ಭಾನುವಾರ, ಸೆಪ್ಟೆಂಬರ್ 26, 2021
21 °C

ಐಪಿಎಲ್‌ನಲ್ಲಿ ಉದ್ದೀಫನ ಮದ್ದು ಪರೀಕ್ಷೆ ಹೊರಗುತ್ತಿಗೆ: ನಾಡಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ : ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಉದ್ದೀಪನ ಮದ್ದು ಸೇವನೆ ಪರೀಕ್ಷೆಗೆ ಆಟಗಾರರ ಮಾದರಿ ಸಂಗ್ರಹಿಸಲು ಹೊರಗುತ್ತಿಗೆ ನೀಡಲು ನಾಡಾ ಚಿಂತನೆ ನಡೆಸಿದೆ.

ಟೂರ್ನಿಯು ಯುನೈಟೆಡ್ ಅರಬ್ ಎಮಿರೆಟ್ಸ್‌ನಲ್ಲಿ (ಯುಎಇ) ನಡೆಯುವುದು ಬಹುತೇಕ ಖಚಿತವಾಗಿದೆ. ಆದ್ದರಿಂದ ಪ್ರಯಾಣ ಮತ್ತಿತರ ದುಬಾರಿ ವೆಚ್ಚವನ್ನು ತಪ್ಪಿಸಲು ನಾಡಾ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗುತ್ತಿದೆ.

ಯುಎಇಯ ರಾಷ್ಟ್ರೀಯ ಉದ್ದೀಪನ ತಡೆ ಘಟಕ (ನ್ಯಾಡೊ) ಅಥವಾ ಸ್ವೀಡನ್‌ನ ಅಂತರರಾಷ್ಟ್ರೀಯ ಉದ್ದೀಪನ ಮದ್ದು ಪರೀಕ್ಷೆ ಮತ್ತು ಮ್ಯಾನೇಜ್‌ಮೆಂಟ್ (ಐಡಿಟಿಎಂ) ಸಂಸ್ಥೆಗಳ ನೆರವನ್ನು ನಾಡಾ ಪಡೆಯುವ ಸಾಧ್ಯತೆ ಇದೆ.

ಐಡಿಟಿಎಂ 12 ವರ್ಷಗಳಿಂದ ಐಪಿಎಲ್‌ನಲ್ಲಿ ಉದ್ದೀಪನ ಮದ್ದು ಪರೀಕ್ಷೆಯನ್ನು ನಿರ್ವಹಿಸುತ್ತಿದೆ. 2019ರಲ್ಲಿ ಬಿಸಿಸಿಐಯನ್ನು ನಾಡಾದ ವ್ಯಾಪ್ತಿಗೆ ಒಳಪಡಿಸಲಾಗಿದೆ.

’ಮುಂದಿನ ವಾರ ವೇಳಾಪಟ್ಟಿಯು ಖಚಿತವಾಗುತ್ತದೆ. ಆಗ ನಾಡಾಕ್ಕೆ ಪ್ರಸ್ತಾವ ಕಳಿಸುತ್ತೇವೆ. ಅವರು ನಿರ್ಧಾರ ತೆಗೆದುಕೊಳ್ಳಲಿ.  ಉದ್ದೀಪನ ಮದ್ದು ಪರೀಕ್ಷೆಯ ಸಂಪೂರ್ಣ ವೆಚ್ಚವನ್ನು ಅವರೇ ಭರಿಸಬೇಕು‘ ಎಂದು ಬಿಸಿಸಿಐ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ನಾಡಾದ ಮಹಾಪ್ರಬಂಧಕ ನವೀನ್ ಅಗರವಾಲ್, ’ಈ ಬಗ್ಗೆ ತೀರ್ಮಾನ ತೆಗೆಉಕೊಂಡ ಮೇಲೆ ತಿಳಿಸುತ್ತೇವೆ‘ ಎಂದಿದ್ದಾರೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು