ಗುರುವಾರ , ನವೆಂಬರ್ 21, 2019
20 °C

‘ಕಮಿಂಗ್ ಸೂನ್’ ಎಂದ ಬೂಮ್ರಾ ಕಾಲೆಳೆದ ಮಹಿಳಾ ಕ್ರಿಕೆಟರ್

Published:
Updated:

ಲಂಡನ್‌: ಬೆನ್ನು ನೋವಿನ ಸಮಸ್ಯೆಯಿಂದಾಗಿ ವಿಶ್ರಾಂತಿಯಲ್ಲಿರುವ ಜಸ್‌ಪ್ರೀತ್‌ ಬೂಮ್ರಾ ಅವರು ಇನ್‌ಸ್ಟಾಗ್ರಾಂನಲ್ಲಿ ‘ಶೀಘ್ರದಲ್ಲೇ ಮರಳಲಿದ್ದೇನೆ’ ಎಂದು ತಮ್ಮ ಚಿತ್ರವೊಂದನ್ನು ಪೋಸ್ಟ್‌ ಮಾಡಿಕೊಂಡಿದ್ದಾರೆ. ಈ ಚಿತ್ರಕ್ಕೆ ಕಾಮೆಂಟ್‌ ಮಾಡಿರುವ ಇಂಗ್ಲೆಂಡ್‌ ಮಹಿಳಾ ಕ್ರಿಕೆಟರ್‌ ಡೇನಿಯಲ್‌ ವ್ಯಾಟ್‌, ಬೂಮ್ರಾ ಕಾಲೆಳೆದಿದ್ದಾರೆ.

ಸದ್ಯ ಇಂಗ್ಲೆಂಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬೂಮ್ರಾ, ಜಿಮ್‌ನಲ್ಲಿ ವರ್ಕೌಟ್‌ ಮುಗಿಸಿ ಕನ್ನಡಿ ಮುಂದೆ ನಿಂತು ಸೆಲ್ಫಿಯೊಂದನ್ನು ಕ್ಲಿಕ್ಕಿಸಿಕೊಂಡಿದ್ದರು. ಅದನ್ನು ‘comming soon’ ಎಂಬ ಒಕ್ಕಣೆ ಹಾಗೂ ಬಲಿಷ್ಟ ತೋಳನ್ನು ಬಿಂಬಿಸುವ ಇಮೋಜಿಯೊಂದಿಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದರು. ಚಿತ್ರವನ್ನು 3 ಲಕ್ಷಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದರು. 1.6 ಸಾವಿರಕ್ಕೂ ಜನರು ಪ್ರತಿಕ್ರಿಯಿಸಿ ಶುಭಕೋರಿದ್ದರು.

 
 
 
 

 
 
 
 
 
 
 
 
 

Coming soon! 💪🏼

A post shared by jasprit bumrah (@jaspritb1) on

ಇದೇ ಚಿತ್ರಕ್ಕೆ ವ್ಯಾಟ್‌ ಕೂಡ ಕಾಮೆಂಟ್‌ ಮಾಡಿದ್ದು, ಬೂಮ್ರಾ ತೋಳಿನ ಕುರಿತು ‘ಮಗುವಿನ ತೋಳಿನ ತೂಕದಂತಿದೆ’ ಎಂದು ಕಿಚಾಯಿಸಿದ್ದಾರೆ.

25 ವರ್ಷ ವಯಸ್ಸಿನ ಬೂಮ್ರಾ, ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರು ವಿಶ್ವಕಪ್‌ ಮುಗಿದ ನಂತರ ಕೇವಲ ಎರಡು ಪಂದ್ಯಗಳಲ್ಲಿ ಮಾತ್ರವೇ ಕಣಕ್ಕಿಳಿದಿದ್ದಾರೆ. ಇದುವರೆಗೆ 58 ಏಕದಿನ ಪಂದ್ಯಗಳನ್ನಾಡಿರುವ ವೇಗಿ 103 ವಿಕೆಟ್‌ ಉರುಳಿಸಿದ್ದಾರೆ. ಟೆಸ್ಟ್‌ ಹಾಗೂ ಟಿ20 ಮಾದರಿಯಲ್ಲಿ ಕ್ರಮವಾಗಿ 12 ಮತ್ತು 42 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 62 ಹಾಗೂ 51 ವಿಕೆಟ್‌ ಕಬಳಿಸಿದ್ದಾರೆ.

ಪ್ರತಿಕ್ರಿಯಿಸಿ (+)