ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 DC vs GT: 89 ರನ್‌ಗಳಿಗೆ ಗುಜರಾತ್ ಆಲೌಟ್‌

Published 17 ಏಪ್ರಿಲ್ 2024, 14:09 IST
Last Updated 17 ಏಪ್ರಿಲ್ 2024, 14:09 IST
ಅಕ್ಷರ ಗಾತ್ರ

ಅಹಮದಾಬಾದ್: ಇಲ್ಲಿ ನಡೆಯುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಕೇವಲ 89 ರನ್‌ಗಳಿಗೆ ಆಲೌಟ್ ಆಗಿದೆ.

ಡೆಲ್ಲಿ ತಂಡದ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಗುಜರಾತ್ ತಂಡ 20 ಓವರ್ ಸಹ ಪೂರ್ಣ ಮಾಡಲಿಲ್ಲ. 17.3 ಓವರ್‌ಗಳಿಗೆ ಸರ್ವಪತನ ಕಂಡಿತು.

ಡೆಲ್ಲಿ ಪರ ವೇಗಿ ಮುಖೇಶ್ ಕುಮಾರ್ 2.3 ಓವರ್‌ಗಳಲ್ಲಿ 14 ರನ್‌ಗೆ 3 ವಿಕೆಟ್ ಉರುಳಿಸುವ ಮೂಲಕ ಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡಿದರು. ಇಶಾಂತ್ ಶರ್ಮಾ 8 ರನ್‌ಗಳಿಗೆ 2 ಮತ್ತು ಖಲೀಲ್ ಅಹಮ್ಮದ್ 18 ರನ್‌ಗೆ 1 ವಿಕೆಟ್ ಪಡೆದರು.

ರಶೀದ್ ಖಾನ್ ಸಿಡಿಸಿದ 31 ರನ್ ಗುಜರಾತ್ ಪರ ಬ್ಯಾಟರ್ ಒಬ್ಬ ಗಳಿಸಿದ ಅತ್ಯಧಿಕ ಮೊತ್ತವಾಗಿದೆ.

ಸಾಯಿ ಸುದರ್ಶನ್ 12 ಮತ್ತು ರಾಹುಲ್ ತೆವಾಟಿಯಾ 10 ರನ್ ಸಿಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT