ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕದಿನ ಕ್ರಿಕೆಟ್‌ಗೆ ಶೋಯಬ್‌ ಮಲಿಕ್‌ ‘ಗುಡ್‌ ಬೈ’

ವಿಶ್ವಕಪ್‌ನಲ್ಲಿ ರನ್‌ ಗಳಿಸಲು ಪರದಾಡಿದ್ದ ಭಾರತದ ಅಳಿಯ
Last Updated 6 ಜುಲೈ 2019, 17:44 IST
ಅಕ್ಷರ ಗಾತ್ರ

ಲಂಡನ್‌: ಪಾಕಿಸ್ತಾನ ಕ್ರಿಕೆಟ್‌ ತಂಡದ ಆಲ್‌ರೌಂಡರ್‌ ಶೋಯಬ್‌ ಮಲಿಕ್‌, ಏಕದಿನ ಮಾದರಿಗೆ ವಿದಾಯ ಹೇಳಿದ್ದಾರೆ.

ವಿಶ್ವಕಪ್‌ ಬಳಿಕ 50 ಓವರ್‌ಗಳ ಕ್ರಿಕೆಟ್‌ನಿಂದ ನಿವೃತ್ತನಾಗಬೇಕೆಂಬ ಆಲೋಚನೆ ಇದೆ ಎಂದು ಹೋದ ವರ್ಷವೇ ಶೋಯಬ್‌ ಹೇಳಿದ್ದರು. ಶುಕ್ರವಾರ ನಡೆದಿದ್ದ ಬಾಂಗ್ಲಾದೇಶ ಎದುರಿನ ಪಂದ್ಯದಲ್ಲಿ ಪಾಕಿಸ್ತಾನ 94ರನ್‌ಗಳಿಂದ ಗೆದ್ದ ನಂತರ ಅವರು ನಿವೃತ್ತಿ ‍‍ಪ್ರಕಟಿಸಿದ್ದಾರೆ. ಟ್ವೆಂಟಿ–20 ಮಾದರಿಯಲ್ಲಿ ಮುಂದುವರಿಯುವುದಾಗಿ ಹೇಳಿದ್ದಾರೆ.

‘ಏಕದಿನ ಕ್ರಿಕೆಟ್‌ನಿಂದ ನಿವೃತ್ತನಾಗುತ್ತಿದ್ದೇನೆ. ನಾನು ತುಂಬಾ ಇಷ್ಟಪಡುವ ಮಾದರಿ ಇದು. ಹೀಗಾಗಿ ನೋವಿನಿಂದಲೇ ಈ ನಿರ್ಧಾರ ಕೈಗೊಂಡಿದ್ದೇನೆ. ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯುವುದು ಮತ್ತು ಮುಂಬರುವ ವಿಶ್ವ ಟ್ವೆಂಟಿ–20 ಟೂರ್ನಿಗೆ ಸಿದ್ಧತೆ ಕೈಗೊಳ್ಳುವ ಉದ್ದೇಶದಿಂದ ಈ ತೀರ್ಮಾನಕ್ಕೆ ಬಂದಿದ್ದೇನೆ’ ಎಂದು ಶೋಯಬ್‌ ಹೇಳಿದ್ದಾರೆ.

‘ಈ ಸಲದ ವಿಶ್ವಕಪ್‌ನಲ್ಲಿ ಪಾಕಿಸ್ತಾನವು ಟ್ರೋಫಿ ಜಯಿಸಲು ನೆರವಾಗಬೇಕೆಂದುಕೊಂಡಿದ್ದೆ. ಆದರೆ ನಿರೀಕ್ಷೆಗೆ ಅನುಗುಣವಾಗಿ ಆಡಲು ಆಗಲಿಲ್ಲ. ಹಿರಿಯ ಆಟಗಾರನ ಜವಾಬ್ದಾರಿ ನಿಭಾಯಿಸಲೂ ಆಗಲಿಲ್ಲ. ಕ್ರಿಕೆಟ್‌ನಲ್ಲಿ ಇವೆಲ್ಲಾ ಸಾಮಾನ್ಯ. ಎರಡು ಅಥವಾ ಮೂರು ಪಂದ್ಯಗಳಿಂದ ಆಟಗಾರನ ಸಾಮರ್ಥ್ಯ ಅಳೆಯಬಾರದು. ಈ ಸಲ ಮೂರು ಪಂದ್ಯಗಳಲ್ಲಾದರೂ ಆಡುವ ಅವಕಾಶ ಸಿಕ್ಕಿತಲ್ಲಾ ಅದಕ್ಕಾಗಿ ಖುಷಿ ಪಡುತ್ತೇನೆ’ ಎಂದು ತಿಳಿಸಿದ್ದಾರೆ.

ಸಾಧನೆ ಹೆಮ್ಮೆ ತಂದಿದೆ
‘ಪಾಕಿಸ್ತಾನದ ಕ್ರಿಕೆಟ್‌ಗೆ ಶೋಯಬ್‌ ಕೊಡುಗೆ ಅಪಾರ. ಅವರ ಸಾಧನೆಯು ಮಗ ಇಜಾನ್‌ ಮತ್ತು ನಾನು ಹೆಮ್ಮೆಯಿಂದ ಬೀಗುವಂತೆ ಮಾಡಿದೆ’ ಎಂದು ಶೋಯಬ್‌ ಅವರ ಪತ್ನಿ, ಭಾರತದ ಟೆನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ ಟ್ವೀಟ್‌ ಮಾಡಿದ್ದಾರೆ.

ಏಕದಿನ ಸಾಧನೆ

ಪಂದ್ಯ: 287

ರನ್‌: 7534

ಗರಿಷ್ಠ: 143

ಸರಾಸರಿ: 34.55

ಸ್ಟ್ರೈಕ್‌ರೇಟ್‌: 81.90

ಶತಕ: 9

ಅರ್ಧಶತಕ: 44

ವಿಕೆಟ್‌: 158

ಉತ್ತಮ: 19ಕ್ಕೆ4

41 ಪಂದ್ಯಗಳಲ್ಲಿ ಪಾಕಿಸ್ತಾನ ತಂಡವನ್ನು ಮುನ್ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT