ರವೀಂದ್ರ ಜಡೇಜಗೆ ತಲೆಸುತ್ತು ಇತ್ತು: ಸಂಜು ಸ್ಯಾಮ್ಸನ್

ಕ್ಯಾನ್‌ಬೆರಾ: ಬ್ಯಾಟಿಂಗ್ ಮುಗಿಸಿ ಬಂದ ರವೀಂದ್ರ ಜಡೇಜ ತಮ್ಮ ತಲೆ ಸುತ್ತುತ್ತಿದೆ ಎಂದಿದ್ದರು. ಆದ್ದರಿಂದ ಅವರಿಗೆ ವಿಶ್ರಾಂತಿ ನೀಡಲಾಯಿತು ಎಂದು ಭಾರತ ತಂಡದ ಆಟಗಾರ ಸಂಜು ಸ್ಯಾಮ್ಸನ್ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ಜಡೇಜ ಡ್ರೆಸ್ಸಿಂಗ್ ರೂಮ್‌ಗೆ ಮರಳಿದಾಗ ತಂಡದ ಫಿಸಿಯೊ (ನಿತಿನ್ ಪಟೇಲ್) ಅವರು ಆರೋಗ್ಯ ವಿಚಾರಿಸಿದರು. ಅವರಿಗೆ ಪ್ರತಿಕ್ರಿಯಿಸಿದ ಜಡೇಜ ಸ್ವಲ್ಪ ಮಟ್ಟಿಗೆ ತಲೆ ಸುತ್ತುವಂತೆ ಭಾಸವಾಗುತ್ತಿದೆಯೆಂದರು. ಅವರ ಆರೈಕೆ ನೋಡುತ್ತಿರುವ ವೈದ್ಯ (ಡಾ. ಅಭಿಜಿತ್ ಸಾಳ್ವೆ) ನಿಗಾ ಇಟ್ಟಿದ್ದಾರೆ‘ ಎಂದರು.
"ಜಡೇಜ ಆರೋಗ್ಯ ಸ್ಥಿತಿಯ ಕುರಿತು ಫಿಸಿಯೊ ಸಂಪೂರ್ಣ ಕಾಳಜಿ ವಹಿಸಿದ್ದಾರೆ. ಅದರ ಕುರಿತು ನಾನು ಹೆಚ್ಚು ಏನೂ ಹೇಳಲಾಗುವುದಿಲ್ಲ. ಆದರೆ ಚಾಹಲ್ ಶ್ರೇಷ್ಠ ಆಟವಾಡಿದರು. ಅವರು ತಂಡದ ಗೆಲುವಿನ ರೂವಾರಿಯಾದರು‘ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.