ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಜ ಟ್ರೋಫಿ: ಚೇತನ್, ಅನಿಶ್ ಶತಕದ ಜೊತೆಯಾಟ

ಮಹಾರಾಜ ಟ್ರೋಫಿ ಸೆಮಿಫೈನಲ್ ಇಂದು: ಹುಬ್ಬಳ್ಳಿಗೆ ಶಿವಮೊಗ್ಗ ಸವಾಲು
Published 27 ಆಗಸ್ಟ್ 2023, 16:28 IST
Last Updated 27 ಆಗಸ್ಟ್ 2023, 16:28 IST
ಅಕ್ಷರ ಗಾತ್ರ

ಬೆಂಗಳೂರು: ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯ ಎರಡು ಸೆಮಿಫೈನಲ್ ಪಂದ್ಯಗಳು ಸೋಮವಾರ ನಡೆಯಲಿವೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಧ್ಯಾಹ್ನ ನಡೆಯಲಿರುವ ಮೊದಲ ಪಂದ್ಯದಲ್ಲಿ ಮನೀಷ್ ಪಾಂಡೆ ನಾಯಕತ್ವದ ಹುಬ್ಬಳ್ಳಿ ಟೈಗರ್ಸ್ ತಂಡವು ಶ್ರೇಯಸ್ ಗೋಪಾಲ್ ನೇತೃತ್ವದ ಶಿವಮೊಗ್ಗ ಲಯನ್ಸ್ ಬಳಗವನ್ನು ಎದುರಿಸಲಿದೆ. ಇನ್ನೊಂದು ಪಂದ್ಯದಲ್ಲಿ ಕರುಣ್ ನಾಯರ್ ನಾಯಕತ್ವದ ಮೈಸೂರು ವಾರಿಯರ್ಸ್ ಮತ್ತು ವೈಶಾಖ ವಿಜಯಕುಮಾರ್ ಮುಂದಾಳತ್ವದ ಗುಲ್ಬರ್ಗ ಮಿಸ್ಟಿಕ್ಸ್‌ ಎದುರು ಮುಖಾಮುಖಿಯಾಗಲಿವೆ.

ಭಾನುವಾರ ಲೀಗ್ ಹಂತದ ಕೊನೆಯ ಎರಡು ಪಂದ್ಯಗಳು ನಡೆದವು. ಅದರಲ್ಲಿ ಗುಲ್ಬರ್ಗ ಮಿಸ್ಟಿಕ್ಸ್ ತಂಡವು 8 ವಿಕೆಟ್‌ಗಳಿಂದ ಮಂಗಳೂರು ಡ್ರ್ಯಾಗನ್ಸ್‌ ವಿರುದ್ಧ ಜಯಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಮಂಗಳೂರು ಡ್ರ್ಯಾಗನ್ಸ್ 19.1 ಓವರ್‌ಗಳಲ್ಲಿ 144 ರನ್‌ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಅಭಿಲಾಷ್ ಶೆಟ್ಟಿ (33ಕ್ಕೆ3) ಅವರ ಅಮೋಘ ಬೌಲಿಂಗ್‌ನಿಂದ ತಂಡವು ಕುಸಿಯಿತು.

ಗುರಿ ಬೆನ್ನತ್ತಿದ ಗುಲ್ಬರ್ಗ ತಂಡವು15.3 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 145 ರನ್‌ ಗಳಿಸಿತು. ಆರಂಭಿಕ ಬ್ಯಾಟರ್ ಎಲ್‌.ಆರ್. ಚೇತನ್ (58; 37ಎ, 4X6, 6X3) ಮತ್ತು ಕೆ.ವಿ. ಅನೀಶ್ (ಔಟಾಗದೆ 72, 42ಎ, 4X5, 6X4) ಮೊದಲ ವಿಕೆಟ್ ಜೊತೆಯಾಟದಲ್ಲಿ 114 ರನ್‌ ಸೇರಿಸಿ ತಂಡದ ಗೆಲುವನ್ನು ಸುಗಮಗೊಳಿಸಿದರು.

ಇನ್ನೊಂದು ಪಂದ್ಯದಲ್ಲಿ  ಶಿವಮೊಗ್ಗ ಲಯನ್ಸ್ ತಂಡವು 11 ರನ್‌ಗಳಿಂದ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಜಯಿಸಿತು. ಟಾಸ್ ಗೆದ್ದ ಬೆಂಗಳೂರು ತಂಡದ ನಾಯಕ ಮಯಂಕ್ ಅಗರವಾಲ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಶಿವಮೊಗ್ಗ ತಂಡವು ಅಭಿನವ್ ಮನೋಹರ್ (ಔಟಾಗದೆ 58; 25ಎ, 4X2) ಮತ್ತು ನಾಯಕ ಶ್ರೇಯಸ್ (43; 23ಎ, 4X3, 6X2) ಅವರ ಉತ್ತಮ ಬ್ಯಾಟಿಂಗ್ ಬಲದಿಂದ 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 192 ರನ್ ಗಳಿಸಿತು.  

ಅದಕ್ಕುತ್ತರವಾಗಿ ಬೆಂಗಳೂರು ತಂಡಕ್ಕೆ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 181 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಸಂಕ್ಷಿಪ್ತ ಸ್ಕೋರು: ಮಂಗಳೂರು ಡ್ರ್ಯಾಗನ್ಸ್: 19.1 ಓವರ್‌ಗಳಲ್ಲಿ 144  (ಬಿ.ಆರ್. ಶರತ್ 38, ತಿಪ್ಪಾರೆಡ್ಡಿ 27, ಅನಿರುದ್ಧ ಜೋಶಿ 46, ಅಭಿಲಾಷ್ ಶೆಟ್ಟಿ 33ಕ್ಕೆ3, ವೈಶಾಖ ವಿಜಯಕುಮಾರ್ 20ಕ್ಕೆ2, ಹಾರ್ದಿಕ್ ರಾಜ್ 24ಕ್ಕೆ2) ಗುಲ್ಬರ್ಗ ಮಿಸ್ಟಿಕ್ಸ್: 15.3 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 145 (ಎಲ್‌.ಆರ್. ಚೇತನ್ 58, ಕೆ.ವಿ. ಅನೀಶ್ ಔಟಾಗದೆ 72, ಕೆ. ಗೌತಮ್ 21ಕ್ಕೆ2) ಫಲಿತಾಂಶ: ಗುಲ್ಬರ್ಗ ಮಿಸ್ಟಿಕ್ಸ್ ತಂಡಕ್ಕೆ 8 ವಿಕೆಟ್‌ಗಳ ಜಯ.

ಶಿವಮೊಗ್ಗ ಲಯನ್ಸ್: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 192 (ರೋಹನ್ ಕದಂ 35, ವಿನಯ್ ಸಾಗರ್ 32, ಅಭಿನವ್ ಮನೋಹರ್ ಔಟಾಗದೆ 58, ಶ್ರೇಯಸ್ ಗೋಪಾಲ್ 43, ತನೀಶ್ ಮಹೇಶ್ 50ಕ್ಕೆ3) ಬೆಂಗಳೂರು ಬ್ಲಾಸ್ಟರ್ಸ್: 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 181 (ಡಿ. ನಿಶ್ಚಲ್ 68, ಸೂರಜ್ ಅಹುಜಾ 29, ಆದಿತ್ಯ 24ಕ್ಕೆ2) ಫಲಿತಾಂಶ: ಶಿವಮೊಗ್ಗ ಲಯನ್ಸ್‌ಗೆ 11 ರನ್‌ಗಳಿಂದ ಜಯ.

ಸೆಮಿಫೈನಲ್ ಇಂದು

ಹುಬ್ಬಳ್ಳಿ ಟೈಗರ್ಸ್–ಶಿವಮೊಗ್ಗ ಲಯನ್ಸ್ (ಮಧ್ಯಾಹ್ನ 1)

ಮೈಸೂರು ವಾರಿಯರ್ಸ್–ಗುಲ್ಬರ್ಗ ಮಿಸ್ಟಿಕ್ಸ್ (ಸಂಜೆ 5.30)

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಕನ್ನಡ, ಫ್ಯಾನ್‌ಕೋಡ್ ಆ್ಯಪ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT