ಶನಿವಾರ, ಅಕ್ಟೋಬರ್ 24, 2020
18 °C

IPL 2020| ಇಶಾಂತ್ ಶರ್ಮಾ ಐಪಿಎಲ್ ಅಭಿಯಾನ ಮುಕ್ತಾಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಧ್ಯಮ ವೇಗಿ ಬೌಲರ್ ಇಶಾಂತ್ ಶರ್ಮಾ ಈ ಆವೃತ್ತಿಯ ಅಭಿಯಾನಕ್ಕೆ ತೆರೆ ಬಿದ್ದಿದೆ. ಅಭ್ಯಾಸದ ಸಂದರ್ಭದಲ್ಲಿ ಪಕ್ಕೆಲುಬಿನ ಗಾಯಕ್ಕೆ ಒಳಗಾಗಿರುವ ಅವರು ಮುಂದಿನ ಪಂದ್ಯಗಳಲ್ಲಿ ಆಡುವುದಿಲ್ಲ ಎಂದು ಫ್ರಾಂಚೈಸ್ ತಿಳಿಸಿದೆ.  

32 ವರ್ಷದ ಶರ್ಮಾ 13ನೇ ಆವೃತ್ತಿಯಲ್ಲಿ ಒಂದು ಪಂದ್ಯ ಮಾತ್ರ ಆಡಿದ್ದು ಮೂರು ಓವರ್‌ಗಳಲ್ಲಿ 26 ರನ್ ನೀಡಿದ್ದಾರೆ. ಡೆಲ್ಲಿ ತಂಡದ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಗಾಯಗೊಂಡು ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ರಿಷಭ್ ಪಂತ್ ಒಂದು ವಾರ ಲಭ್ಯವಿಲ್ಲ

ಡೆಲ್ಲಿ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಕೂಡ ಗಾಯಗೊಂಡಿದ್ದು ಅವರು ಒಂದು ವಾರ ಆಡಲು ಲಭ್ಯವಿಲ್ಲ ಎಂದು ತಂಡದ ನಾಯಕ ಶ್ರೇಯಸ್‌ ಅಯ್ಯರ್ ತಿಳಿಸಿದ್ದಾರೆ. ಹಿಂದಿನ ಶುಕ್ರವಾರ ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಗಾಯಗೊಂಡಿದ್ದರು. ಆದ್ದರಿಂದ ಮುಂಬೈ ಎದುರಿನ ಪಂದ್ಯದಲ್ಲಿ ಆಡಿರಲಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು