ನವದೆಹಲಿ: ಕುಮಾರ ಸಂಗಕ್ಕಾರ ಅವರು ಐಪಿಎಲ್‌ನಲ್ಲಿ ರಾಜಸ್ತಾನ ರಾಯಲ್ಸ್ ತಂಡದ ಮುಖ್ಯ ಕೋಚ್ ಮತ್ತು ಕ್ರಿಕೆಟ್ ವ್ಯವಹಾರಗಳ ನಿರ್ದೇಶಕರಾಗಿ ಮುಂದುವರಿಯಲಿದ್ದಾರೆ.
‘ಸಂಗಕ್ಕಾರ ಅವರು ಕೋಚ್ ಹುದ್ದೆಯಲ್ಲಿ ಮುಂದುವರಿಯಲಿದ್ದು, ಟ್ರೆವರ್ ಪೆನ್ನಿ ಸಹಾಯಕ ಕೋಚ್ ಆಗಿರುವರು’ ಎಂದು ರಾಯಲ್ಸ್ ಫ್ರಾಂಚೈಸ್ ಪ್ರಕಟಣೆಯಲ್ಲಿ ತಿಳಿಸಿದೆ.
‘ಲಸಿತ್ ಮಾಲಿಂಗ ಮತ್ತು ದಿಶಾಂತ್ ಯಾಗ್ನಿಕ್ ಅವರು ಕ್ರಮವಾಗಿ ಬೌಲಿಂಗ್ ಮತ್ತು ಫೀಲ್ಡಿಂಗ್ ಕೋಚ್ ಆಗಿ ಮುಂದುವರಿಯಲಿದ್ದಾರೆ’ ಎಂದಿದೆ.
ಜಾನ್ ಗ್ಲಾಸ್ಟರ್ (ಫಿಸಿಯೊ) ಮತ್ತು ಡಾ.ರಾಬ್ ಯಂಗ್ (ತಂಡದ ವೈದ್ಯ) ಅವರನ್ನೂ ಮುಂದುವರಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.