ಮಂಗಳವಾರ, ಡಿಸೆಂಬರ್ 7, 2021
22 °C

IPL: ಲಖನೌ, ಅಹಮದಾಬಾದ್ ಫ್ರಾಂಚೈಸಿ; ಬಿಡ್ ಗೆದ್ದ ಸಂಜೀವ್, ಸಿವಿಸಿ ಕ್ಯಾಪಿಟಲ್

ಪಿಟಿಐ Updated:

ಅಕ್ಷರ ಗಾತ್ರ : | |

ದುಬೈ: ಐಪಿಎಲ್ 2022ರಿಂದ ಎರಡು ನೂತನ ಫ್ರಾಂಚೈಸಿಗಳಿಗಾಗಿ ಬಿಡ್ಡಿಂಗ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಲಖನೌ ಫ್ರಾಂಚೈಸಿಗಾಗಿ ಕೋಲ್ಕತ್ತ ಮೂಲದ ಉದ್ಯಮಿ ಸಂಜೀವ್ ಗೋಯೆಂಕಾ ಅವರ ಆರ್‌ಪಿ-ಎಸ್‌ಜಿ ಗ್ರೂಪ್ ₹7,090 ಕೋಟಿ ಹಾಗೂ ಅಹಮದಾಬಾದ್ ಫ್ರಾಂಚೈಸಿಗಾಗಿ ಅಂತರರಾಷ್ಟ್ರೀಯ ಈಕ್ವಿಟಿ ಹೂಡಿಕೆ ಸಂಸ್ಥೆ ಸಿವಿಸಿ ಕ್ಯಾಪಿಟಲ್ ₹5,625 ಕೋಟಿಗೆ ಬಿಡ್ ಗೆದ್ದುಕೊಂಡಿದೆ.

ದುಬೈನಲ್ಲಿ ಸೋಮವಾರ ಬಿಡ್ಡಿಂಗ್ ಪ್ರಕ್ರಿಯೆ ನೆರವೇರಿದ್ದು, ಬಿಸಿಸಿಐ ಈ ಕುರಿತು ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಡಿಸಲಿದೆ.

 

ಬಿಸಿಸಿಐ ಒಟ್ಟು ₹10,000 ಕೋಟಿ ಕಲೆ ಹಾಕುವ ನಿರೀಕ್ಷೆಯಲ್ಲಿತ್ತು. ಆದರೆ ಐಪಿಎಲ್ 2022ರಲ್ಲಿ ಭಾಗವಹಿಸುವ ಎರಡು ನೂತನ ಫ್ರಾಂಚೈಸಿಗಳಿಂದ ಬರೋಬ್ಬರಿ ₹12,715 ಕೋಟಿ ಸಂಗ್ರಹಿಸಿದೆ.

2016 ಹಾಗೂ 2017ನೇ ಸಾಲಿನಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ಒಡೆತನವನ್ನು ಆರ್‌ಪಿ-ಎಸ್‌ಜಿ ಗ್ರೂಪ್ ಹೊಂದಿತ್ತು.

ಎರಡು ನೂತನ ಫ್ರಾಂಚೈಸಿಗಳ ಖರೀದಿಗಾಗಿ 22 ಕಂಪನಿಗಳು ಬಿಡ್ಡಿಂಗ್ ಸಲ್ಲಿಸಿದ್ದವು. ಬಳಿಕ 10 ಕಂಪನಿಗಳನ್ನು ಅಂತಿಮಗೊಳಿಸಲಾಗಿತ್ತು. ಗೌತಮ್ ಅದಾನಿಯ ಅದಾನಿ ಗ್ರೂಪ್, ಸರಿ ಸುಮಾರು ₹5,000 ಕೋಟಿಗೆ ಬಿಡ್ ಸಲ್ಲಿಸಿದ್ದರಿಂದ ರೇಸ್‌ನಲ್ಲಿ ಹಿಂದಿ ಬಿದ್ದಿದೆ. ಹಾಗೆಯೇ ಮ್ಯಾಂಚೆಸ್ಟರ್ ಯುನೈಟೆಡ್ ಹಾಗೂ ಟೊರೆಂಟ್ ಗ್ರೂಪ್‌ಗಳು ಬಿಡ್‌ ಗೆಲ್ಲುವಲ್ಲಿ ವಿಫಲವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು