳಲ್ಲಿ 15 ರನ್‌ ಬಾರಿಸಿ, ಜಯದ ನಗು ಬೀರಿತು.

ಮುಂಬೈ ಪರಎರಡನೇ ಸೂಪರ್‌ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಕೀರನ್‌ ಪೊಲಾರ್ಡ್‌ ಬ್ಯಾಟಿಂಗ್‌ಗೆ ಬಂದರು.
ಬೌಲರ್‌:ಕ್ರಿಸ್‌ ಜೋರ್ಡನ್‌ (1 Wd 1 4 Wd 1W 0 2)

ಮೊದಲ ಎಸೆತ:ಪೊಲಾರ್ಡ್‌ – 1 ರನ್‌
ಎರಡನೇ ಎಸೆತ:ವೈಡ್‌
ಎರಡನೇ ಎಸೆತ: ಪಾಂಡ್ಯ –1 ರನ್‌
ಮೂರನೇ ಎಸೆತ: ಪೊಲಾರ್ಡ್– ಬೌಂಡರಿ
ಮೂರನೇ ಎಸೆತ: ವೈಡ್‌
ನಾಲ್ಕನೇ ಎಸೆತ:ಪೊಲಾರ್ಡ್– 1 ರನ್‌, ಹಾರ್ದಿಕ್‌ ಪಾಂಡ್ಯ ರನೌಟ್‌
ಐದನೇ ಎಸೆತ:ಪೊಲಾರ್ಡ್‌ – 0
ಆರನೇ ಎಸೆತ:ಪೊಲಾರ್ಡ್ ‌– 2 ರನ್‌

ಪಂಜಾಬ್‌ ಪರ ಕ್ರಿಸ್‌ ಗೇಲ್‌ ಮತ್ತು ಮಯಂಕ್‌ ಅಗವಾಲ್‌ 2ನೇ ಸೂಪರ್‌ ಓವರ್‌ನಲ್ಲಿ ಬ್ಯಾಟ್‌ ಬೀಸಿದರು.
ಬೌಲರ್‌: ಟ್ರೆಂಟ್‌ ಬೌಲ್ಟ್‌ (6 1 4 4)

ಮೊದಲ ಎಸೆತ:ಗೇಲ್‌ – ಸಿಕ್ಸರ್‌
ಎರಡನೇ ಎಸೆತ:ಗೇಲ್ – 1ರನ್
ಮೂರನೇ ಎಸೆತ:ಮಯಂಕ್ – ಬೌಂಡರಿ
ನಾಲ್ಕನೇ ಎಸೆತ:ಮಯಂಕ್ – ಬೌಂಡರಿ

8 ರಿಂದ ಆರಕ್ಕೇರಿದ ಕಿಂಗ್ಸ್‌
ಈ ಜಯದೊಂದಿಗೆ ಟೂರ್ನಿಯಲ್ಲಿ ಆಡಿರುವ 9 ಪಂದ್ಯಗಳಲ್ಲಿ ಮೂರನೇ ಗೆಲುವು ಸಾಧಿಸಿದ ಕಿಂಗ್ಸ್‌ ಇಲವೆನ್‌ ಪಂಜಾಬ್‌ ತಂಡ ಪಾಯಿಂಟ್ಸ್‌ ಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಏರಿದೆ.

ಡೆಲ್ಲಿ ಕ್ಯಾಪಿಟಲ್ಸ್‌, ಮುಂಬೈ ಇಂಡಿಯನ್ಸ್‌ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿ ಕಾಣಿಸಿಕೊಂಡಿವೆ.

ಕೋಲ್ಕತ್ತ ನೈಟ್‌ರೈಡರ್ಸ್‌ ನಾಲ್ಕು, ಸನ್‌ರೈಸರ್ಸ್‌ ಹೈದರಾಬಾದ್‌ ಐದನೇ ಸ್ಥಾನದಲ್ಲಿದ್ದು, ಚೆನ್ನೈ ಸೂಪರ್‌ಕಿಂಗ್ಸ್‌ ಮತ್ತು ರಾಜಸ್ಥಾನ ರಾಯಲ್ಸ್ ಕೊನೆಯ ಎರಡು ಸ್ಥಾನಗಳಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT