ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರವೀಂದ್ರ ಜಡೇಜಗೆ ಶತಮಾನದ ಭಾರತೀಯ ಟೆಸ್ಟ್‌ ಕ್ರಿಕೆಟಿಗ ಗೌರವ ನೀಡಿದ ವಿಸ್ಡನ್

Last Updated 1 ಜುಲೈ 2020, 20:19 IST
ಅಕ್ಷರ ಗಾತ್ರ

ನವದೆಹಲಿ: ಭಾರತ ತಂಡದ ಆಲ್‌ರೌಂಡರ್‌ ರವೀಂದ್ರ ಜಡೇಜ, ವಿಸ್ಡನ್ ನಿಯತಕಾಲಿಕೆಯ ’21ನೇ ಶತಮಾನದ ಶ್ರೇಷ್ಠ ಭಾರತೀಯಟೆಸ್ಟ್ ‌ಕ್ರಿಕೆಟಿಗ‘ ಗೌರವಕ್ಕೆ ಪಾತ್ರರಾಗಿದ್ದಾರೆ.

97.3 ಎಂವಿಪಿ (ಅತ್ಯಂತ ಅಮೂಲ್ಯ ಆಟಗಾರ) ರೇಟಿಂಗ್‌‍ಗಳಿಸಿರುವ 31 ವರ್ಷದ ಜಡೇಜ ಅವರು, ವಿಶ್ವದ ಶ್ರೇಷ್ಠ ಟೆಸ್ಟ್‌ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನ ಅಲಂಕರಿಸಿದ್ದಾರೆ. ಅಗ್ರಸ್ಥಾನವು ಶ್ರೀಲಂಕಾದ ದಿಗ್ಗಜ ಸ್ಪಿನ್ನರ್‌ ಮುತ್ತಯ್ಯ ಮರಳೀಧರನ್‌ ಪಾಲಾಗಿದೆ.

‘ಭಾರತ ತಂಡಕ್ಕೆ ಆಡುವುದೇ ಒಂದು ಕನಸಾಗಿರುತ್ತದೆ. ಅದನ್ನೂ ಮೀರಿ, ಶ್ರೇಷ್ಠ ಆಟಗಾರ ಎಂಬ ಗೌರವ ದೊರೆತಾಗ ಆಗುವ ಖುಷಿ ಹೆಚ್ಚು. ಪ್ರೀತಿ, ಬೆಂಬಲ ನೀಡಿದ ಸಹಆಟಗಾರರು, ಅಭಿಮಾನಿಗಳು, ಕೋಚ್‌ಗಳು ಮತ್ತು ನೆರವು ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಜಡೇಜ ಹೇಳಿದ್ದಾರೆ.

2012ರಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿರುವ ಜಡೇಜ, ಭಾರತದ ಪರ 49 ಟೆಸ್ಟ್‌ಗಳನ್ನು ಆಡಿದ್ದಾರೆ. ಒಂದು ಶತಕ, 14 ಅರ್ಧಶತಕಗಳನ್ನು ಗಳಿಸಿದ್ದಾರೆ. 1,869 ರನ್‌ ಕಲೆ ಹಾಕಿದ್ದಾರೆ. 213 ವಿಕೆಟ್‌ಗಳು ಅವರ ಖಾತೆಯಲ್ಲಿವೆ.

ಕ್ರಿಕ್‌ವಿಜ್‌ ಸಂಸ್ಥೆಯು ನಡೆಸಿದ ವಿಶ್ಲೇಷಣೆಯನ್ನು ಆಧರಿಸಿ, ವಿಶ್ವ ಕ್ರಿಕೆಟ್‌ನ ಪ್ರತಿಯೊಬ್ಬ ಆಟಗಾರನಿಗೆ ಎಂವಿಪಿ ರೇಟಿಂಗ್‌ ನೀಡಲಾಗುತ್ತದೆ. ಸಮಾನ ಸಾಮರ್ಥ್ಯ, ವಯಸ್ಸು ಅಥವಾ ಸಮಾನ ಆಟದ ಮಾದರಿ ಹೊಂದಿರುವ ಆಟಗಾರರೊಂದಿಗೆ ಹೋಲಿಕೆ ಮಾಡಲಾಗುತ್ತದೆ. ಅವರು ಪಂದ್ಯದ ಮೇಲೆ ಬೀರಿದ ಪ್ರಭಾವ, ಅಂಕಿ ಅಂಶಗಳನ್ನು ರೇಟಿಂಗ್‌ಗೆ ಪರಿಗಣಿಸಲಾಗುತ್ತದೆ.

‘ಜಡೇಜ ಅವರು ಭಾರತದ ಶ್ರೇಷ್ಠ ಆಟಗಾರ ಆಗಿರುವುದಕ್ಕೆ ಬೆರಗು ಮೂಡಿಸೆ. ಟೆಸ್ಟ್‌ ತಂಡದಲ್ಲಿ ಅಷ್ಟು ಸುಲಭವಾಗಿ ಅವರು ಸ್ಥಾನ ಗಳಿಸಿಲ್ಲ. ಕಠಿಣ ಪರಿಶ್ರಮದಿಂದ ಪ್ರಮುಖ ಬೌಲರ್ ಆಗಿ ರೂಪುಗೊಂಡಿದ್ದಾರೆ.‌ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡುವ ಅವರು ತಂಡಕ್ಕೆ ಉತ್ತಮ ಕೊಡುಗೆ ನೀಡಬಲ್ಲರು’ ಎಂದು ಕ್ರಿಕ್‌ವಿಜ್‌ನ ದತ್ತಾಂಶ ವಿಶ್ಲೇಷಕ ಫ್ರೆಡ್ಡಿ ವೈಲ್ಡ್‌ ಹೇಳಿದ್ದಾರೆ.

‘ಜಡೇಜ ಅವರಬ್ಯಾಟಿಂಗ್ ಮತ್ತು ಬೌಲಿಂಗ್ ಸರಾಸರಿ 10.62. ಈ ಸರಾಸರಿಯು ಶತಮಾನದಲ್ಲಿ 1000ಕ್ಕಿಂತ ಹೆಚ್ಚು ರನ್‌ ಮತ್ತು 150 ವಿಕೆಟ್‌ ಗಳಿಸಿರುವ ವಿಶ್ವದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಅವರನ್ನು ನಿಲ್ಲಿಸಿದೆ’ ಎಂದು ಫ್ರೆಡ್ಡಿ ವಿಶ್ಲೇಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT