ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದ ಕಿರಿಯರಿಗೆ ಪ್ರಶಸ್ತಿ

14 ವರ್ಷದೊಳಗಿನವರ ದಕ್ಷಿಣ ವಲಯ ಕ್ರಿಕೆಟ್‌ ಟೂರ್ನಿ
Last Updated 8 ಫೆಬ್ರುವರಿ 2020, 15:40 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಬಾಲಕರ ತಂಡದವರು 14 ವರ್ಷದೊಳಗಿನವರ ದಕ್ಷಿಣ ವಲಯ ಕ್ರಿಕೆಟ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ನಗರದ ಹೊರವಲಯದಲ್ಲಿರುವ ಆಲೂರಿನ ಮೊದಲನೇ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡ ತಮಿಳುನಾಡು ವಿರುದ್ಧ ಡ್ರಾ ಸಾಧಿಸಿತು.

ಇನಿಂಗ್ಸ್‌ ಮುನ್ನಡೆಯಿಂದಾಗಿ ಮೂರು ಪಾಯಿಂಟ್ಸ್‌ ಖಾತೆಗೆ ಹಾಕಿಕೊಂಡ ರಾಜ್ಯ ತಂಡವು ಒಟ್ಟು ಪಾಯಿಂಟ್ಸ್‌ ಅನ್ನು 20ಕ್ಕೆ ಹೆಚ್ಚಿಸಿಕೊಂಡು ಪ್ರಶಸ್ತಿಯ ಸಾಧನೆ ಮಾಡಿತು.

ಸಂಕ್ಷಿಪ್ತ ಸ್ಕೋರ್‌: ತಮಿಳುನಾಡು: ಮೊದಲ ಇನಿಂಗ್ಸ್‌; 71.2 ಓವರ್‌ಗಳಲ್ಲಿ 139 (ಆರ್‌.ಪ್ರವೀಣ್‌ ಔಟಾಗದೆ 39; ರಾಹುಲ್‌ ಬೆಲ್ಲದ್‌ 22ಕ್ಕೆ2, ಕೆ.ಪಿ.ಕಾರ್ತಿಕೇಯ 30ಕ್ಕೆ3, ಎಂ.ಬಿ.ಶಿವಂ 1ಕ್ಕೆ3).

ಕರ್ನಾಟಕ: ಪ್ರಥಮ ಇನಿಂಗ್ಸ್‌; 88.5 ಓವರ್‌ಗಳಲ್ಲಿ 230 (ರವಿ ಖೈರವ್ ರೆಡ್ಡಿ 30, ಕೆ.ಪಿ.ಕಾರ್ತಿಕೇಯ 48, ಆರ್ಯನ್‌ ಇಂಚಲ್‌ 43, ರಾಹುಲ್‌ ಬೆಲ್ಲದ್‌ 21; ಆರ್‌.ವಿ.ಹರಿ ಪ್ರಶಾಂತ್‌ 63ಕ್ಕೆ2, ಆರ್‌.ಕೆ.ಪ್ರಣವ್‌ ಸಭಾಪತಿ 36ಕ್ಕೆ2, ಆರ್‌.ಪ್ರವೀಣ್‌ 48ಕ್ಕೆ3).

ಫಲಿತಾಂಶ: ಡ್ರಾ; ಕರ್ನಾಟಕಕ್ಕೆ ಮೂರು ಪಾಯಿಂಟ್ಸ್‌.

ಆಲೂರಿನ ಎರಡನೇ ಮೈದಾನ:

ಗೋವಾ; ಮೊದಲ ಇನಿಂಗ್ಸ್‌: 59.4 ಓವರ್‌ಗಳಲ್ಲಿ 132 ಮತ್ತು 25 ಓವರ್‌ಗಳಲ್ಲಿ 1 ವಿಕೆಟ್‌ಗೆ 45.

ಕೇರಳ: ಪ್ರಥಮ ಇನಿಂಗ್ಸ್‌; 78.3 ಓವರ್‌ಗಳಲ್ಲಿ 9 ವಿಕೆಟ್‌ಗೆ 236 ಡಿಕ್ಲೇರ್ಡ್‌ (ಎಸ್‌.ಎಸ್‌.ಅಕ್ಷಯ್‌ 80).

ಫಲಿತಾಂಶ: ಡ್ರಾ, ಕೇರಳಕ್ಕೆ ಮೂರು ಪಾಯಿಂಟ್ಸ್‌.

ಆಲೂರಿನ ಮೂರನೇ ಮೈದಾನ:

ಪುದುಚೇರಿ; 90 ಓವರ್‌ಗಳಲ್ಲಿ 9 ವಿಕೆಟ್‌ಗೆ 194 ಡಿಕ್ಲೇರ್ಡ್‌ (ಜಿ.ಈಶ್ವರ್‌ ಋತ್ವಿಕ್‌ ಔಟಾಗದೆ 58). ಆಂಧ್ರ; ಮೊದಲ ಇನಿಂಗ್ಸ್‌: 71 ಓವರ್‌ಗಳಲ್ಲಿ 3 ವಿಕೆಟ್‌ಗೆ 238 (ಎಸ್‌.ವಿ.ರಾಹುಲ್‌ ಔಟಾಗದೆ 102). ಫಲಿತಾಂಶ: ಡ್ರಾ, ಆಂಧ್ರ ತಂಡಕ್ಕೆ ಮೂರು ಪಾಯಿಂಟ್ಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT