ಮಂಗಳವಾರ, ಮೇ 18, 2021
30 °C
ಬಿಸಿಸಿಐ ಮಹಿಳಾ ಏಕದಿನ ಟ್ರೋಫಿ ಕ್ರಿಕೆಟ್ ಟೂರ್ನಿ

ಬಿಸಿಸಿಐ ಮಹಿಳಾ ಏಕದಿನ ಟ್ರೋಫಿ ಕ್ರಿಕೆಟ್: ವಿದರ್ಭಕ್ಕೆ ಮಣಿದ ಕರ್ನಾಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಡಿ.ಡಿ. ಕಸತ್ (ಔಟಾಗದೆ 126, 149 ಎಸೆತ, 15 ಬೌಂಡರಿ, 2 ಸಿಕ್ಸರ್‌) ಅವರ ಭರ್ಜರಿ ಶತಕದ ನೆರವಿಂದ ವಿದರ್ಭ ತಂಡವು ಕರ್ನಾಟಕ ತಂಡವನ್ನು ಮಣಿಸಿತು. ಚೆನ್ನೈನ ವಿ.ಬಿ.ನೆಸ್ಟ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಬಿಸಿಸಿಐ ಮಹಿಳಾ ಏಕದಿನ ಟ್ರೋಫಿ ಕ್ರಿಕೆಟ್‌ ಪಂದ್ಯದಲ್ಲಿ ನಾಲ್ಕು ರನ್‌ಗಳಿಂದ ಕರ್ನಾಟಕ ಸೋಲು ಅನುಭವಿಸಿತು.

ಆದರೆ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವುದರಿಂದ ಕರ್ನಾಟಕ ಕ್ವಾರ್ಟರ್‌ಫೈನಲ್‌ಗೆ ತಲುಪಿತು.

ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವಿದರ್ಭ ನಿಗದಿತ ಓವರ್‌ಗಳಲ್ಲಿ 5 ವಿಕೆಟ್‌ಗೆ 216 ರನ್‌ ಗಳಿಸಿತು.  ಕಸತ್ ಅಲ್ಲದೆ ಬಿ.ಎಸ್‌. ಫುಲ್ಮಾಲಿ (41) ಕೂಡ ಬ್ಯಾಟಿಂಗ್‌ನಲ್ಲಿ ಮಿಂಚಿದರು. ಕರ್ನಾಟಕ ತಂಡದ ಚಂದು ವಿ. ಎರಡು ವಿಕೆಟ್ ಗಳಿಸಿದರು.

ಗುರಿ ಬೆನ್ನತ್ತಿದ ಕರ್ನಾಟಕ 50 ಓವರ್‌ಗಳಲ್ಲಿ ಒಂಬತ್ತು ವಿಕೆಟ್‌ ಕಳೆದುಕೊಂಡು 212 ರನ್‌ ಕಲೆಹಾಕಿತು. ಗೆಲುವಿಗೆ ಶುಭಾ ಎಸ್‌. (85) ಹಾಗೂ ದಿವ್ಯಾ ಜಿ. (57) ಅವರು ನಡೆಸಿದ ಪ್ರಯತ್ನ ವ್ಯರ್ಥವಾಯಿತು. ವಿದರ್ಭದ ಜಿ.ಎಸ್‌.ವಾಂಕರ್‌, ಡಿ.ಡಿ. ಕಸತ್‌ ತಲಾ ಎರಡು ಹಾಗೂ ಎನ್‌.ಟಿ ಕೊಹ್ಲೆ ಮೂರು ವಿಕೆಟ್ ತಮ್ಮದಾಗಿಸಿಕೊಂಡರು.

ಸಂಕ್ಷಿಪ್ತ ಸ್ಕೋರು:

ವಿದರ್ಭ: 50 ಓವರ್‌ಗಳಲ್ಲಿ 5 ವಿಕೆಟ್‌ಗೆ 216 (ಡಿ.ಡಿ.ಕಸತ್‌ ಔಟಾಗದೆ 126, ಬಿ.ಎಸ್‌.ಫುಲ್ಮಾಲಿ 41, ಸ್ನೇಹಲ್ ಮನಿಯಾರ್ 16; ಚಂದು ವಿ. 44ಕ್ಕೆ 2, ರಾಮೇಶ್ವರಿ ಗಾಯಕವಾಡ್‌ 33ಕ್ಕೆ 1, ಆಕಾಂಕ್ಷಾ ಕೊಹ್ಲಿ 36ಕ್ಕೆ 1).

ಕರ್ನಾಟಕ: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 212 (ಎಸ್‌. ಶುಭಾ 85, ಜಿ.ದಿವ್ಯಾ 57, ರಕ್ಷಿತಾ ಕೆ. 15; ಜಿ.ಎಸ್‌.ವಾಂಕರ್‌ 20ಕ್ಕೆ 2, ಡಿ.ಡಿ. ಕಸತ್‌ 44ಕ್ಕೆ 2, ಎನ್‌.ಟಿ.ಕೊಹ್ಲೆ 34ಕ್ಕೆ 3). ಫಲಿತಾಂಶ: ವಿದರ್ಭ ತಂಡಕ್ಕೆ ನಾಲ್ಕು ರನ್‌ಗಳ ಜಯ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು