ಬುಧವಾರ, ಮಾರ್ಚ್ 22, 2023
26 °C

ಸ್ಟಾರ್‌, ವಯಾಕಾಮ್‌ ತೆಕ್ಕೆಗೆ ಐಪಿಎಲ್‌ ಮಾಧ್ಯಮ ಪ್ರಸಾರ ಹಕ್ಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ವಾಲ್ಟ್ ಡಿಸ್ನಿ (ಸ್ಟಾರ್)ಸಂಸ್ಥೆ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಕ್ರಿಕೆಟ್‌ ಟೂರ್ನಿಯ 2023ರಿಂದ 2027ರ ವರೆಗಿನ ಟಿವಿ ಪ್ರಸಾರ ಹಕ್ಕು ತನ್ನದಾಗಿಸಿಕೊಂಡಿದೆ. ರಿಲಯನ್ಸ್ ಇಂಡಸ್ಟ್ರೀಸ್‌ ಮಾಲೀಕತ್ವದ ವಯಾಕಾಮ್ 18 ಡಿಜಿಟಲ್‌ ಪ್ರಸಾರ ಹಕ್ಕು ಪಡೆದುಕೊಂಡಿದೆ.

ಹರಾಜು ಪ್ರಕ್ರಿಯೆಯಲ್ಲಿ ಪ್ರತಿ ಪಂದ್ಯ ₹ 107.5 ಕೋಟಿ ಮೊತ್ತಕ್ಕೆ ಮಾರಾಟವಾಗಿದೆ.

‘ಟಿ.ವಿ ಪ್ರಸಾರ ಹಕ್ಕು (ಪ್ಯಾಕೇಜ್‌ ಎ) ₹ 23,575 ಕೋಟಿಗೆ ಮತ್ತು ಡಿಜಿಟಲ್‌ ಹಕ್ಕು (ಪ್ಯಾಕೇಜ್‌ ಬಿ) ₹ 20,500 ಕೋಟಿಗೆ ಹರಾಜಾಗಿದೆ. ಅಂದರೆ ಪ್ರತಿ ಪಂದ್ಯ ಕ್ರಮವಾಗಿ ₹ 57.5 ಹಾಗೂ ₹ 50 ಕೋಟಿಗೆ ಮಾರಾಟವಾಗಿದೆ. ಟಿ.ವಿ ಹಾಗೂ ಡಿಜಿಟಲ್ ಹಕ್ಕುಗಳ ಒಟ್ಟು ಮೌಲ್ಯ ₹ 44,075 ಕೋಟಿ ಆಗಿದೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಪ್ಯಾಕೇಜ್ ಸಿ (ಪ್ರತಿ ಋತುವಿನಲ್ಲಿ ಆಯ್ದ 18 ಪಂದ್ಯಗಳ ಹಕ್ಕು) ಮತ್ತು ಪ್ಯಾಕೇಜ್ ಡಿ (ವಿದೇಶದಲ್ಲಿ ಟಿ.ವಿ. ಮತ್ತು ಡಿಜಿಟಲ್ ಪ್ರಸಾರ ಹಕ್ಕು) ಹರಾಜು ಪ್ರಕ್ರಿಯೆ ಮಂಗಳವಾರ ನಡೆಯಲಿದೆ.

ಪ್ರಸಾರ ಹಕ್ಕು ತನ್ನದಾಗಿಸಿಕೊಳ್ಳಲು ವಯಾಕಾಮ್ 18, ಡಿಸ್ನಿ ಸ್ಟಾರ್, ಸೋನಿ ಮತ್ತು ಝೀ ಸಂಸ್ಥೆಗಳು ಕಣದಲ್ಲಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು