ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌ ಟೂರ್ನಿ: ಕರುಣ್‌, ಸುಚಿತ್‌ ಶತಕ

ಕ್ಯಾಪ್ಟನ್‌ ಕೆ.ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌ ಟೂರ್ನಿ: ದೇವಯ್ಯಗೆ ಎಂಟು ವಿಕೆಟ್‌
Last Updated 12 ಜುಲೈ 2019, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅನುಭವಿ ಬ್ಯಾಟ್ಸ್‌ಮನ್‌ ಕರುಣ್‌ ನಾಯರ್‌ (142; 215ಎ, 16ಬೌಂ) ಮತ್ತು ಆಲ್‌ರೌಂಡರ್‌ ಜೆ.ಸುಚಿತ್‌ (ಬ್ಯಾಟಿಂಗ್‌ 101; 164ಎ, 9ಬೌಂ) ನಗರದ ಹೊರವಲಯದಲ್ಲಿರುವ ಆಲೂರಿನ ಮೊದಲನೇ ಮೈದಾನದಲ್ಲಿ ಶುಕ್ರವಾರ ಹಿಮಾಚಲ ಪ್ರದೇಶ ಕ್ರಿಕೆಟ್‌ ಸಂಸ್ಥೆ ತಂಡದ ಬೌಲರ್‌ಗಳನ್ನು ಕಾಡಿದರು.

ಇವರ ಶತಕಗಳ ಬಲದಿಂದ ಕೆಎಸ್‌ಸಿಎ ಇಲೆವನ್‌ ತಂಡವು ಕ್ಯಾಪ್ಟನ್‌ ಕೆ.ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಸೋಲಿನಿಂದ ಪಾರಾಯಿತು.

ಕೆಎಸ್‌ಸಿಎ ಇಲೆವನ್‌, ದಿನದಾಟದ ಅಂತ್ಯಕ್ಕೆ ಎರಡನೇ ಇನಿಂಗ್ಸ್‌ನಲ್ಲಿ 96 ಓವರ್‌ಗಳಲ್ಲಿ 9 ವಿಕೆಟ್‌ಗೆ 357ರನ್‌ ಕಲೆಹಾಕಿತು.

ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಭಾರತದ ಪರ ಆಡಿದ ಅನುಭವ ಹೊಂದಿರುವ ಕರುಣ್‌, ಕಲಾತ್ಮಕ ಹೊಡೆತಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ಅವರಿಗೆ ಡೇಗಾ ನಿಶ್ಚಲ್‌ (51) ಉತ್ತಮ ಬೆಂಬಲ ನೀಡಿದರು. ಈ ಜೋಡಿ 205 ಎಸೆತಗಳಲ್ಲಿ 109ರನ್‌ಗಳ ಜೊತೆಯಾಟವಾಡಿತು.

ಐಎಎಫ್‌ ಮೈದಾನದಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ ಕೆಎಸ್‌ಸಿಎ ಕಾರ್ಯದರ್ಶಿ ಇಲೆವನ್‌ ತಂಡ 7 ವಿಕೆಟ್‌ಗಳಿಂದ ಡಿ.ವೈ.ಪಾಟೀಲ ಅಕಾಡೆಮಿ ತಂಡದ ಎದುರು ಗೆದ್ದಿತು. ಕಾರ್ಯದರ್ಶಿ ಇಲೆವನ್‌ ತಂಡದ ಕೆ.ಎಸ್‌.ದೇವಯ್ಯ ಕೇವಲ 28 ರನ್‌ ನೀಡಿ ಎಂಟು ವಿಕೆಟ್‌ ಉರುಳಿಸಿದರು.

ಸಂಕ್ಷಿಪ್ತ ಸ್ಕೋರ್‌: ಕೆಎಸ್‌ಸಿಎ ಇಲೆವನ್‌: ಮೊದಲ ಇನಿಂಗ್ಸ್‌; 76.2 ಓವರ್‌ಗಳಲ್ಲಿ 273 ಮತ್ತು 96 ಓವರ್‌ಗಳಲ್ಲಿ 9 ವಿಕೆಟ್‌ಗೆ 357 (ಡೇಗಾ ನಿಶ್ಚಲ್‌ 51, ಕರುಣ್‌ ನಾಯರ್‌ 142, ಜೆ.ಸುಚಿತ್‌ ಬ್ಯಾಟಿಂಗ್‌ 101, ಟಿ.ಪ್ರದೀಪ 34; ಅರ್ಪಿತ್‌ ಗುಲೇರಿಯಾ 96ಕ್ಕೆ5, ಅಂಕುಶ್‌ ಬೇಡಿ 71ಕ್ಕೆ3).

ಹಿಮಾಚಲ ಪ್ರದೇಶ ಕ್ರಿಕೆಟ್‌ ಸಂಸ್ಥೆ: 85.5 ಓವರ್‌ಗಳಲ್ಲಿ 260.

ಆಲೂರಿನ ಎರಡನೇ ಮೈದಾನ: ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ ಇಲೆವನ್‌: 148 ಓವರ್‌ಗಳಲ್ಲಿ 7 ವಿಕೆಟ್‌ಗೆ 500 ಡಿಕ್ಲೇರ್ಡ್‌ ಮತ್ತು 19 ಓವರ್‌ಗಳಲ್ಲಿ 1 ವಿಕೆಟ್‌ಗೆ 42 (ಜಹುರುಲ್‌ ಇಸ್ಲಾಂ 25).

ವಿದರ್ಭ ಕ್ರಿಕೆಟ್‌ ಸಂಸ್ಥೆ: 94.4 ಓವರ್‌ಗಳಲ್ಲಿ 353 (ಅಕ್ಷಯ್‌ ಕೊಲ್ಹಾರ್‌ 62, ಅಥರ್ವ ದೇಶಪಾಂಡೆ 91, ಅಥರ್ವ ತೈದೆ 45, ಯಶ್‌ ರಾಥೋಡ್‌ 29, ಅಕ್ಷಯ್‌ ವಾಡ್ಕರ್‌ 29, ದರ್ಶನ್‌ ನಾಲ್ಕಂಡೆ ಔಟಾಗದೆ 34; ತೈಜುಲ್‌ ಇಸ್ಲಾಂ 89ಕ್ಕೆ8).

ಆಲೂರಿನ ಮೂರನೇ ಮೈದಾನ: ಬಂಗಾಳ ಕ್ರಿಕೆಟ್‌ ಸಂಸ್ಥೆ: 72.2 ಓವರ್‌ಗಳಲ್ಲಿ 213 ಮತ್ತು 95.5 ಓವರ್‌ಗಳಲ್ಲಿ 242 (ಅಂಕುರ್‌ ಪಾಲ್‌ 63, ಖಾಜಿ ಜುನೈದ್‌ ಸೈಫಿ 52, ರಂಜೋತ್‌ ಸಿಂಗ್‌ 32, ಮಿತಿಲೇಶ್‌ ದಾಸ್‌ ಔಟಾಗದೆ 27; ಕೆ.ಎಂ.ಆಸೀಫ್‌ 64ಕ್ಕೆ2, ಅಕ್ಷಯ್‌ ಚಂದ್ರನ್‌ 31ಕ್ಕೆ5).

ಕೇರಳ ಕ್ರಿಕೆಟ್‌ ಸಂಸ್ಥೆ: 72.3 ಓವರ್‌ಗಳಲ್ಲಿ 209 ಮತ್ತು 18 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 63 (ಪಿ.ರಾಹುಲ್‌ ಬ್ಯಾಟಿಂಗ್‌ 36).

ಬಿಜಿಎಸ್‌ ಮೈದಾನ: ಛತ್ತೀಸಗಡ ರಾಜ್ಯ ಕ್ರಿಕೆಟ್‌ ಸಂಘ: 114 ಓವರ್‌ಗಳಲ್ಲಿ 327 (ಸಂತೋಕ್‌ ಸಿಂಗ್‌ 64ಕ್ಕೆ2, ಎಂ.ವೆಂಕಟೇಶ್‌ 51ಕ್ಕೆ3).

ಕೆಎಸ್‌ಸಿಎ ಕೋಲ್ಟ್ಸ್‌ ಇಲೆವನ್‌: 123 ಓವರ್‌ಗಳಲ್ಲಿ 334 (ಸುಜಯ್‌ ಸಾತೇರಿ 85, ಎಸ್‌.ಜೆ.ನಿಕಿನ್‌ ಜೋಸ್‌ 37, ಪ್ರಣವ್‌ ಭಾಟಿಯಾ 53, ಎಂ.ವೆಂಕಟೇಶ್‌ 32; ವೀರಪ್ರತಾಪ್‌ ಸಿಂಗ್‌ 60ಕ್ಕೆ3, ಸೌರಭ್‌ ಖೈರಾವರ್‌ 60ಕ್ಕೆ4, ಶಶಾಂಕ್‌ 49ಕ್ಕೆ2).

ಜಸ್ಟ್‌ ಕ್ರಿಕೆಟ್‌ ಮೈದಾನ: ಮುಂಬೈ ಕ್ರಿಕೆಟ್‌ ಸಂಸ್ಥೆ: 114 ಓವರ್‌ಗಳಲ್ಲಿ 386 (ವಿಜಯ್‌ ಗೋಹಿಲ್‌ ಔಟಾಗದೆ 55; ವಿಕಾಸ್‌ ಜೊಹ್ರಾರ್‌ 81ಕ್ಕೆ3, ಮಹಿಪಾಲ್‌ ಲೊಮರೊರ್‌ 48ಕ್ಕೆ3).

ಟೀಮ್‌ ರಾಜಸ್ಥಾನ: 111.3 ಓವರ್‌ಗಳಲ್ಲಿ 366 (ಮಹಿಪಾಲ್‌ ಲೊಮರೊರ್‌ 43, ಆದಿತ್ಯ ಗರ್ಹಾವಲ್‌ 51, ರಾಬಿನ್‌ ಬಿಷ್ಠ್‌ 47; ರಾಯ್‌ಸ್ಟನ್‌ ದಿಯಾಸ್‌ 54ಕ್ಕೆ2, ವಿಜಯ್‌ ಗೋಹಿಲ್‌ 79ಕ್ಕೆ4, ಶಶಾಂಕ್‌ 74ಕ್ಕೆ2).

ಐಎಎಫ್‌ ಮೈದಾನ: ಡಾ.ಡಿ.ವೈ.ಪಾಟೀಲ ಅಕಾಡೆಮಿ: 69.5 ಓವರ್‌ಗಳಲ್ಲಿ 266 ಮತ್ತು 25.3 ಓವರ್‌ಗಳಲ್ಲಿ 77 (ಕೆ.ಎಸ್‌.ದೇವಯ್ಯ 28ಕ್ಕೆ8, ಸಿ.ಎ.ಕಾರ್ತಿಕ್‌ 28ಕ್ಕೆ2).

ಕೆಎಸ್‌ಸಿಎ ಕಾರ್ಯದರ್ಶಿ ಇಲೆವನ್‌: 65.5 ಓವರ್‌ಗಳಲ್ಲಿ 227 ಮತ್ತು 34.2 ಓವರ್‌ಗಳಲ್ಲಿ 3 ವಿಕೆಟ್‌ಗೆ 117 (ಪೃಥ್ವಿ ವರದರಾಜನ್‌ 40, ಅಭಿನವ್‌ ಮನೋಹರ್‌ 30; ಶುಭಂ ರಂಜಾನೆ 37ಕ್ಕೆ2). ಫಲಿತಾಂಶ: ಕೆಎಸ್‌ಸಿಎ ಕಾರ್ಯದರ್ಶಿ ಇಲೆವನ್‌ಗೆ 7 ವಿಕೆಟ್‌ ಗೆಲುವು ಹಾಗೂ ಆರು ಪಾಯಿಂಟ್ಸ್‌.

ಅಧ್ಯಕ್ಷರ ಇಲೆವೆನ್‌ ಗೆಲುವಿಗೆ 284 ರನ್ ಗುರಿ
ಮೈಸೂರು:
ಮಧ್ಯಪ್ರದೇಶ ಕ್ರಿಕೆಟ್‌ ಸಂಸ್ಥೆ ತಂಡ ಇಲ್ಲಿ ನಡೆಯುತ್ತಿರುವ ಕೆ.ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಕೆಎಸ್‌ಸಿಎ ಅಧ್ಯಕ್ಷರ ಇಲೆವೆನ್‌ ತಂಡದ ಗೆಲುವಿಗೆ 284 ರನ್‌ಗಳ ಗುರಿ ನೀಡಿದೆ.

ಸಂಕ್ಷಿಪ್ತ ಸ್ಕೋರ್: ಎಸ್‌ಜೆಸಿಇ (ಮೈಸೂರು): ಮಧ್ಯಪ್ರದೇಶ ಕ್ರಿಕೆಟ್‌ ಸಂಸ್ಥೆ: 202 ಮತ್ತು 90.4 ಓವರ್‌ಗಳಲ್ಲಿ 314 (ಆರ್ಯಮನ್‌ ಬಿರ್ಲಾ 40, ರಜತ್‌ ಪಾಟೀದಾರ್ 67, ನಮನ್‌ ಓಜಾ 30, ಗೌರವ್‌ ಯಾದವ್ 90, ವಿ.ಕೌಶಿಕ್ 70ಕ್ಕೆ 5, ಭವೇಶ್‌ ಗುಲೇಚಾ 82ಕ್ಕೆ 4). ಕೆಎಸ್‌ಸಿಎ ಅಧ್ಯಕ್ಷರ ಇಲೆವೆನ್: 233 ಮತ್ತು 27 ಓವರ್‌ಗಳಲ್ಲಿ 3 ವಿಕೆಟ್‌ಗೆ 98 (ಲಿಯಾನ್‌ ಖಾನ್ 42, ಪವನ್‌ ದೇಶಪಾಂಡೆ ಬ್ಯಾಟಿಂಗ್ 21)

ಪಿಇಟಿ ಮೈದಾನ (ಮಂಡ್ಯ): ಆಂಧ್ರ ಕ್ರಿಕೆಟ್‌ ಸಂಸ್ಥೆ: 141 ಓವರ್‌ಗಳಲ್ಲಿ 9 ವಿಕೆಟ್‌ಗೆ 536 ಡಿಕ್ಲೇರ್ಡ್. ಜಾರ್ಖಂಡ್‌ ಕ್ರಿಕೆಟ್‌ ಸಂಸ್ಥೆ: 168 ಮತ್ತು 38.2 ಓವರ್‌ಗಳಲ್ಲಿ 189 (ಸೌರಭ್‌ ತಿವಾರಿ 101, ಅಂಕುಲ್‌ ರಾಯ್ 52, ಕೆ.ವಿ.ಶಶಿಕಾಂತ್ 40ಕ್ಕೆ 4, ಮನೀಷ್ 49ಕ್ಕೆ 3)

ಫಲಿತಾಂಶ: ಆಂಧ್ರ ಕ್ರಿಕೆಟ್‌ ಸಂಸ್ಥೆಗೆ ಇನಿಂಗ್ಸ್‌ ಮತ್ತು 179 ರನ್‌ ಗೆಲುವು; 7 ಪಾಯಿಂಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT