ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೂಚ್ ಬಿಹಾರ್ ಟ್ರೋಫಿ ಗೆದ್ದ ಕರ್ನಾಟಕ

Published : 15 ಜನವರಿ 2024, 21:34 IST
Last Updated : 15 ಜನವರಿ 2024, 21:34 IST
ಫಾಲೋ ಮಾಡಿ
Comments

ಶಿವಮೊಗ್ಗ/ಬೆಂಗಳೂರು: ಕರ್ನಾಟಕದ 19 ವರ್ಷದೊಳಗಿನವರ ತಂಡವು ಇದೇ ಮೊದಲ ಬಾರಿಗೆ ಕೂಚ್ ಬಿಹಾರ್ ಟ್ರೋಫಿ ಗೆದ್ದುಕೊಂಡಿತು. ಸಂಕ್ರಾಂತಿಯಂದು ಸಂಭ್ರಮದ ಹೊನಲು ಹರಿಸಿತು.

ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಮುಂಬೈ ಎದುರು ನಡೆದ ಫೈನಲ್‌ ಪಂದ್ಯದಲ್ಲಿ ಆತಿಥೇಯ ತಂಡದ  ಆರಂಭಿಕ ಬ್ಯಾಟರ್ ಪ್ರಖರ್ ಚತುರ್ವೇದಿ ಅಜೇಯ 404 ರನ್ ಗಳಿಸಿ ಯುವರಾಜ್ ಸಿಂಗ್ ದಾಖಲೆ ಮುರಿದರು. 

ಈ ಟೂರ್ನಿಯ 79 ವರ್ಷಗಳ ಇತಿಹಾಸ ದಲ್ಲಿ ಕರ್ನಾಟಕ ತಂಡವು ಮೊದಲ ಬಾರಿ ಚಾಂಪಿಯನ್ ಆಯಿತು. 

ಡ್ರಾ ಆದ ಪಂದ್ಯದಲ್ಲಿ ಮೊದಲ ಇನಿಂಗ್ಸ್ ಮುನ್ನಡೆ ಗಳಿಸಿದ್ದ ಆತಿಥೇಯರು ಪ್ರಶಸ್ತಿ ಮುಡಿಗೇರಿಸಿಕೊಂಡರು. 510 ರನ್‌ಗಳ ಮುನ್ನಡೆಯ ದಾಖಲೆಯನ್ನೂ ಬರೆಯಿತು.

ಪ್ರಖರ್‌ ಒಟ್ಟು 638 ಎಸೆತಗಳನ್ನು ಎದುರಿಸಿದರು. 46 ಬೌಂಡರಿ ಹಾಗೂ ಮೂರು ಸಿಕ್ಸರ್ ಹೊಡೆದರು. ತಂಡವು  8 ವಿಕೆಟ್‌ಗಳಿಗೆ 890 ರನ್‌ಗಳ ದಾಖಲೆಯ ಮೊತ್ತ ಪೇರಿಸಿತು. ಚಹಾ ವಿರಾಮಕ್ಕೆ ಮುನ್ನ ತನೀಶ್‌ ಮೆಹರ್‌ ಬೌಲಿಂಗ್‌ನಲ್ಲಿ ಸತತ 3 ಬೌಂಡರಿ ಬಾರಿ ಸಿದ ಪ್ರಖರ್ 400ರ ಗಡಿ ದಾಟಿದರು.

ಕರ್ನಾಟಕ ತಂಡಕ್ಕೆ ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್ ಹಾಗೂ ಮಾಜಿ ಸಚಿವ ಡಿ.ಎಚ್‌. ಶಂಕರಮೂರ್ತಿ ₹ 30 ಲಕ್ಷ ಚೆಕ್ ಹಾಗೂ ಟ್ರೋಫಿ ವಿತರಿಸಿದರು. ರನ್ನರ್‌ ಅಪ್ ಮುಂಬೈ ತಂಡ ₹ 15 ಲಕ್ಷ ಚೆಕ್, ಟ್ರೋಫಿ ಪಡೆಯಿತು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಮುಂಬೈ: 113.5 ಓವರ್‌ಗಳಲ್ಲಿ 380. ಕರ್ನಾಟಕ: 223 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 890 (ಪ್ರಖರ್ ಚತುರ್ವೇದಿ ಔಟಾಗದೆ 404, ಎಸ್‌.ಯು. ಕಾರ್ತಿಕ್ 50, ಹರ್ಷಿಲ್ ಧರ್ಮಾನಿ 169, ಕೆ.ಪಿ. ಕಾರ್ತಿಕೇಯ 72, ಹಾರ್ದಿಕ್ ರಾಜ್ 51, ಎನ್. ಸಮರ್ಥ್ ಔಟಗದೆ 55)
ಫಲಿತಾಂಶ: ಪಂದ್ಯ ಡ್ರಾ. ಮೊದಲ ಇನಿಂಗ್ಸ್‌ ಮುನ್ನಡೆ ಗಳಿಸಿದ ಕರ್ನಾಟಕ ಚಾಂಪಿಯನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT