ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL-2020| ಬುಕಿಯಿಂದ ಆಟಗಾರನ ಸಂಪರ್ಕ: ತನಿಖೆ ಆರಂಭ

Last Updated 3 ಅಕ್ಟೋಬರ್ 2020, 13:49 IST
ಅಕ್ಷರ ಗಾತ್ರ

ನವದೆಹಲಿ: ಬುಕಿಯೊಬ್ಬರು ತಮ್ಮನ್ನು ಸಂಪರ್ಕಿಸಿದ್ದಾಗಿಐಪಿಎಲ್‌ನಲ್ಲಿ ಆಡುತ್ತಿರುವ ಆಟಗಾರನೊಬ್ಬ ಬಿಸಿಸಿಐನ ಭ್ರಷ್ಟಾಚಾರ ತಡೆ ಘಟಕಕ್ಕೆ (ಎಸಿಯು) ವರದಿ ಮಾಡಿಕೊಂಡಿದ್ದು, ಎಸಿಯು ತನಿಖೆ ಆರಂಭಿಸಿದೆ.

13ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ (ಯುಎಇ) ಜೀವಸುರಕ್ಷಾ ವಾತಾವರಣದಲ್ಲಿ ನಡೆಯುತ್ತಿದೆ. ಬುಕಿಗಳುಆಟಗಾರರನ್ನು ನೇರವಾಗಿ ಸಂಪರ್ಕಿಸುವ ಅವಕಾಶವನ್ನು ಇದು ಗಮನಾರ್ಹವಾಗಿ ಕಡಿಮೆ ಮಾಡಿದೆ. ಆದರೂ ಬುಕಿಗಳ ಆನ್‌ಲೈನ್‌ ಜಾಲ ವ್ಯಾಪಕವಾಗಿರುವುದರಿಂದ ಫಿಕ್ಸಿಂಗ್‌ನ ಆತಂಕವಂತೂ ಇದೆ.

ಎಸಿಯು ಮುಖ್ಯಸ್ಥ ಅಜಿತ್‌ ಸಿಂಗ್‌ ಅವರು ಈ ಬೆಳವಣಿಗೆಯನ್ನು ಖಚಿತಪಡಿಸಿದ್ದಾರೆ.

‘ಆಟಗಾರನೊಬ್ಬ ವರದಿ ಮಾಡಿಕೊಂಡಿದ್ದು ನಿಜ. ಬುಕಿಯ ಪತ್ತೆಗೆ ಬಲೆ ಬೀಸಿದ್ದೇವೆ. ಇದಕ್ಕೆ ಒಂದಷ್ಟು ಸಮಯ ಬೇಕು‘ ಎಂದು ಅಜಿತ್‌ ಸಿಂಗ್‌ ಹೇಳಿದ್ದಾರೆ. ಆಟಗಾರರನ್ನು ಸಂಪರ್ಕಿಸಿದ ವ್ಯಕ್ತಿಯ ಬಂಧನವಾಗಿದೆಯೇ ಎಂಬ ಪ್ರಶ್ನೆಗೆ ಅಜಿತ್‌ ಸಿಂಗ್‌ ಈ ರೀತಿ ಉತ್ತರಿಸಿದರು.

ಭ್ರಷ್ಟಾಚಾರ ತಡೆ ನಿಯಮಾವಳಿಗಳ ಪ್ರಕಾರ, ಗೋಪ್ಯತೆಯ ಉದ್ದೇಶದಿಂದ ಬುಕಿಯ ಸಂಪರ್ಕಕ್ಕೆ ಒಳಗಾದ ಆಟಗಾರ ಅಥವಾ ಫ್ರ್ಯಾಂಚೈಸ್‌ನ ಹೆಸರನ್ನು ಬಹಿರಂಗಪಡಿಸಿಲ್ಲ.

ಆಟಗಾರರು ಹಾಗೂ ನೆರವು ಸಿಬ್ಬಂದಿಯು ಜೀವಸುರಕ್ಷಾ‌ ವಾತಾವರಣದಲ್ಲಿ ಇರುವುದರಿಂದ ಆನ್‌ಲೈನ್‌ ಮೂಲಕ ನಡೆಯುವ ಫಿಕ್ಸಿಂಗ್‌ ಮೇಲೆ ಎಸಿಯು ಹೆಚ್ಚು ನಿಗಾ ಇರಿಸಿದೆ.

‘ಆಟಗಾರನೊಬ್ಬ ತಾನು ಬುಕಿಯೊಬ್ಬನ ಸಂಪರ್ಕಕ್ಕೆ ಒಳಗಾಗಿದ್ದನ್ನು ತಕ್ಷಣವೇ ಎಸಿಯುಗೆ ವರದಿ ಮಾಡಿಕೊಂಡಿದ್ದು ಒಳ್ಳೆಯದು. ಪ್ರತಿ ಆಟಗಾರರು, 19 ವರ್ಷದೊಳಗಿನ ವಯೋಮಾನದವರಿಗೂ ಭ್ರಷ್ಟಾಚಾರ ತಡೆ ನಿಯಮಾವಳಿಗಳ ಕುರಿತು ಅರಿವಿದೆ‘ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT