ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL–2020: ಮುಂಬೈ ಪರ ಸೂಪರ್ ಓವರ್‌ನಲ್ಲಿ ಕಿಶನ್‌ ಬ್ಯಾಟಿಂಗ್ ಮಾಡಲಿಲ್ಲ ಏಕೆ?

Last Updated 29 ಸೆಪ್ಟೆಂಬರ್ 2020, 13:02 IST
ಅಕ್ಷರ ಗಾತ್ರ

ದುಬೈ: ಮುಂಬೈ ಇಂಡಿಯನ್ಸ್‌ ತಂಡದ ವಿರುದ್ಧಸೋಮವಾರ ನಡೆದ ಪಂದ್ಯವನ್ನುರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಸೂಪರ್‌ ಓವರ್‌ನಲ್ಲಿ ಗೆದ್ದು ಬೀಗಿತು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಆರ್‌ಸಿಬಿ ಪರ ದೇವದತ್ತ ಪಡಿಕ್ಕಲ್‌ (54), ಆ್ಯರನ್‌ ಫಿಂಚ್ (52) ಮತ್ತು ಎಬಿ ಡಿ ವಿಲಿಯರ್ಸ್‌ (ಅಜೇಯ 55) ಬಿರುಸಿನ ಬ್ಯಾಟಿಂಗ್‌ ನಡೆಸಿದ್ದರು. ಹೀಗಾಗಿ ಈ ತಂಡನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 201 ರನ್‌ ಗಳಿಸಿತ್ತು.

ಈ ಬೃಹತ್‌ ಗುರಿ ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್‌ ಇನಿಂಗ್ಸ್‌ಗೆ ಯುವ ಆಟಗಾರ ಇಶಾನ್‌ ಕಿಶಾನ್ ಮತ್ತು ಕೀರನ್‌ ಪೊಲಾರ್ಡ್‌ ಬಲ ತುಂಬಿದ್ದರು. ಕಿಶನ್‌ 58 ಎಸೆತಗಳಲ್ಲಿ 9 ಸಿಕ್ಸರ್‌ ಮತ್ತು 2 ಬೌಂಡರಿ ಸಹಿತ 99 ರನ್‌ ಗಳಿಸಿದರು. ಪೊಲಾರ್ಡ್‌ 24 ಎಸೆತಗಳಲ್ಲಿ 60 ರನ್‌ ಚಚ್ಚಿದರು. ಇವರ ಬ್ಯಾಟಿಂಗ್ ನೆರವಿನಿಂದ ಮುಂಬೈ ತಂಡವೂ 201 ರನ್‌ ಗಳಿಸಿತ್ತು. ಹೀಗಾಗಿ ಫಲಿತಾಂಶ ನಿರ್ಧಾರಕ್ಕಾಗಿ ಸೂಪರ್‌ ಓವರ್‌ ಮೊರೆಹೋಗಲಾಯಿತು.

ಮುಂಬೈ ಪರಸೂಪರ್‌ ಓವರ್‌ನಲ್ಲಿ ಬ್ಯಾಟ್‌ ಬೀಸಲು ಇಶಾನ್‌ ಕಿಶನ್‌ ಆಗಮಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಕೀರನ್‌ ಪೊಲಾರ್ಡ್‌ ಜೊತೆಗೆ ಹಾರ್ದಿಕ್‌ ಪಾಂಡ್ಯ ಬಂದಿದ್ದರು. ನವದೀಪ್‌ ಸೈನಿ ಎಸೆದ ಓವರ್‌ನಲ್ಲಿಈ ಜೋಡಿ ಕೇವಲ 7 ರನ್ ಮಾತ್ರವೇ ಗಳಿಸಿತ್ತು. ಈ ಗರಿಯನ್ನುಆರ್‌ಸಿಬಿ ಸುಲಭವಾಗಿ ಮುಟ್ಟಿತ್ತು.

ಪಂದ್ಯದಲ್ಲಿ ತಂಡದ ಪರ ಅತ್ಯಧಿಕ ರನ್‌ ಗಳಿಸಿದ್ದ ಕಿಶಾನ್‌ ಅವರನ್ನು ಸೂಪರ್‌ ಓವರ್‌ನಲ್ಲಿ ಬ್ಯಾಟಿಂಗ್‌ಗೆ ಕಳುಹಿಸದಿದ್ದುದು ಏಕೆ ಎಂಬುದಕ್ಕೆ ಮುಂಬೈ ತಂಡದ ನಾಯಕರೋಹಿತ್‌ ಶರ್ಮಾ ಕಾರಣ ನೀಡಿದ್ದಾರೆ.

‘ಆತ (ಕಿಶನ್‌) ಸಂಪೂರ್ಣ ದಣಿದಿದ್ದ ಮತ್ತು ಬ್ಯಾಟಿಂಗ್‌ ಮಾಡುವ ಮನಸ್ಥಿತಿಯಲ್ಲಿರಲಿಲ್ಲ. ಆತನನ್ನು ಬ್ಯಾಟಿಂಗ್‌ಗೆ ಕಳುಹಿಸಬಹುದೆಂದುನಾವೂ ಭಾವಿಸಿದ್ದೆವು. ಆದರೆ ಹಾಗಾಗಲಿಲ್ಲ.ಅದೃಷ್ಟ ನಿಮ್ಮ (ಆರ್‌ಸಿಬಿ)ಕಡೆಗೆ ಇದ್ದುದರಿಂದ ನಾವು ಕೇವಲ 7 ರನ್‌ ಗಳಿಸಿದೆವು. ಆದರೂ.. ನಾವು ವಿಕೆಟ್‌ ಪಡೆಯಬೇಕಿತ್ತು. ದುರದೃಷ್ಟಕ್ಕೆ ಬೌಂಡರಿಗಳು ಬಂದವು. ಈ ಪಂದ್ಯದಿಂದ ನಾವುಸಾಕಷ್ಟು ಸಾಕಾರಾತ್ಮಕ ಅಂಶಗಳನ್ನು ಪಡೆದುಕೊಂಡಿದ್ದೇವೆ’ ಎಂದು ಹೇಳಿದ್ದಾರೆ.

ಗುರಿ ಬೆನ್ನತ್ತಿದ್ದ ಮುಂಬೈ11.2 ಓವರ್‌ಗಳಲ್ಲಿ ಕೇವಲ 78 ರನ್‌ಗಳಿಸಿ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.ಈ ವೇಳೆ ಜೊತೆಯಾದ ಕೀರನ್‌ ಮತ್ತು ಕಿಶನ್‌ಮುಂಬೈ ತಂಡದ ಹೋರಾಟವನ್ನು‌ಕೊನೆಯ ಎಸೆತದವರೆಗೂ ಕೊಂಡೊಯ್ದರು. ಈ ಇಬ್ಬರು 5ನೇ ವಿಕೆಟ್‌ಗೆ ಕೇವಲ 51 ಎಸೆತಗಳಲ್ಲಿ 119 ರನ್‌ ಕಲೆಹಾಕಿದ್ದರು.

ಈ ಬಗ್ಗೆ ಮಾತನಾಡಿರುವ ರೋಹಿತ್‌,‘ಇದು ಅದ್ಭುತವಾದ ಪಂದ್ಯವಾಗಿತ್ತು. ನಾವು ಉತ್ತಮವಾಗಿ ಬ್ಯಾಟಿಂಗ್‌ಆರಂಭಿಸಲಿಲ್ಲ. ಕಿಶನ್‌ ಮತ್ತು ಪೊಲಾರ್ಡ್‌ ಆಡಿದ ಶ್ರೇಷ್ಠ ಇನಿಂಗ್ಸ್‌ ನಮ್ಮನ್ನು ಆಟಕ್ಕೆ ಮರಳಿಸಿತ್ತು. ನಮ್ಮ ಬ್ಯಾಟಿಂಗ್‌ ವಿಭಾಗ ಬಲಿಷ್ಠವಾಗಿರುವುದರಿಂದ 200 ರನ್‌ಗಳ ಗುರಿಯನ್ನು ಬೆನ್ನತ್ತಬಲ್ಲೆವು ಎಂದು ಭಾವಿಸಿದ್ದೆ’ ಎಂದು ಹೇಳಿಕೊಂಡಿದ್ದಾರೆ.

‘ಮೊದಲ 6–7 ಓವರ್‌ಗಳಲ್ಲಿ ನಮಗೆ ರನ್‌ ಬರಲಿಲ್ಲ. ಜೊತೆಗೆ ಮೂರು ವಿಕೆಟ್‌ಗಳನ್ನೂ ಕಳೆದುಕೊಂಡೆವು. ಆದರೆ, ಇಶಾನ್‌ ಚೆನ್ನಾಗಿ ಆಡುತ್ತಿದ್ದುದರಿಂದ ನಾವು ಗುರಿಮುಟ್ಟಬಲ್ಲೆವು ಎಂದುಕೊಂಡಿದ್ದೆವು. ಆರ್‌ಸಿಬಿ ನಮಗಿಂತಲೂ ಚೆನ್ನಾಗಿ ಪಂದ್ಯದ ಮೇಲೆಹಿಡಿತ ಸಾಧಿಸಿತು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT