ಗುರುವಾರ , ಏಪ್ರಿಲ್ 2, 2020
19 °C

ಬೇಸಿನ್, ಲಿಮೋಸಿನ್ ಮತ್ತು ವಿಜಯೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವೆಲ್ಲಿಂಗ್ಟನ್: ಬೇಸಿನ್ ರಿಸರ್ವ್ ಕ್ರೀಡಾಂಗಣದಲ್ಲಿ ಈಚೆಗೆ ನಡೆದ ಟೆಸ್ಟ್‌ ಪಂದ್ಯದಲ್ಲಿ ಭಾರತ ವಿರುದ್ಧ ಗೆದ್ದ ನ್ಯೂಜಿಲೆಂಡ್ ಆಟಗಾರರು ವಿಜಯೋತ್ಸವ ಆಚರಿಸಿದ್ದು ಲಿಮೋಸಿನ್ ಕಾರಿನಲ್ಲಿ!

ಹೌದು; ಆ ದಿನ ಪಂದ್ಯ ಗೆದ್ದ ನಂತರ ಕಿವೀಸ್ ವಿಕೆಟ್‌ಕೀಪರ್ ಬಿಜೆ ವಾಟ್ಲಿಂಗ್ ಲಿಮೊಸಿನ್ ಕಾರು ತಂದರು. ಜೊತೆಗೆ ದುಬಾರಿ ಬೆಲೆಯ ಸಿಗಾರ್ ಮತ್ತು ವೈನ್‌ ಬಾಟಲ್‌ಗಳನ್ನೂ ತುಂಬಿಕೊಂಡರು. ವೇಗದ ಬೌಲರ್‌ಗಳಾದ ಟಿಮ್ ಸೌಥಿ, ಟ್ರೆಂಟ್ ಬೌಲ್ಟ್‌, ಕಾಲಿನ್ ಡಿ ಗ್ರ್ಯಾಂಡ್‌ಹೋಮ್ ಮತ್ತು ಪದಾರ್ಪಣೆಯಲ್ಲಿ ಮಿಂಚಿದ ‘ಲಂಬೂಜಿ’ ಕೈಲ್ ಜೆಮಿಸನ್ ಅವರನ್ನು ಕಾರಿನಲ್ಲಿ ಹತ್ತಿಸಿಕೊಂಡ ವಾಟ್ಲಿಂಗ್ ಸೀದಾ ಡ್ರೈವ್ ಮಾಡಿದ್ದು ಮೌಂಟ್ ವಿಕ್ಟೋರಿಯಾ ಬೆಟ್ಟದ ತುತ್ತತುದಿಗೆ. ಇದು ವೆಲ್ಲಿಂಗ್ಟನ್‌ನ ಅತಿ ಎತ್ತರದ ತಾಣವಾಗಿದೆ. ಈ ಬೆಟ್ಟದ ನೆತ್ತಿಯಿಂದ ರಾತ್ರಿ ಹೊತ್ತಿನಲ್ಲಿ ನಗರದ ಸೌಂದರ್ಯ ಸವಿಯುವುದೇ ಒಂದು ವಿಶೇಷ ಅನುಭವ.  ಆ ತಾಣದಲ್ಲಿಯೇ ವೈನ್ ಮತ್ತು ಊಟದೊಂದಿಗೆ ಆಟಗಾರರು ಸಂಭ್ರಮಿಸಿದರು.

‘1998ರಿಂದಲೇ ಇಂತಹದೊಂದು ವಿಜಯೋತ್ಸವವನ್ನು ನ್ಯೂಜಿಲೆಂಡ್ ಆಟಗಾರರು ರೂಢಿಸಿಕೊಂಡಿದ್ದಾರೆ. ಆಗಲೂ ಇಲ್ಲಿ ನಡೆದಿದ್ದ ಭಾರತದ ವಿರುದ್ಧದ ಪಂದ್ಯದಲ್ಲಿ ಕಿವೀಸ್ ಗೆದ್ದಿತು. ಆ ತಂಡದಲ್ಲಿದ್ದ ಡಿಯೋನ್ ನ್ಯಾಷ್ ದಿಢೀರ್ ಮಾಡಿದ ಯೋಜನೆಯಿಂದಾಗಿ ಈ ವಿಜಯೋತ್ಸವ ಹುಟ್ಟಿಕೊಂಡಿತ್ತು. ಆಗ ಬಾಡಿಗೆಗೆ ತಂದ ಲಿಮೊಸಿನ್ ಕಾರಿನಲ್ಲಿ ಕೆಲವು ಆಟಗಾರರು ಮೌಂಟ್‌ ವಿಕ್ಟೋರಿಯಾಕ್ಕೆ ತೆರಳಿದ್ದರು’ ಎಂದು ಕ್ರಿಕೆಟಿಗ ಮತ್ತು ಇತಿಹಾಸಕಾರ ಡಾನ್ ನೀಲಿ ಅವರು ‘ಇಂಡಿಯನ್‌ ಎಕ್ಸ್‌ಪ್ರೆಸ್‌’ನಲ್ಲಿ ಪ್ರಕಟವಾಗಿರುವ ಲೇಖನದಲ್ಲಿ ನೆನಪಿಸಿಕೊಂಡಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು