ಬುಧವಾರ, ಏಪ್ರಿಲ್ 14, 2021
31 °C

ವಿರಾಟ್‌ ಕೊಹ್ಲಿ ಹೆಬ್ಬರಳಿಗೆ ಗಾಯ; ಆಟ ಆಡಲು ಅಡ್ಡಿಯಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೌತಾಂಪ್ಟನ್: ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತದ ಮೊದಲ ಪಂದ್ಯ ಬುಧವಾರ ನಿಗದಿಯಾಗಿದ್ದು, ಅಭ್ಯಾಸದ ವೇಳೆ ಭಾರತದ ತಂಡದ ನಾಯಕ ವಿರಾಟ್‌ ಕೊಹ್ಲಿ ಹೆಬ್ಬರಳಿಗೆ ಗಾಯ ಮಾಡಿಕೊಂಡಿದ್ದಾರೆ. 

ನೆಟ್ಸ್‌ನಲ್ಲಿ ಬ್ಯಾಟಿಂಗ್‌ ಅಭ್ಯಾಸ ಮಾಡುತ್ತಿದ್ದಾಗ ಕೊಹ್ಲಿ ಹೆಬ್ಬರಳಿಗೆ ಗಾಯವಾಗಿತ್ತು. ಆದರೆ, ಗಾಬರಿಯಾಗುವ ಅಗತ್ಯವಿಲ್ಲ, ಕೊಹ್ಲಿ ಸದೃಢರಾಗಿದ್ದಾರೆ ಎಂದು ತಂಡದ ಮೂಲಗಳಿಂದ ತಿಳಿದುಬಂದಿದೆ. 

ಶನಿವಾರ ಬ್ಯಾಟಿಂಗ್‌ ಅಭ್ಯಾಸದಲ್ಲಿ ಕೊಹ್ಲಿ ಬಲಗೈ ಹೆಬ್ಬರಳಿಗೆ ಗಾಯವಾದ ತಕ್ಷಣ ಫಿಸಿಯೊಥೆರಪಿಸ್ಟ್‌ ಪ್ಯಾಟ್ರಿಕ್‌ ಫರ್ಹತ್‌ ಮ್ಯಾಜಿಕ್‌ ಸ್ಪ್ರೇ ಸಿಂಪಡಿಸಿದ್ದಾರೆ. ಬಳಿಕ ಟೇಪ್‌ ಸುತ್ತಿದ್ದು, ಬೆರಳನ್ನು ಮಂಜುಗಡ್ಡೆ ತುಂಬಿದ್ದ ಲೋಟದೊಳಗೆ ಇಟ್ಟುಕೊಂಡೇ ಮೈದಾನದಿಂದ ಹೊರನಡೆದಿದ್ದರು. 

ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದೆನಿಸಿರುವ ಭಾರತ ತಂಡದಲ್ಲಿ ಹಲವು ಆಟಗಾರರು ಗಾಯದ ಸಮಸ್ಯೆ ಎದುರಿಸಿದ್ದಾರೆ. ನ್ಯೂಜಿಲೆಂಡ್‌ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಮೊಣಕೈ ಗಾಯಕ್ಕೆ ಒಳಗಾದ ಆಲ್‌–ರೌಂಡರ್‌ ವಿಜಯ್‌ ಶಂಕರ್‌ ವಿಶ್ರಾಂತಿ ಪಡೆದರು. ಐಪಿಎಲ್‌ ಟೂರ್ನಿಯಿಂದಲೂ ಭುಜನದ ನೋವು ಅನುಭವಿಸುತ್ತಿರುವ ಕೇದರ್‌ ಜಾಧವ್‌, ಕಿವೀಸ್‌ ಹಾಗೂ ಬಾಂಗ್ಲಾದೇಶ ತಂಡಗಳ ವಿರುದ್ಧದ ಅಭ್ಯಾಸ ಪಂದ್ಯಗಳಲ್ಲಿ ಮೈದಾನಕ್ಕಿಳಿಯಲಿಲ್ಲ.

ಜಾಧವ್‌ ಶನಿವಾರ ನೆಟ್ಸ್‌ನಲ್ಲಿ ಬ್ಯಾಟಿಂಗ್‌ ಅಭ್ಯಾಸ ನಡೆಸಿದ್ದು, ಮೊದಲ ಪಂದ್ಯದಲ್ಲಿ ಆಡುವ ಭರವಸೆ ತೋರಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು