ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 | ಜಂಪಾ ಬದಲು ರಾಜಸ್ಥಾನ ಸೇರಿದ ತನುಷ್‌; ಕರ್ನಾಟಕದ ಶರತ್‌ ಟೈಟನ್‌ಗೆ

Published 23 ಮಾರ್ಚ್ 2024, 13:28 IST
Last Updated 23 ಮಾರ್ಚ್ 2024, 13:28 IST
ಅಕ್ಷರ ಗಾತ್ರ

ನವದೆಹಲಿ: ಇತ್ತೀಚಿನ ರಣಜಿ ಟ್ರೋಫಿಯಲ್ಲಿ ಮುಂಬೈ ತಂಡದ ಪ್ರಶಸ್ತಿ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆಫ್‌ ಸ್ಪಿನ್‌ ಆಲ್‌ರೌಂಡರ್‌ ತನುಷ್‌ ಕೋಟ್ಯಾನ್ ಅವರು ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಗಾಯಗೊಂಡ ಸ್ಪಿನ್ನರ್ ಆ್ಯಡಂ ಜಂಪಾ ಸ್ಥಾನದಲ್ಲಿ ಅವರಿಗೆ ಅವಕಾಶ ಲಭಿಸಿದೆ.

ಕೋಟ್ಯಾನ್‌ ಮೂಲಬೆಲೆ ₹20ಲಕ್ಷಕ್ಕೆ ರಾಯಲ್ಸ್‌ ತಂಡ ಸೇರಿಕೊಂಡಿದ್ದಾರೆ ಎಂದು ಐಪಿಎಲ್ ಪ್ರಕಟಿಸಿದೆ. ಆಫ್‌ ಸ್ಪಿನ್ನರ್ ಆಗಿರುವ ಅವರು ಒಂದು ಶತಕ ಸೇರಿದಂತೆ ಕೆಲವು ಅತ್ಯುಪಯಕ್ತ ಇನಿಂಗ್ಸ್‌ ಆಡಿ ಟೂರ್ನಿಯ ಆಟಗಾರ (502 ರನ್, 29 ವಿಕೆಟ್‌) ಗೌರವಕ್ಕೆ ಪಾತ್ರರಾಗಿದ್ದರು.

ಕರ್ನಾಟಕದ ವಿಕೆಟ್‌ ಕೀಪರ್‌–ಬ್ಯಾಟರ್‌ ಬಿ.ಆರ್.ಶರತ್ ಅವರು ₹20 ಲಕ್ಷ ಮೂಲಬೆಲೆಯಲ್ಲಿ ಗುಜರಾತ್ ಟೈಟನ್ ತಂಡ ಸೇರಿಕೊಳ್ಳಲಿದ್ದಾರೆ. ಇತ್ತೀಚೆಗೆ ಬೈಕ್ ಅಪಘಾತದಲ್ಲಿ ಗಾಯಾಳಾದ, ಜಾರ್ಖಂಡ್‌ನ ವಿಕೆಟ್‌ ಕೀಪರ್ ರಾಬಿನ್‌ ಮಿಂಜ್ ಟೂರ್ನಿಗೆ ಅಲಭ್ಯರಾದ ನಂತರ ಈ ಬದಲಾವಣೆ ಆಗಿದೆ. ಶರತ್ 43 ಲಿಸ್ಟ್‌ ‘ಎ’ ಪಂದ್ಯಗಳಲ್ಲಿ ಆಡಿದ್ದಾರೆ. 28 ಟಿ20 ಪಂದ್ಯಗಳನ್ನೂ ಆಡಿದ್ದು 328 ರನ್ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT