ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ-ಪಾಕ್ ಕ್ರಿಕೆಟ್ ಇತಿಹಾಸದಲ್ಲಿ ಮಿಯಾಂದಾದ್‍ನ ಕಪ್ಪೆ ಜಿಗಿತಕ್ಕೆ 27 ವರ್ಷ!

Last Updated 4 ಮಾರ್ಚ್ 2019, 14:07 IST
ಅಕ್ಷರ ಗಾತ್ರ

ಮುಂಬೈ: 1992ರ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿತ್ತು.ಈ ಪಂದ್ಯದಲ್ಲಿ ಭಾರತದ ವಿಕೆಟ್ ಕೀಪರ್ ಕಿರಣ್ ಮೋರೆಯನ್ನು ರೇಗಿಸಿ ಪಾಕ್ ಬ್ಯಾಟ್ಸ್‌ಮೆನ್ಜಾವೇದ್ ಮಿಯಾಂದಾದ್ ಕ್ರೀಸ್‍ನಲ್ಲಿ ಮಾಡಿದ ಕಪ್ಪೆ ಜಿಗಿತಕ್ಕೆ ಇಂದಿಗೆ 27 ವರ್ಷ. ಈಪಂದ್ಯದಲ್ಲಿ ಮಿಯಾಂದಾದ್‍- ಕಿರಣ್ ಮೋರೆ ನಡುವಿನ ಜಗಳ ಕ್ರಿಕೆಟ್ ಪ್ರೇಮಿಗಳು ಮರೆತಿರಲಿಕ್ಕಿಲ್ಲ.

1992 ಮಾರ್ಚ್ 4ರಂದು ಸಿಡ್ನಿಯಲ್ಲಿ ನಡೆದ ಭಾರತ - ಪಾಕ್ ಪಂದ್ಯದಲ್ಲಿ ಭಾರತ 43 ರನ್‍ಗಳಿಂದ ಗೆಲುವು ಸಾಧಿಸಿತ್ತು.ಸಚಿನ್ ತೆಂಡೂಲ್ಕರ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಗೆದ್ದಿದ್ದರು.

ಪ್ರಸ್ತುತ ಪಂದ್ಯದಲ್ಲಿ 19 ಓವರ್‌ಗಳಲ್ಲಿ ಭಾರತ 216 ರನ್ ಗಳಿಸಿತ್ತು.ಈ ಗುರಿ ಬೆನ್ನತ್ತಿದ ಪಾಕಿಸ್ತಾನದ ವಿಕೆಟ್‍ಗಳು ಉರುಳುತ್ತಿದ್ದವು. ಹೀಗಿರುವಾಗ ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‍ಗಿಳಿದಿದ್ದ ಮಿಯಾಂದಾದ್ ಮೇಲೆ ಒತ್ತಡ ಜಾಸ್ತಿಯೇ ಇತ್ತು.ವಿಕೆಟ್ ಹಿಂದೆ ನಿಂತು ಬೌಲರ್ ಗಳನ್ನು ಹುರಿದುಂಬಿಸುತ್ತಿದ್ದ ಮೋರೆ, ಜಿಗಿಯುತ್ತಾ ಅಪೀಲ್ ಮಾಡುತ್ತಿದ್ದರು.ಈ ಬಗ್ಗೆ ಮಿಯಾಂದಾದ್ ಮತ್ತು ಮೋರೆ ನಡುವೆ ವಾಗ್ವಾದವೂ ನಡೆದು ಮಿಯಾಂದಾದ್ಅಂಪೈರ್ ಡೇವಿಡ್ ಶೆಫರ್ಡ್ ಗೆ ದೂರು ನೀಡಿದ್ದರು.

ಆನಂತರ ಸಚಿನ್ ಎಸೆತವನ್ನು ಮಿಯಾಂದಾದ್ ಎದುರಿಸಿದಾಗ ಮೋರೆ ಬೇಲ್ಸ್ ಬೀಳಿಸಿ ಅಪೀಲ್ ಮಾಡಿದರು. ಆದರೆ ಅಂಪೈರ್ ಔಟ್ ಅಲ್ಲ ಅಂದರು.
ಈ ಮನವಿಗೆಕೋಪಗೊಂಡ ವಿಯಾಂದಾದ್ ಮೂರು ಬಾರಿ ಕಪ್ಪೆ ಜಿಗಿದಂತೆ ಜಿಗಿದು ಮೋರೆಗೆ ಟಾಂಗ್ನೀಡಿದರು.ಕ್ರಿಕೆಟ್ ಮೈದಾನದಲ್ಲಿ ಮಿಯಾಂದಾದ್‍ನ ಈ ಜಿಗಿತ ಕ್ರಿಕೆಟ್ ಮೈದಾನದಲ್ಲಿನ ಜಗಳಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT