ಬೆಂಗಳೂರು: ಬೃಹತ್ ಗುರಿ ಬೆನ್ನತ್ತಿದ ಕರ್ನಾಟಕ ತಂಡ ಬಿಸಿಸಿಐ ಆಯೋಜಿಸಿರುವ 25 ವರ್ಷದೊಳಗಿನವರ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಅಮೋಘ ಜಯ ಸಾಧಿಸಿತು. ಆಲೂರು ಒಂದನೇ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಆತಿಥೇಯ ತಂಡ ಮೂರು ವಿಕೆಟ್‌ಗಳ ಜಯ ಸಾಧಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 50 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 345 ರನ್ ಗಳಿಸಿತ್ತು. ಇದಕ್ಕೆ ಉತ್ತರಿಸಿದ ಕರ್ನಾಟಕ ಇನ್ನೂ ಎರಡು ಎಸೆತ ಬಾಕಿ ಇರುವಾಗ 7 ವಿಕೆಟ್ ಕಳೆದುಕೊಂಡು 351 ರನ್ ಗಳಿಸಿತು. ಈ ಮೂಲಕ ಸೆಮಿಫೈನಲ್ ಪ್ರವೇಶಿಸಿತು.

ಲವನೀತ್ ಸಿಸೋಡಿಯ 20 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಎರಡು ಸಿಕ್ಸರ್ ಸಿಡಿಸಿ 48 ರನ್ ಗಳಿಸಿದರೆ ಶಿವಕುಮಾರ್ 52 ಎಸೆತಗಳಲ್ಲಿ 52 ರನ್ ಗಳಿಸಿದರು. ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್ ಅವರ ಇನಿಂಗ್ಸ್‌ನಲ್ಲಿದ್ದವು. ಅನೀಶ್ ಕೆವಿ 66 ಎಸೆತಗಳಲ್ಲಿ 56, ಕೃತಿಕ್ ಕೃಷ್ಣ 63 ಎಸೆತಗಳಲ್ಲಿ 65, ಮನೋಜ್ ಭಾಂಡಗೆ 40 ಎಸೆಗಳಲ್ಲಿ 3 ಬೌಂಡರಿ ಮತ್ತು 5 ಸಿಕ್ಸರ್ ಒಳಗೊಂಡ 67 ರನ್ ಗಳಿಸಿ ಔಟಾಗದೆ ಉಳಿದರು.

ಸಂಕ್ಷಿಪ್ತ ಸ್ಕೋರು: ಮುಂಬೈ: 50 ಓವರ್‌ಗಳಲ್ಲಿ 6ಕ್ಕೆ 345 (ಭೂಪೇನ್ ಲಾಲ್ವಾನಿ 30, ದಿವ್ಯಾಂಶ್ 76, ರುದ್ರ ಧಂಡೆ 74, ಓಎಚ್ ಜಾಧವ್ 78, ಖಿಜರ್ ದಫೇದಾರ್ 72; ನಿಶ್ಚಿತ್ ರಾವ್ 47ಕ್ಕೆ4); ಕರ್ನಾಟಕ: 49.4 ಓವರ್‌ಗಳಲ್ಲಿ 7ಕ್ಕೆ 351 (ಲವನೀತ್ ಸಿಸೋಡಿಯ 48, ಶಿವಕುಮಾರ್ ಬಿಯು 52, ಅನೀಶ್ ಕೆ.ವಿ 56, ಕೃತಿಕ್ ಕೃಷ್ಣ 65, ಶುಭಾಂಗ್ ಹೆಗ್ಡೆ 38, ಮನೋಜ್ ಭಾಂಡಗೆ ಔಟಾಗದೆ 67). ಫಲಿತಾಂಶ: ಕರ್ನಾಟಕಕ್ಕೆ 3 ವಿಕೆಟ್‌ಗಳ ಜಯ.

ಶಿವಕುಮಾರ್‌ಗೆ 4 ವಿಕೆಟ್

ಶಿವಕುಮಾರ್ ಮತ್ತು ಯಶೋವರ್ಧನ್ ಅವರ ಅತ್ಯುತ್ತಮ ಬೌಲಿಂಗ್ ದಾಳಿಯ ನೆರವಿನಿಂದ ಕರ್ನಾಟಕ ತಂಡ 19 ವರ್ಷದೊಳಗಿನವರ ಕೂಚ್ ಬೆಹಾರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಮೇಲಗೈ ಸಾಧಿಸಿತು.

ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ದಿನ ಹರಿಯಾಣವನ್ನು 196 ರನ್‌ಗಳಿಗೆ ನಿಯಂತ್ರಿಸುವಲ್ಲಿ ಕರ್ನಾಟಕ ಯಶಸ್ವಿಯಾಗಿದೆ.

ಸಂಕ್ಷಿಪ್ತ ಸ್ಕೋರು: ಹರಿಯಾಣ: 91 ಓವರ್‌ಗಳಲ್ಲಿ 8ಕ್ಕೆ 196 (ಪಾರ್ಥ್ ವತ್ಸ್ 29, ಯಶ್ ವರ್ಧನ್ ಬ್ಯಾಟಿಂಗ್ 68, ಅಖಿಲ್ ಅಹಲಾವತ್ ಬ್ಯಾಟಿಂಗ್ 22; ಯಶೋವರ್ಧನ್ ಪರಾಂತಪ್ 27ಕ್ಕೆ2, ಶಶಿಕುಮಾರ್ ಕೆ 25ಕ್ಕೆ4).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.