ಭಾನುವಾರ, ಮೇ 16, 2021
26 °C

ಆರ್‌ಸಿಬಿಯೊಂದಿಗೆ ಕೋಟಕ್ ಮಹೀಂದ್ರ ಒಪ್ಪಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಐಪಿಎಲ್ ಫ್ರಾಂಚೈಸ್‌ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದೊಂದಿಗೆ ಕೋಟಕ್ ಮಹೀಂದ್ರ ಬ್ಯಾಂಕ್ ಲಿಮಿಟೆಡ್ (ಕೆಎಂಬಿಎಲ್) ಶುಕ್ರವಾರ ಒಪ್ಪಂದ ಮಾಡಿಕೊಂಡಿತು.

ಇದೇ ಮೊದಲ ಬಾರಿಗೆ ಆರ್‌ಸಿಬಿಯೊಂದಿಗೆ ಕೋಟಕ್ ಪಾಲುದಾರಿಕೆ ಮಾಡಿಕೊಂಡಿತು. ಈ ವೇಳೆ ಕೆಎಂಬಿಎಲ್ ‘ಕೋಟಕ್ ಮೈಟೀಮ್ ಇಮೇಜ್ ಕಾರ್ಡ್' ಅನ್ನು ಪರಿಚಯಿಸಿದೆ. ಇದು ಡೆಬಿಟ್ ಮತ್ತು ಕ್ರೆಡಿಟ್ ಸೌಲಭ್ಯವನ್ನು ಹೊಂದಿದ್ದು, ವಿಶೇಷವಾಗಿ ಆರ್‌ಸಿಬಿ
ಅಭಿಮಾನಿಗಳಿಗೆಂದೇ ವಿನ್ಯಾಸಗೊಳಿಸಲಾಗಿದೆ ಎಂದು ಕೆಎಂಬಿಎಲ್ ಹೇಳಿದೆ.

‘ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದೊಂದಿಗೆ ನಮ್ಮ ಪಾಲುದಾರಿಕೆಯನ್ನು ಪ್ರಕಟಿಸಲು ಸಂತಸವಾಗುತ್ತದೆ‘ ಎಂದು ಕೆಎಂಬಿಎಲ್‌ನ ಉತ್ಪನ್ನಗಳು, ಗ್ರಾಹಕರ ಅನುಭವ ವಿಭಾಗದ ಅಧ್ಯಕ್ಷ ಪುನೀತ್ ಕಪೂರ್ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು