ಮುಂಬೈ : ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಅವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ವರ್ಷದ ಶ್ರೇಷ್ಠ ಆಟಗಾರನಿಗೆ ನೀಡುವ ಪ್ರತಿಷ್ಠಿತ ಪಾಲಿ ಉಮ್ರಿಗರ್ ಗೌರವಕ್ಕೆ ಭಾಜನರಾಗಿದ್ದಾರೆ. ಜೊತೆಗೆ ದಿಲೀಪ್ ಸರ್ದೇಸಾಯಿ ಪ್ರಶಸ್ತಿಯನ್ನೂ ಪಡೆದಿದ್ದಾರೆ.

ಉಮ್ರಿಗರ್ ಪ್ರಶಸ್ತಿಯು ₹15 ಲಕ್ಷದ ಚೆಕ್, ಟ್ರೋಫಿ ಮತ್ತು ಪ್ರಮಾಣ ಪತ್ರವನ್ನು ಒಳಗೊಂಡಿದೆ.

ಟೆಸ್ಟ್ ಮಾದರಿಯಲ್ಲಿ ಅತೀ ಹೆಚ್ಚು ವಿಕೆಟ್ ಮತ್ತು ಅತೀ ಹೆಚ್ಚು ರನ್ ಬಾರಿಸಿದವರಿಗೆ ಸರ್ದೇಸಾಯಿ ಪುರಸ್ಕಾರ ನೀಡಲಾಗುತ್ತದೆ. ಬೂಮ್ರಾ ಅವರು 2018–19ನೇ ಋತುವಿನಲ್ಲಿ ಆರು ಪಂದ್ಯಗಳಿಂದ 34 ವಿಕೆಟ್ ಉರುಳಿಸಿದ್ದರು. ಚೇತೇಶ್ವರ ಪೂಜಾರ ಅವರೂ ಈ ಗೌರವಕ್ಕೆ ಭಾಜನರಾಗಿದ್ದಾರೆ. ಈ ಪ್ರಶಸ್ತಿ ₹ 2 ಲಕ್ಷದ ಚೆಕ್ ಮತ್ತು ಟ್ರೋಫಿಯನ್ನು ಒಳಗೊಂಡಿದೆ.

ಕರ್ನಾಟಕದ ಮಯಂಕ್ ಅಗರವಾಲ್ ಅವರು ‘ಬೆಸ್ಟ್ ಇಂಟರ್‌ನ್ಯಾಷನಲ್ ಡೆಬ್ಯೂ’ ಪ್ರಶಸ್ತಿ ಪಡೆದಿದ್ದಾರೆ. ಮಹಿಳಾ ವಿಭಾಗದಲ್ಲಿ ಶಫಾಲಿ ವರ್ಮಾಗೆ ಈ ಗೌರವ ಒಲಿದಿದೆ.

ಪೂನಮ್ ಯಾದವ್ ಅವರು ‘ವರ್ಷದ ಶ್ರೇಷ್ಠ ಅಂತರರಾಷ್ಟ್ರೀಯ ಆಟಗಾರ್ತಿ’ ಹಿರಿಮೆಗೆ ಭಾಜನರಾಗಿದ್ದಾರೆ.

ಸ್ಮೃತಿ ಮಂದಾನ ಮತ್ತು ಜೂಲನ್ ಗೋಸ್ವಾಮಿ ಅವರು ಕ್ರಮವಾಗಿ ಏಕದಿನ ಮಾದರಿಯಲ್ಲಿ ಅತೀ ಹೆಚ್ಚು ರನ್ ಮತ್ತು ವಿಕೆಟ್ ಪಡೆದ ಆಟಗಾರ್ತಿ (2018–19ನೇ ಸಾಲಿನ) ಗೌರವ ಗಳಿಸಿದ್ದಾರೆ.

ಕೃಷ್ಣಮಾಚಾರಿ ಶ್ರೀಕಾಂತ್ ಮತ್ತು ಅಂಜುಮ್ ಚೋಪ್ರಾ ಅವರು ಸಿ.ಕೆ.ನಾಯ್ಡು ಜೀವಮಾನ ಸಾಧನೆ ಮತ್ತು ಬಿಸಿಸಿಐ ಜೀವಮಾನ ಸಾಧನೆ ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ. ಈ ಪ್ರಶಸ್ತಿಯು ₹ 25 ಲಕ್ಷದ ಚೆಕ್, ಟ್ರೋಫಿ ಮತ್ತು ಪ್ರಮಾಣಪತ್ರವನ್ನು ಒಳಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.