ಶನಿವಾರ, ಜನವರಿ 22, 2022
16 °C

ಧೋನಿ ಚಿತ್ರ ಹಂಚಿದ ಜಾನ್ ಸೆನಾ; ಅಭಿಮಾನಿಗಳಲ್ಲಿ ಕುತೂಹಲ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ಡಬ್ಲ್ಯುಡಬ್ಲ್ಯುಇ ತಾರೆ ಜಾನ್ ಸೆನಾ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದು ಅಭಿಮಾನಿಗಳಲ್ಲಿ ಕುತೂಹಲವನ್ನು ಮೂಡಿಸಿದೆ.

ಚಿತ್ರದಲ್ಲಿ ಸ್ಟೇಡಿಯಂ ಮೆಟ್ಟಿಲು ಇಳಿಯುತ್ತಿರುವ ಧೋನಿ, ಯಾರಿಗೋ ಕೈಕುಲುಕಲು ಕೈ ಚಾಚುತ್ತಿರುವುದು ಕಂಡುಬಂದಿದೆ. ಆದರೆ ಜಾನ್ ಸೆನಾ ಯಾವುದೇ ಕ್ಯಾಪ್ಷನ್ ಹಾಕಿಲ್ಲ.

ಇದನ್ನೂ ಓದಿ: 

ಇನ್‌ಸ್ಟಾಗ್ರಾಂನಲ್ಲಿ ಇದನ್ನೇ ಹವ್ಯಾಸ ಮಾಡಿಕೊಂಡಿರುವ ಜಾನ್ ಸೆನಾ, ತಾವು ಪೋಸ್ಟ್ ಮಾಡುವ ಚಿತ್ರಗಳಿಗೆ ಕ್ಯಾಪ್ಷನ್ ಕೊಡುವುದಿಲ್ಲ. ಅಲ್ಲದೆ ಅಭಿಮಾನಿಗಳು ತಮಗೆ ತಕ್ಕಂತೆ ವ್ಯಾಖ್ಯಾನ ಮಾಡಿಕೊಳ್ಳಬಹುದಾಗಿದೆ.

'ಧೋನಿ ಅವರಿಗೆ ಜಾನ್ ಸೆನಾ ಕೈಕುಲುಕುತ್ತಿದ್ದಾರೆ' ಎಂದು ಅಭಿಮಾನಿಯೊಬ್ಬರು ವ್ಯಾಖ್ಯಾನಿಸಿದ್ದಾರೆ. 'ಒಂದೇ ಫ್ರೇಮ್‌ನಲ್ಲಿ ಇಬ್ಬರು ದಿಗ್ಗಜರು' ಎಂದು ಮಗದೊಬ್ಬರು ಕಮೆಂಟ್ ಮಾಡಿದ್ದಾರೆ.

ಕಳೆದ ತಿಂಗಳು ಧೋನಿ ಮುಂದಾಳತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್‌ನಲ್ಲಿ ನಾಲ್ಕನೇ ಬಾರಿಗೆ ಟ್ರೋಫಿ ಜಯಿಸಿತ್ತು. ಬಳಿಕ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಮಾರ್ಗದರ್ಶಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಆದರೆ ಭಾರತ ಸೆಮಿಫೈನಲ್ ತಲುಪಲು ವಿಫಲವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು